ಸುಬ್ರಹ್ಮಣ್ಯ : ಸಾಮಾಜಿಕ ಬದ್ಧತೆ ವ್ಯಕ್ತಪಡಿಸುವುದು ಇಂದಿನ ಅಗತ್ಯ. ಇದನ್ನು ಎಲ್ಲರು ಬೆಳೆಸಿಕೊಳ್ಳಬೇಕು. ಮತ್ತೊಬ್ಬರಿಗೆ ಸಹಾಯ ಮಾಡುವ ಗುಣ ಬೆಳೆಸಿಕೊಳ್ಳುವುದು ಅತ್ಯವಶ್ಯಕ ಎಂದು ಸೌರಭ ಸ್ನೇಹ ಸಂಗಮದ ಸಂಚಾಲಕಿ ಸೌಮ್ಯ ಬಿ ಪೈ ಹೇಳಿದರು.
ಸುಬ್ರಹ್ಮಣ್ಯದ ಸಾಮಾಜಿಕ ಸಂಸ್ಥೆ ಸೌರಭ ಸ್ನೇಹ ಸಂಗಮ ವತಿಯಿಂದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಾನಡ್ಕ ಯೇನೆಕಲ್ಲು ಇಲ್ಲಿಯ ಎಲ್ಲ ತರಗತಿಗಳ ವಿದ್ಯಾರ್ಥಿಗಳಿಗೆ ಉಚಿತ ಕೊಡೆ ವಿತರಣೆ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಕೊಡೆ ವಿತರಿಸಿ ಮಾತನಾಡಿದರು. ಸರಕಾರೇತರ ಸಂಘ ಸಂಸ್ಥೆಗಳು ಅಸ್ವಿತ್ವದಲ್ಲಿದ್ದು ಸಹಾಯ ಮಾಡುವ ಮನೋಭಾವನೆ ಉಳ್ಳವರು ಇಂತಹ ಸರಕಾರಿ ಶಾಲೆಗಳಿಗೆ ನೆರವು ನೀಡುವುದಕ್ಕೆ ಮುಂದಾಗಬೇಕು ಎಂದು ಅವರು ಸಲಹೆ ನೀಡಿದರು.
ಶಾಲಾ ಎಸ್‍ಡಿಎಂಸಿ ಅಧ್ಯಕ್ಷ ವಿಶ್ವವಾಥ ಗೌಡ ಪೂಜಾರಿ ಮನೆ ಅವರು ಮಾತನಾಡಿ ಸೌರಭ ಸ್ನೇಹ ಸಂಗಮ ಸಂಘವು ಶಿಕ್ಷಣ ಕ್ಷೇತ್ರಕ್ಕೆ ಅದರಲ್ಲೂ ಬಡ ಶಾಲೆಗಳನ್ನು ಗುರುತಿಸಿ ಸಹಾಯ ಮಾಡುತ್ತಿರುವುದು ಶ್ಲಾಘನೀಯ. ಇತರೆ ಸಂಘ ಸಂಸ್ಥೆಗಳಿಗೆ ಮಾದರಿಯಾಗುವ ಕಾರ್ಯಕ್ರಮಗಳನ್ನು ಇನ್ನಷ್ಟು ಮೂಡಿಬರಲಿ ಎಂದು ಹಾರೈಸಿದರು. ಬಳಿಕ ಶಾಲೆಯ ಎಲ್ಲ ವಿದ್ಯಾರ್ಥಿಗಳಿಗೆ ಕೊಡೆಯನ್ನು ವಿತರಿಸಲಾಯಿತು. ವೇದಿಕೆಯಲ್ಲಿ ಹಳೇ ವಿದ್ಯಾರ್ಥಿ ಮರಳೀಧರ, ಸುಬ್ರಹ್ಮಣ್ಯದ ಗೀತಾರಾಮಾಂಜನೇಯ, ಶೈಲಾಜಪ್ರವೀಣ ಉಪಸ್ಥಿತರಿದ್ದರು.
ಮುಖ್ಯಶಿಕ್ಷಕಿ ಜಾನಕಿ ಮಾದನಮನೆ ಸ್ವಾಗತಿಸಿ ವಂದಿಸಿದರು, ಗೌರವ ಶಿಕ್ಷಕಿ ವಿನಿತರಾಣಿ ಸಹಕರಿಸಿದರು. ಶಾಲಾ ಎಸ್‍ಡಿಎಂಸಿ ಸದಸ್ಯರು, ಪೋಷಕರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಅಡಿಕೆ ಬೆಳೆಗಾರರು ಭವಿಷ್ಯದ ದೃಷ್ಟಿಯಿಂದ ಏಕೆ ಜಾಗ್ರತವಾಗಬೇಕು ಎಂದು ಕುಮಾರ ಸುಬ್ರಹ್ಮಣ್ಯ ಮುಳಿಯಾಲ…
ಮೊಗ್ರದಲ್ಲಿ ಕಾಲಾವಧಿ ಜಾತ್ರೆ ನಡೆಯಿತು.
ಸಿರಿಧಾನ್ಯಗಳ ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೃಷಿ ಇಲಾಖೆ “ಸಿರಿಧಾನ್ಯ ಓಟ…
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…