Advertisement
ಸುದ್ದಿಗಳು

ಸ್ವರ್ಣಧಾರ ಕೋಳಿ ಸಾಕಾಣೆ : ಕರಾವಳಿಯಲ್ಲಿ ಹೆಚ್ಚುತ್ತಿರುವ ಆಸಕ್ತಿ

Share

ಮಂಗಳೂರು :-  ಭಾರತೀಯ ಕೃಷಿ ಸಂಶೋಧನಾ ಪರಿಷತ್‍ನ ಅಂಗ ಸಂಸ್ಥೆಯಾದಂತಹ ಮಂಗಳೂರಿನ ಕಂಕನಾಡಿಯಲ್ಲಿರುವ ಕೃಷಿ ವಿಜ್ಞಾನ ಕೇಂದ್ರದಲ್ಲಿ ಸ್ವರ್ಣಧಾರ ಕೋಳಿ ಸಾಕಾಣೆಯ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

Advertisement
Advertisement

ಬೀದರ್‍ ಕರ್ನಾಟಕ ಪಶುವೈದ್ಯಕೀಯ, ಪಶು ಹಾಗು ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯವು ಅಭಿವೃದ್ಧಿ ಪಡಿಸಿದ ಸ್ವದೇಶಿ ತಳಿ ‘ಸ್ವರ್ಣಧಾರ’ ಕೋಳಿಗೆ ಜಿಲ್ಲೆಯಲ್ಲಿ ಬೇಡಿಕೆ ಹೆಚ್ಚುತ್ತಿದ್ದು, ಆಸಕ್ತ ರೈತರಿಗೆ ವೈಜ್ಞಾನಿಕ ರೀತಿಯಲ್ಲಿ ಕೋಳಿ ಸಾಕಾಣೆಮಾಡುವ ಸಲುವಾಗಿ ತರಬೇತಿ ನೀಡಲಾಯಿತು. 8 ವಾರಗಳಲ್ಲಿ ಸ್ವರ್ಣಧಾರ ಕೋಳಿಯು 1 ರಿಂದ 1.2 ಕೆ. ಜಿ. ತೂಕ ಬೆಳೆಯುವ ಸಾಮತ್ರ್ಯವಿದ್ದು ನಾಟಿಕೋಳಿಗಳಿಗೆ ಹೊಲಿಸಿದಾಗ ಎರಡುಪಟ್ಟು ಹೆಚ್ಚಾಗಿದೆ. ವಾರ್ಷಿಕವಾಗಿ 180-200 ಮೊಟ್ಟೆ ಉತ್ಪಾದಿಸುವ ಸಾಮಥ್ರ್ಯವಿರುವ ಈ ತಳಿಗೆ ಕರಾವಳಿಯಲ್ಲಿ ರೈತನು ಯಾವುದೇ ಪಂಜರದ ಸಹಾಯವಿಲ್ಲದೆ ಸಣ್ಣಪ್ರಮಾಣದೊಂದಿಗೆ ಹಿತ್ತಲಿನಲ್ಲಿ ಸಾಕಬಹುದಾಗಿದೆ.

ತರಬೇತಿಯನ್ನು ಉದ್ಘಾಟಿಸಿ ಮಾತನಾಡಿದ ಪಶುವೈದ್ಯಾಧಿಕಾರಿ ಡಾ|| ಗುರುಮೂರ್ತಿ ಘಟ್ಟ ಪ್ರದೇಶದಲ್ಲಿ ಪ್ರಚಲಿತವಾಗಿರುವ ಈ ಕೋಳಿಗಳ ಸಾಕಾಣೆಗೆ ಈಗ ಕರಾವಳಿಯಲ್ಲೂ ಆಸಕ್ತಿ ಹೆಚ್ಚುತ್ತಿದೆಯೆಂದು ಅಭಿಪ್ರಾಯಪಟ್ಟರು. ವೈಜ್ಞಾನಿಕವಾಗಿ ಸಾಕುವ ವಿಧಾನಗಳು, ಮರಿ ಮಾಡುವುದು, ಅಹಾರ ನೀಡುವ ಪದ್ಧತಿಗಳು, ರೋಗಗಳ ನಿರ್ವಹಣೆ, ಕೋಳಿ ತ್ಯಾಜದ ನಿರ್ವಹಣೆ ಮತ್ತಿತರ ವಿವರಗಳನ್ನು ರೈತರಿಗೆ ನೀಡಿದರು.

