ಗುತ್ತಿಗಾರು: ಗುತ್ತಿಗಾರು ಗ್ರಾಮ ಪಂಚಾಯತ್ ಹಾಗೂ ವಿವಿಧ ಸಂಘಸಂಸ್ಥೆಗಳ ಆಶ್ರಯದಲ್ಲಿ ಸ್ವಚ್ಛತಾ ಕಾರ್ಯಕ್ರಮ ಸೋಮವಾರ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆ ಬಳಿಕ ಗುತ್ತಿಗಾರು ಪೇಟೆಯಲ್ಲಿ ಸ್ವಚ್ಛತಾ ಕಾರ್ಯಕ್ರಮ ಹಾಗೂ ಕರಪತ್ರ ವಿತರಣೆ ನಡೆಯಿತು. ಗುತ್ತಿಗಾರು ಗ್ರಾಮ ಪಂಚಾಯತ್ ,ಗ್ರಾಮವಿಕಾಸ ಸಮಿತಿ ಗುತ್ತಿಗಾರು , ಪ್ರಾಥಮಿಕ ಆರೋಗ್ಯ ಕೇಂದ್ರ ಗುತ್ತಿಗಾರು ,ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಗುತ್ತಿಗಾರು ,ರಿಕ್ಷಾ ಚಾಲಕ ಮಾಲಕರ ಸಂಘ ಗುತ್ತಿಗಾರು , ವೀರಮಾರುತಿ ಸ್ಪೋರ್ಟ್ಸ್ ಕ್ಲಬ್ ಗುತ್ತಿಗಾರು ,ಶ್ರೀ ಕ್ಷೇತ್ರ ಒಡಿಯೂರು ಗ್ರಾಮವಿಕಾಸ ಸಮಿತಿ ಯೋಜನೆಯ ಸ್ವಸಹಾಯ ಸಂಘಗಳ ಘಟಕ ಸಮಿತಿ ಗುತ್ತಿಗಾರು ,ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸ್ವಸಹಾಯ ಸಂಘಗಳ ಒಕ್ಕೂಟ ಗುತ್ತಿಗಾರು ಹಾಗೂ ನಾಲ್ಕೂರು ಗ್ರಾಮ ,ಅಮರ ಸಂಜೀವಿನಿ ಸ್ವಸಹಾಯ ಸಂಘದ ಗ್ರಾ.ಪಂ ಮಟ್ಟದ ಒಕ್ಕೂಟ ಗುತ್ತಿಗಾರು ,ವರ್ತಕರ ಸಂಘ ಗುತ್ತಿಗಾರು ,ಯುವಕ ಮಂಡಲ ಗುತ್ತಿಗಾರು ,ಆದರ್ಶ ಯೂತ್ ಕ್ಲಬ್ ಹಾಲೆಮಜಲು ಇವುಗಳ ಸಹಕಾರದಿಂದ ಕಾರ್ಯಕ್ರಮ ಆಯೋಜನೆಗೊಂಡಿತ್ತು.
ಗುತ್ತಿಗಾರು ಪೇಟೆಯಲ್ಲಿ ವರ್ತಕರಿಗೆ ಇದೇ ಸಂದರ್ಭ ಸ್ವಚ್ಛತೆಗೆ ವಿವಿಧ ಸೂಚನೆ ನೀಡಲಾಯಿತು. ಪ್ರಮುಖ ಸೂಚನೆ ಹೀಗಿದೆ..
- ತಮ್ಮ ಅಂಗಡಿ ಮುಂದೆ ಸ್ವಚ್ಛತೆಗೆ ಆದ್ಯತೆ ನೀಡುವುದು. ಪ್ರತೀ ಸೋಮವಾರ ಗ್ರಾಮ ಪಂಚಾಯತ್ ತ್ಯಾಜ್ಯ ವಾಹನಕ್ಕೆ ನೀಡಿ ಪರಿಸರ ಸ್ವಚ್ಛತೆಗೆ ಸಹಕರಿಸುವುದು.
- ಸ್ವಚ್ಛತಾ ಕಾರ್ಯಕ್ರಮಗಳಲ್ಲಿ ಸ್ವಯಂ ಸ್ಫೂರ್ತಿಯಿಂದ ಭಾಗವಹಿಸುವುದು
- ಎಲ್ಲಾ ಗ್ರಾಹಕರಿಗೆ ಸ್ವತ: ಚೀಲವನ್ನು ತರುವಂತೆ ಪ್ರೇರೇಪಣೆ ನೀಡುವುದು, ಪ್ಲಾಸ್ಟಿಕ್ ಬಳಕೆ ಕಡಿಮ ಮಾಡುವುದು
- ಕಾನೂನಿನ ಅನುಸರಣೆಗೆ ಸ್ವಯಂಪ್ರೇರಿತ ಆಸಕ್ತಿಯೇ ಆಡಳಿತದ ಜೀವಾಳ