ಪುತ್ತೂರು: ರಾಮಕೃಷ್ಣ ಮಿಷನ್ ನ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಸ್ವಚ್ಛಪುತ್ತೂರು ಕಾರ್ಯಕ್ರಮದ ಮೂರನೇ ಹಂತದ ಆರನೇ ಕಾರ್ಯಕ್ರಮ ಪುತ್ತೂರಿನ ನೆಹರು ನಗರದಲ್ಲಿ, ವಿವೇಕಾನಂದ ಕಾಲೇಜಿನ ಸಂಪರ್ಕ ರಸ್ತೆಯ ಎರಡೂ ಬದಿಯಲ್ಲಿ ಭಾನುವಾರ ಜರುಗಿತು.
ವಿವೇಕಾನಂದದ ವಿವಿಧ ಕಾಲೇಜಿನ ಸುಮಾರು ಎಂಟು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು, ಹಲವು ಪಿ.ಜಿಗಳಲ್ಲಿ ವಾಸಿಸುವವರು, ಹಲವು ಅಂಗಡಿಗಳು,ಹೋಟೆಲ್ ,ಜಿಮ್ ಹಾಗೂ ನಾಗರಿಕರನ್ನು ಒಳಗೊಂಡಂತೆ ದಿನನಿತ್ಯ ಹತ್ತು ಸಾವಿರಕ್ಕೂ ಅಧಿಕ ಮಂದಿ ಸಂಚರಿಸುವ ಪ್ರದೇಶ ಇದು. ಇವರೆಲ್ಲರೂ ಶೈಕ್ಷಣಿಕವಾಗಿ ಪ್ರೌಢಿಮೆಯನ್ನು ಪಡೆದಿದ್ದರೂ, ಇವರು ವಾಸಿಸುವ,ದಿನನಿತ್ಯ ಹಾದುಹೋಗುವ ಪ್ರದೇಶದ ಸ್ಥಿತಿಯನ್ನು ಗಮನಿಸಿದಾಗ ಇವರೆಲ್ಲಾ ಶಿಕ್ಷಿತರೇ? ಎಂಬ ಅನುಮಾನ ಶುರುವಾಗುತ್ತದೆ. ಎಲ್ಲೆಂದರಲ್ಲಿ ಕಸವನ್ನು ಬಿಸಾಡುವ ಮೂಲಕ ಅನಾಗರಿಕ ಪ್ರವೃತ್ತಿಯನ್ನು ಮೂಲಕ ಮೆರೆದಿದ್ದಾರೆ!
ಜ್ಯೂಸ್ ಬಾಟಲ್, ನೀರಿನ ಬಾಟಲ್, ಲೇಸ್ ,ಕರ್ಕುರೆ ಇತ್ಯಾದಿ ಕುರುಕು ತಿಂಡಿಗಳ ರಾಶಿ, ಮದ್ಯದ ಬಾಟಲ್ ಗಳಿಂದಲೇ ತುಂಬಿರುವ ಎರಡು ಬದಿಯ ಮೋರಿಗಳೂ ಇವರ ನಿರ್ಲಕ್ಷ್ಯದಿಂದ ಕಸದ ರಾಶಿಯಿಂದ ತುಂಬಿಹೋಗಿ, ಕಸಹಾಕುವ ಸ್ಥಳವಾಗಿ ಮಾರ್ಪಾಡಾಗಿದೆ. ಮಳೆಗಾಲದಲ್ಲಿ ಈ ಅವ್ಯವಸ್ಥೆ ಮುಂದುವರೆದರೆ, ಅದರಿಂದಾಗುವ ತೊಂದರೆ ಹಲವಾರು.ಆದ್ದರಿಂದ ಇದನ್ನು ಮನಗಂಡು ಈ ಬಾರಿ ಈ ಪ್ರದೇಶದಲ್ಲಿ ಸ್ವಚ್ಛತೆಯ ಕುರಿತು ಜನರಲ್ಲಿ ಹಾಗೂ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವುದಕ್ಕಾಗಿ ರಾಮಕೃಷ್ಣ ಮಿಷನ್ ನ ಮಾರ್ಗದರ್ಶನದಲ್ಲಿ ಸ್ವಚ್ಛ ಪುತ್ತೂರು ತಂಡ ನಿರ್ಧರಿಸಿತು.
