ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೋಮವಾರದಿಂದ ಲಾಕ್ಡೌನ್ ಕೊಂಚ ಸಡಿಲಿಕೆ ಆದೇಶ ಅಧಿಕೃತವಾಗಿ ಹೊರಬಿದ್ದಿದೆ. ಸೋಮವಾರ ಬೆಳಗ್ಗೆ 7 ಗಂಟೆಯಿಂದ ಈ ಸಡಿಲಿಕೆ ಜಾರಿಗೆ ಬರಲಿದೆ ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ. ಬೆಳಗ್ಗೆ 7 ರಿಂದ 7 ರ ತನಕ ಈ ರಿಲೀಫ್ ಇರಲಿದೆ. ಓಡಾಟಕ್ಕೆ ಯಾವುದೇ ಪಾಸ್‌ನ ಅವಶ್ಯಕತೆಯಿಲ್ಲ. ಆದರೆ ಬೇರೆ ಜಿಲ್ಲೆಗಳಿಗೆ ಹೋಗಬೇಕಾದ್ದಲ್ಲಿ ಪಾಸ್ ಬೇಕು. ಬಸ್‌ಗಳ ಓಡಾಟಕ್ಕೆ ಅವಕಾಶ ಇಲ್ಲ. ಕಾರು, ಆಟೋ ರಿಕ್ಷಾಗಳು, ಬೈಕ್‌ಗಳ ಸಂಚಾರಕ್ಕೆ ಅವಕಾಶವಿದೆ.
ಕಂಟೈನ್ಮೆಂಟ್ ಝೋನ್ ಹೊರತುಪಡಿಸಿ ಗ್ರಾಮೀಣ, ನಗರ ಭಾಗಗಳಲ್ಲಿ ಉತ್ಪಾದಕ ಕೈಗಾರಿಕೆಗಳಿಗೆ ಅವಕಾಶ ನೀಡಲಾಗಿದ್ದು, ಐಟಿ, ಹಾರ್ಡ್‌ವೇರ್ ತಯಾರಿ ಮಳಿಗೆಗಳು ತೆರೆಯ ಬಹುದಾಗಿದೆ. ಕಟ್ಟಡ ನಿರ್ಮಾಣ ಕಾಮಗಾರಿಗೆ ಅವಕಾಶ ನೀಡಲಾಗಿದ್ದು ಎಲ್ಲಾ ಸಣ್ಣ ಪುಟ್ಟ ಅಂಗಡಿಗಳು ತೆರೆಯಬಹುದಾಗಿದೆ. ಇ-ಕಾಮಾರ್ಸ್ ಚಟುಚಟಿಕೆ, ಖಾಸಗಿ ಸಂಸ್ಥೆಗಳಿಗೆ ಶೇ 33 ರಷ್ಟು ಸಿಬ್ಬಂದಿಗಳ ಬಳಸಿ ಕಾರ್ಯಾಚರಣೆ ನಡೆಸಬಹುದಾಗಿದೆ.
ಆಸ್ಪತ್ರೆಗಳ ಒಪಿಡಿಗಳು ಕಾರ್ಯಾಚರಣೆ ಮಾಡಲಿದ್ದು, ವೈದ್ಯಕೀಯ ಕ್ಲಿನಿಕ್‌ಗಳು, ಮೆಡಿಕಲ್‌ಗಳು ತೆರೆದಿರಲಿದೆ. ಕಂಟೆನ್ಮೆಂಟ್ ಝೋನ್ ಹೊರತುಪಡಿಸಿ ಉಳಿದ ಕಡೆಗಳಲ್ಲಿ ಆಟೋ ರಿಕ್ಷಾ ಸಂಚಾರಕ್ಕೆ ಅವಕಾಶ ನೀಡಲಾಗಿದ್ದು ಒಬ್ಬ ಚಾಲಕ, ಇಬ್ಬರು ಪ್ರಯಾಣಿಕರಿಗೆ ಅವಕಾಶವಿದೆ. ಟ್ಯಾಕ್ಸಿ, ಕ್ಯಾಬ್‌ಗಳ ಓಡಾಟಕ್ಕೂ ಅವಕಾಶ ನೀಡಲಾಗಿದ್ದು, ಒಬ್ಬ ಚಾಲಕ, ಇಬ್ಬರು ಪ್ರಯಾಣಿಕ ಸಂಚಾರ ಮಾಡಬಹುದಾಗಿದೆ. ಇನ್ನು ಕಾರು ಮೊದಲಾದ ನಾಲ್ಕು ಚಕ್ರದ ವಾಹನಗಳಲ್ಲಿ ಇಬ್ಬರು ಮಾತ್ರ ತೆರಳಬಹುದಾಗಿದೆ. ದ್ವಿಚಕ್ರ ವಾಹನಗಳಲ್ಲಿ ಒಬ್ಬರು ಮಾತ್ರವೇ ತೆರಳಬಹುದುದಾಗಿದೆ.
