ಸುಳ್ಯ: ಪೌರ ಕಾರ್ಮಿಕರ ದಿನಾಚರಣೆಯ ಪ್ರಯುಕ್ತ ಪೌರ ಕಾರ್ಮಿಕರ ರಜೆಯ ಹಿನ್ನಲೆಯಲ್ಲಿ ದಿನದ ಸ್ವಚ್ಛತೆಗೆ ತೊಡಕಾಗದಂತೆ ಸುಳ್ಯದ ಸ್ವಚ್ಛ ನಗರ ತಂಡ ಸ್ವಚ್ಛತಾ ಕಾರ್ಯವನ್ನು ನೆರವೇರಿಸಿದರು. ಸುಳ್ಯ ಗಾಂಧೀನಗರದಿಂದ ಹಳೆಗೇಟಿನವರೆಗೆ ಸ್ವಚ್ಛ ನಗರ ಸುಳ್ಯ ತಂಡ ಬೆಳಿಗ್ಗೆ 6.30 ರಿಂದ 9 ಗಂಟೆಯವರೆಗೆ ಸ್ವಚ್ಛತಾ ಕಾರ್ಯ ನಡೆಸಿ ಪೌರ ಸೇವೆ ಮಾಡಿದರು. ಒಂದು ದಿನದ ಕಸವೂ ನಾಳೆಗೆ ಕಾರ್ಮಿಕರಿಗೆ ಹೊರೆಯಾಗಬಾರದು ಎಂಬ ಕಳಕಳಿಯಿಂದ ಈ ಕಾರ್ಯ ನಡೆಸಿದರು. ನಗರ ಪಂಚಾಯತ್ ನ ಅಧಿಕಾರಿಗಳೇ ವಾಹನ ಚಾಲಕರಾಗಿಯೂ ಸ್ವಚ್ಛತೆಯಲ್ಲೂ ತಮ್ಮನ್ನು ತೊಡಗಿಸಿಕೊಂಡರು.
ನಗರ ಪಂಚಾಯತ್ ಮುಖ್ಯಾಧಿಕಾರಿ ಮತ್ತಡಿ, ಆರೋಗ್ಯ ಅಧಿಕಾರಿ ರವಿ ಕೃಷ್ಣ, ಸ್ವಚ್ಛ ನಗರ ಸುಳ್ಯ ತಂಡದ ವಿನೋದ್ ಲಸ್ರಾದೋ ,ಲೋಕೇಶ್ ಗುಡ್ಡೆಮನೆ, ವಿಖ್ಯಾತ್ ಬಾರ್ಪಣೆ ಲೋಕೇಶ್ ಕೆರೆಮೂಲೆ, ಶರತ್, ನವೀನ ಕರುಂಬಯ್ಯ, ಎ.ಎಂ.ಭಟ್ , ಕೆ.ವಿ ಮನೋಹರ ,ಇಲ್ಯಾಸ್ ಅಜ್ಜಾವರ, ಸಿದ್ದಿಕ್ ಗೂನಡ್ಕ,ಶರೀಪ್ ಜಟ್ಟಿಪಳ್ಳ, ರಾಮಚಂದ್ರ ಪೆಲ್ತಡ್ಕ ಮತ್ತಿತರರು ಉಪಸ್ಥಿತರಿದ್ದರು.
ಗ್ರಾಮೀಣ ಮಟ್ಟದ ಆರ್ಥಿಕ ಸಹಕಾರ ಸಂಘಗಳ ಪ್ರಮುಖ ಚಟುವಟಿಕೆ ಎಂದರೆ ಸದಸ್ಯರಿಂದ ಠೇವಣಾತಿ…
ಶೀಘ್ರದಲ್ಲೇ ಜಿಲ್ಲಾ ಪಂಚಾಯತ್ ಹಾಗೂ ತಾಲ್ಲೂಕು ಪಂಚಾಯತಿಗಳಿಗೆ ಚುನಾವಣೆ ನಡೆಸಲಾಗುವುದು ಎಂದು ಗ್ರಾಮೀಣಾಭಿವೃದ್ಧಿ…
ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲ್ಲೂಕಿನ ರೈತರೊಬ್ಬರು ಶೂನ್ಯ ಬಂಡವಾಳದಲ್ಲಿ ಅತ್ಯುತ್ತಮ ಇಳುವರಿ ತೆಗೆಯುವ…
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಉಜಿರೆ ಗ್ರಾಮ ಪಂಚಾಯತ್ ಆತ್ಮನಿರ್ಭರ ಯೋಜನೆಯಡಿಯಲ್ಲಿ…
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಕಾವೇರಿ ನದಿ ತೀರದಲ್ಲಿ ಅಸ್ತಿ ವಿಸರ್ಜನೆ ಮಾಡಿ ನದಿ…