ಕಾರ್ಯಕ್ರಮ ಪ್ರತಿಬಾರಿಯಂತೆ ಧ್ವಜಾ ಹಾರಿಸುವ ಮತ್ತು ವೇದಮಂತ್ರ ಘೋಷದ ಮೂಲಕ ಪ್ರಾರಂಭವಾಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಸ್ವಚ್ಛ ಪುತ್ತೂರು ತಂಡದ ಹಿರಿಯ ಕಾರ್ಯಕರ್ತ ಎಂ.ಎಸ್ ಭಟ್ ಮಾತನಾಡಿ ಕಳೆದ ಮೂರು ವರ್ಷಗಳಿಂದ ಸ್ವಚ್ಚ ಪುತ್ತೂರು ತಂಡ ಪುತ್ತೂರಿನ ಆಸುಪಾಸಿನ ಪ್ರದೇಶಗಳಲ್ಲಿ ಸ್ವಚ್ಛತೆಯ ಕುರಿತಾಗಿ ಜಾಗೃತಿ ಕಾರ್ಯಕ್ರಮ ನಡೆಸುತ್ತಿದೆ.ಅದರ ಪ್ರತಿಫಲವಾಗಿ ಎಲ್ಲೆಂದರಲ್ಲಿ ಕಸ ಬೀಳುವ ಪ್ರಮಾಣ ಕಡಿಮೆ ಆಗುತ್ತಿದೆ. ಈ ಪ್ರಯತ್ನವನ್ನು ಹೀಗೆ ಮುಂದುವರಿಸೋಣ ಎಂದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಉಪನ್ಯಾಸಕ ಗೋಪಾಲಕೃಷ್ಣ ಭಟ್ ಕಳೆದ ಮೂರು ವರ್ಷಗಳಿಂದ ಸ್ವಚ್ಛ ಪುತ್ತೂರು ತಂಡದ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದೇನೆ. ಜನರಲ್ಲಿ ಸ್ವಚ್ಛತೆಯ ಕುರಿತಾಗಿ ಅರಿವನ್ನು ಮೂಡಿಸುವ ಅಗತ್ಯತೆ ಇನ್ನೂ ಇದೆ. ಸ್ವಚ್ಛತೆ ಮಾಡಿದ ಜಾಗದಲ್ಲೇ ಕಸವನ್ನು ಮತ್ತೆ ಕಂಡಾಗ ಬೇಸರ ಆಗುವುದು ಸಾಮಾನ್ಯ. ಇದರಿಂದ ನಮ್ಮ ಪ್ರಯತ್ನವನ್ನು ನಿಲ್ಲಿಸದೆ, ಎಲ್ಲಾರು ಜೊತೆಗೂಡಿ ಸ್ವಚ್ಛಭಾರತ ಕಲ್ಪನೆಯನ್ನು ಯಶಸ್ವಿಗೊಳಿಸೋಣ ಎಂದು ನುಡಿದರು.
ಈ ಸ್ವಚ್ಛತಾ ಕಾರ್ಯಕ್ರಮದಲ್ಲಿ ಸ್ವಚ್ಛ ಪುತ್ತೂರು ತಂಡದ ಸಂಯೋಜಕ ಜಿ ಕೃಷ್ಣ, ಶಂಕರ ಮಲ್ಯ, ದೇವಿಪ್ರಸಾದ್ ಮಲ್ಯ, ಸುರೇಶ್ ಕಲ್ಲಾರೆ ,ಸುರೇಶ್ ಶ್ರೀಶಾಂತಿ , ದಿನೇಶ್ ಜೈನ್, ಜಯಪ್ರಕಾಶ್, ವಿಜೇತಾ ಬಲ್ಲಾಳ್,ಶ್ರೀಧರ್ ಯು ಕೆ,ಸಂತೋಷ್ ವಾಗ್ಲೆ, ನಾಗೇಶ್ ಕೆಮ್ಮಾಯಿ,ಪುರುಷೋತ್ತಮ, ಹರ್ಷೇಂದ್ರ,ಮನೋಜ್ ಪಡ್ಡಾಯೂರ್,ದಯಾನಂದ ಧನುಷ್,ಮೈತ್ರಿ,ಭಾಗ್ಯ ಸೇರಿದಂತೆ ಸುಮಾರು 45 ಕ್ಕೂ ಹೆಚ್ಚು ಮಂದಿ ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ವರದಿ : ಅರುಣ್ ಕಿರಿಮಂಜೇಶ್ವರ, ದ್ವಿತೀಯ ಬಿ.ಎ,
ವಿವೇಕಾನಂದ ಕಾಲೇಜು ಪುತ್ತೂರು.
ಕಳೆದ ಒಂದು ವಾರದಲ್ಲಿ ಚಾರ್ಮಾಡಿ ಘಾಟ್‌ನಲ್ಲಿ ಉಂಟಾದ ಎರಡನೇ ಕಾಡ್ಗಿಚ್ಚು ಪ್ರಕರಣ ಇದಾಗಿದೆ.…
ಅಡಿಕೆ ಆಮದು ವ್ಯವಹಾರದಲ್ಲಿ ತಪ್ಪು ಮಾಹಿತಿ ನೀಡಿ ವಿದೇಶದಿಂದ ಕಳ್ಳಸಾಗಾಣಿಕೆ ಮಾಡುತ್ತಿದ್ದ ಪ್ರಕರಣದಲ್ಲಿ ತೂತುಕುಡಿಯ…
ಸಾರಡ್ಕದ ಆರಾಧನಾ ಕಲಾಭವನದಲ್ಲಿ ಜ.26 ರಂದು ಕೃಷಿ ಹಬ್ಬ ನಡೆಯಲಿದೆ.ಬೆಳಗ್ಗೆ ಉದ್ಘಾಟನೆಗೊಳ್ಳುವ ಕೃಷಿ…
ಆಮದು ಸುಂಕವನ್ನು ತಪ್ಪಿಸಲು ಹುರಿದ ಅಡಿಕೆಯನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ಹುರಿದ ಅಡಿಕೆಯ ಆಮದು…
ಇತ್ತೀಚಿನ ಅಧ್ಯಯನಗಳ ಪ್ರಕಾರ, ಭಾರತವು ಜಾಗತಿಕವಾಗಿ ಪ್ಲಾಸ್ಟಿಕ್ ತ್ಯಾಜ್ಯದ ಅಗ್ರ ಉತ್ಪಾದಕ ಎಂದು…
115 ವರ್ಷಗಳ ಇತಿಹಾಸ ಇರುವ ಹಾಗೂ ರಾಜ್ಯದಲ್ಲಿ ನಿರ್ಮಾಣವಾದ ಮೊದಲ ಜಲಾಶಯ ವಾಣಿವಿಲಾಸ…