ಕಂಟೆನ್ಮಟ್ ಝೋನ್ ಹೊರತುಪಡಿಸಿ ಅವಕಾಶ ನೀಡಿದ ಕಾರ್ಯಗಳಿಗೆ ಖಾಸಗಿ ವಾಹನಗಳು ಜಿಲ್ಲೆಯಲ್ಲಿ ಸಂಚಾರ ಮಾಡಬಹುದಾಗಿದ್ದು ಹೊರ ಜಿಲ್ಲೆಗಳಿಗೆ ತೆರಳಬೇಕಾದ್ದಲ್ಲಿ ಪಾಸ್ ಹೊಂದಿರಬೇಕಾಗಿದೆ.
ಜನರು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು, ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್‌ಗಳನ್ನು ಧರಿಸುವುದು ಕಡ್ಡಾಯವಾಗಿದ್ದು ನಿಯಮವನ್ನು ಉಲ್ಲಂಘನೆ ಮಾಡಿದ್ದಲ್ಲಿ ದಂಡನೀಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಜಿಲ್ಲಾಧಿಕಾರಿ ಪ್ರಕಟನೆ ತಿಳಿಸಿದೆ.
ಉಳಿದಂತೆ ಎಲ್ಲಾ ನಿಯಮಗಳು ಲಾಕ್ಡೌನ್ ನಿಯಮಗಳನ್ನೇ ಹೊಂದಿವೆ. ಸೆಲೂನ್, ಸ್ಪಾ, ಬಟ್ಟೆ ಅಂಗಡಿ ಸೇರಿದಂತೆ ಸಾಮಾಜಿಕ, ಸಾಂಸ್ಕೃತಿಕ, ರಾಜಕೀಯ ಧಾರ್ಮಿಕ ಸಮಾರಂಭ ನಡೆಸಲು ಅವಕಾಶ ಇರುವುದಿಲ್ಲ.
ಉಡುಪಿ ಜಿಲ್ಲೆಯಲ್ಲಿ ಹೀಗಿದೆ :
ಉಡುಪಿ ಜಿಲ್ಲೆಯಲ್ಲಿ ಅಂಗಡಿಗಳು ಬೆಳಗ್ಗೆ 7 ರಿಂದ 1 ರ ವರೆಗೆ ತೆರೆದಿರುತ್ತದೆ. ಉಡುಪಿ ಜಿಲ್ಲೆ ಗ್ರೀನ್ ಝೋನ್ ಹಿನ್ನೆಲೆ ಬಸ್ ಓಡಾಟಕ್ಕೆ ಅವಕಾಶ ನೀಡಲು ಸರ್ಕಾರ ಆದೇಶ ನೀಡಿದೆ. ಈ ಹಿನ್ನೆಲೆ ಸರ್ವೆ ನಡೆಸಿ ಅಗತ್ಯ ಇರುವ ಕಡೆ ಮಾತ್ರವೇ ಸದ್ಯ ಬಸ್ಸು ಸಂಚಾರ ನಡೆಸಲು ಚಿಂತನೆ ನಡೆಸಲಾಗಿದೆ.
