ಸ್ವಉದ್ಯೋಗ : ಬ್ಯಾಂಕ್ ಮೂಲಕ ಸಾಲ-ಸಹಾಯಧನ  ಸೌಲಭ್ಯ

January 23, 2020
8:29 PM

ಮಂಗಳೂರು :- ದಕ್ಷಿಣ ಕನ್ನಡ ಜಿಲ್ಲೆಯ ನಿರುದ್ಯೋಗಿ ಯುವಕ ಮತ್ತು ಯುವತಿಯರಿಗೆ ಸ್ವ ಉದ್ಯೋಗ ಪ್ರಾರಂಭಿಸಲು ಪಿ.ಎಂ.ಇ.ಜಿ.ಪಿ. ಯೋಜನೆ ಅಡಿಯಲ್ಲಿ  ಬ್ಯಾಂಕ್ ನಲ್ಲಿ ಸಾಲ ಅಥವಾ ಸಹಾಯಧನ ಸೌಲಭ್ಯ ಪಡೆಯಲು ಅರ್ಜಿ ಆಹ್ವಾನಿಸಿದೆ.

Advertisement

ಯೋಜನೆಯು ಡಿ.ಐ.ಸಿ/ಕೆ.ವಿ.ಐ.ಸಿ/ಕೆ.ವಿ.ಐ.ಬಿ. ಮೂರು ಇಲಾಖೆಯಲ್ಲಿ ಸೌಲಭ್ಯ ಹೊಂದಿದೆ. ಗ್ರಾಮಾಂತರ ಅಭ್ಯರ್ಥಿಗಳಿಗೆ ಸಿ.ಎಂ.ಇ.ಜಿ.ಪಿ. ಯೋಜನೆ ಅಡಿಯಲ್ಲಿ ಡಿ.ಐ.ಸಿ/ಕೆ.ವಿ.ಬಿ ಎರಡು ಇಲಾಖೆಯಲ್ಲಿ ಸೌಲಭ್ಯ ಹೊಂದಿದೆ.

ಜಿಲ್ಲೆಯಲ್ಲಿ ಕೆಲವೊಂದು ಅನಧಿಕೃತ ವ್ಯಕ್ತಿಗಳು ತಾವು ಈ ಯೋಜನೆಯ ಕನ್‍ಸಲ್ಟೆಂಟ್ ಎಂದು ನಂಬಿಸಿ ಹಣ ವಸೂಲು ಮಾಡಿ ಜಿಲ್ಲೆಯ ಯುವಜನರಿಗೆ ಮೋಸ ಮಾಡುವುದು ಇಲಾಖೆಯ ಗಮನಕ್ಕೆ ಬಂದಿರುತ್ತದೆ. ಆದ್ದರಿಂದ ಈ ಯೋಜನೆಯಲ್ಲಿ ಸ್ವ ಉದ್ಯೋಗ ಕೈಗೊಳ್ಳಲು ಆಸಕ್ತರಿರುವ ಯುವಕ / ಯುವತಿಯರು ಅಂಶಗಳನ್ನು ಗುರುತಿಸಿ ಅರ್ಜಿ ಸಲ್ಲಿಸಬೇಕು.

ಆನ್‍ಲೈನ್ ಪೋರ್ಟಲ್‍ನಲ್ಲಿ ಅರ್ಜಿ ಸಲ್ಲಿಸಲು ಯಾವುದೇ ಶುಲ್ಕವಿರುವುದಿಲ್ಲ, ಅರ್ಜಿ ಸಲ್ಲಿಸಿದ ನಂತರ ನಿಗದಿತ ದಿನಾಂಕದಂದು ಸಂದರ್ಶನ ನಡೆಸಲಾಗುತ್ತದೆ, ಈ ಬಗ್ಗೆ ಅಭ್ಯರ್ಥಿಗಳಿಗೆ ಮುಂಚಿತವಾಗಿ ಸಂದೇಶ (SMS ) ಕಳುಹಿಸಲಾಗುತ್ತದೆ, ಅರ್ಜಿ ಸಲ್ಲಿಕೆಯಾದ ನಂತರ ವಿವಿಧ ಹಂತಗಳ ಪ್ರಗತಿಯನ್ನು ಆನ್‍ಲೈನ್‍ನಲ್ಲಿ ನೋಡಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ ಜಂಟಿ ನಿರ್ದೇಶಕರ ಕಚೇರಿ, ಜಿಲ್ಲಾ ಕೈಗಾರಿಕಾ ಕೇಂದ್ರ, ಇಂಡಸ್ಟ್ರೀಯಲ್ ಎಸ್ಟೇಟ್, ಯೆಯ್ಯಾಡಿ, ದ.ಕ., ಮಂಗಳೂರು. ದೂರವಾಣಿ ಸಂಖ್ಯೆ 0824-2214021 ಸಂಪರ್ಕಿಸಬೇಕು ಎಂದು ಜಂಟೀ ನಿರ್ದೇಶಕರು, ಜಿಲ್ಲಾ ಕೈಗಾರಿಕಾ ಕೇಂದ್ರ, ಮಂಗಳೂರು ಇವರ ಪ್ರಕಟಣೆ ತಿಳಿಸಿದೆ.

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಮೇ.9 | ಪುತ್ತೂರು ಮುಳಿಯದಲ್ಲಿ ಪುದರ್ ದೀತಿಜಿ – ತುಳು ಹಾಸ್ಯ ನಾಟಕ | ಸಂತೋಷದಿಂದ ನಗಲು ಒಂದು ವೇದಿಕೆ
May 9, 2025
7:51 AM
by: ದ ರೂರಲ್ ಮಿರರ್.ಕಾಂ
ಮೇ.11 ಮುಳಿಯ ಕೃಷಿ ಗೋಷ್ಟಿ | ಕೃಷಿ ಬೆಳವಣಿಗೆಗೆ ಸಂವಾದ ವೇದಿಕೆ | ಕೃಷಿ-ಕೃಷಿ ಮಾರುಕಟ್ಟೆ-ಕೃಷಿ ಯಾಂತ್ರೀಕರಣ -ಕೃಷಿ ಬೆಳವಣಿಗೆ |
May 9, 2025
7:46 AM
by: ದ ರೂರಲ್ ಮಿರರ್.ಕಾಂ
ಖಾಸಗಿ ಗೋಶಾಲೆಗಳಿಗೆ ಸಹಾಯಧನಕ್ಕಾಗಿ ಅರ್ಜಿ ಆಹ್ವಾನ
May 4, 2025
7:07 AM
by: The Rural Mirror ಸುದ್ದಿಜಾಲ
ಮೇ 4 ರಂದು ದೇಶಾದ್ಯಂತ ನೀಟ್ ಯುಜಿ ಪರೀಕ್ಷೆ
April 30, 2025
10:29 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group