ಸೋಮವಾರದಿಂದ ಉಡುಪಿಯಲ್ಲಿ ಯಾಂತ್ರಿಕ ಮೀನುಗಾರಿಕೆಗೆ ಅವಕಾಶ ನೀಡಲಾಗಿದ್ದು ಒಂದು ದಿನಕ್ಕೆ ಕೇವಲ 30 ದೋಣಿಗಳು ತೆರಳಬಹುದು. ಕಾರ್ಮಿಕರು ಮನೆಗೆ ವಾಪಾಸ್ ಬರಲು ಸಂಜೆ 5 ರಿಂದ 7 ರವರೆಗೆ ಅವಕಾಶ ನೀಡಲಾಗಿದೆ ಎಂದು ಉಡುಪಿ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಕಾಸರಗೋಡಿನಲ್ಲಿ ಏನಿದೆ ಸ್ಥಿತಿ ? :
ಕಾಸರಗೋಡು ಜಿಲ್ಲೆಯೂ ಆರೆಂಜ್ ಝೋನ್ ಹಿನ್ನೆಲೆಯಲ್ಲಿ ಕೊಂಚ ರಿಲೀಪ್ ನೀಡಲಾಗುತ್ತಿದೆ. ಕೊರೊನಾ ಹಾಟ್ ಸ್ಫಾಟ್ ಪ್ರದೇಶಗಳನ್ನು ಹೊರತುಪಡಿಸಿ ಉಳಿದ ಕಡೆ ಬೆಳಿಗ್ಗೆ 7ರಿಂದ ಸಂಜೆ 5ರ ತನಕ ಅಂಗಡಿಗಳು ತೆರೆಯಲು ಅವಕಾಶ ನೀಡಲಾಗಿದೆ. ಫ್ಯಾಬ್ರಿಕೇಷನ್, ಮರದ ಮಿಲ್, ಪ್ಲೈ ವುಡ್ ಕಾರ್ಖಾನೆ ತೆರೆಯಲು ಅನುಮತಿ ಇದ್ದು , ಸ್ಯಾನಿಟೈಸರ್, ಮಾಸ್ಕ್, ಗ್ಲೌಸ್ ಇತ್ಯಾದಿ ಕಡ್ಡಾಯವಾಗಿದೆ. ಟ್ಯಾಕ್ಸಿ ಓಡಾಟಕ್ಕೆ ಅನುಮತಿ ಇದೆ ಆದರೆ ಅಟೋ ಓಡಾಟಕ್ಕೆ ಅನುಮತಿ ನೀಡಲಾಗಿಲ್ಲ ಎಂದು ಕಾಸರಗೋಡು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.
25.11.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕಾಸರಗೋಡು ಸೇರಿದಂತೆ…
ಅಡಿಕೆ ಬೆಳೆಯಲ್ಲಿ ಪೋಷಕಾಂಶಗಳ ನಿರ್ವಹಣೆಯ ಬಗ್ಗೆ ಡಾ.ಭವಿಷ್ಯ ಅವರು ನೀಡಿರುವ ಮಾಹಿತಿ ಇಲ್ಲಿದೆ..(ಸಂಪೂರ್ಣ…
ಅಡಿಕೆ ಎಲೆಚುಕ್ಕಿ ರೋಗ ನಿರ್ವಹಣೆ ಹೇಗೆ..? ಕೃಷಿ ವಿಚಾರಗೋಷ್ಟಿಯಲ್ಲಿ ಮಾತನಾಡಿರುವ ಆಡಿಯೋ ಇಲ್ಲಿದೆ..
ಕಾಸರಗೋಡು ಸೇರಿದಂತೆ ಕರ್ನಾಟಕದ ರಾಜ್ಯದಾದ್ಯಂತ ಒಣ ಹವೆ ಮುಂದುವರಿಯಲಿದೆ.
ಪರಿಸರ ಜಾಗೃತಿ ಮೂಡಿಸುವ ಬಣ್ಣ ಬಣ್ಣದ ಚಿತ್ತಾರಗಳು, ಬಹು ಉತ್ಸುಕರಾಗಿ ತಮ್ಮ ಕಲ್ಪನೆಯ…
ಪ್ರಕೃತಿ ಸಂರಕ್ಷಿಸುವುದರ ಜೊತೆಗೆ ಆರೋಗ್ಯ ಕಾಪಾಡಿಕೊಳ್ಳುವುದು ಅವಶ್ಯವಾಗಿರುವುದರಿಂದ ಸಾವಯವ ಕೃಷಿಯತ್ತ ಒಲವು ತೋರಬೇಕೆಂದು…