ಇದೇ ಸಂದರ್ಭದಲ್ಲಿ ಕೃಷಿ ವಿಜ್ಞಾನ ಕೇಂದ್ರದ ಮೀನುಗಾರಿಕಾ ವಿಜ್ಞಾನಿ ಡಾ|| ಎನ್. ಚೇತನ್ ಕೋಳಿ ಸಾಕಾಣೆಕೆಯಿಂದ ಆರ್ಥಿಕ ಅಭಿವೃದ್ಧಿಯ ಕುರಿತು ಮಾತನಾಡಿದರು. ಗ್ರಾಮೀಣ ಭಾಗದ ಜನರಿಗೆ ಕಡಿಮೆ ಬಂಡವಾಳದೋಂದಿಗೆ ಸುಲಭವಾಗಿ ಪೌಷ್ಟಿಕ ಅಹಾರವು ದೊರೆಯುವಂತೆ ಮಾಡಲು ಸುಧಾರಿತ ನಾಟಿ ಕೋಳಿ ಸಾಕಾಣೆಮಾಡುವ ಬಗ್ಗೆ ಅರಿವು ಮೂಡಿಸುತ್ತಿರುವ ಕೃಷಿ ವಿಜ್ಞಾನ ಕೇಂದ್ರದ ಯೋಜನೆಗಳನ್ನು ತಿಳಿಸಿಕೊಟ್ಟರು.

ಕಾರ್ಯಕ್ರಮದಲ್ಲಿ ಕೃಷಿ ವಿಜ್ಞಾನ ಕೇಂದ್ರದ ಮಣ್ಣು ಶಾಸ್ತ್ರ ವಿಜ್ಞಾನಿ ಡಾ||. ಮಲ್ಲಿಕಾರ್ಜುನ ಹಾಗು ಇತರೆ ಸಿಬ್ಬಂದಿಯಾದ ಸತೀಶ್, ದೀಪ,   ಸೌಮ್ಯ,   ವಿದ್ಯಾವತಿ, ಸೀತಾರಾಮ್, ಸೊಮಶೇಕರೈಯ್ಯ, ಅಶ್ವಿಥ್ ಉಪಸ್ತಿತರಿದ್ದರು. ತರಬೇತಿಯ ನಂತರ ಸರ್ಕಾರಿ ದರದಲ್ಲಿ ಕೋಳಿಮರಿಗಳನ್ನು ಮಾರಾಟ ಮಾಡಲಾಯಿತು.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಕಡಲಾಮೆಗಳ ಸಂತಾನೋತ್ಪತ್ತಿಗೆ ಅರಣ್ಯ ಇಲಾಖೆ ರಕ್ಷಣೆ | ಬಾವಳ ಕಡಲತೀರದಲ್ಲಿ ಸಂತೋಷದ ಕ್ಷಣ

ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಬಾವಳದಲ್ಲಿ ಕಡಲಾಮೆ ಮೊಟ್ಟೆಯಿಂದ ಹೊರ ಬಂದ…

7 hours ago

ಮಂಗಳೂರಿನಲ್ಲಿ ಸಮುದ್ರ ಮೀನು ಮರಿ ಉತ್ಪಾದನಾ ಕೇಂದ್ರ ಸ್ಥಾಪನೆಗೆ ಸಂಸದರಿಂದ ಒತ್ತಾಯ

ದಕ್ಷಿಣ ಕನ್ನಡದಲ್ಲಿ ಗುಣಮಟ್ಟದ ಮೀನು ಮರಿ ಕೊರತೆ ನೀಗಿಸಲು ಮಂಗಳೂರಿನಲ್ಲಿ Marine Finfish…

7 hours ago

ಕರಾವಳಿ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್ ಆಗ್ರಹ | ಕರಾವಳಿ ಜಿಲ್ಲೆಗಳ ಅಭಿವೃದ್ಧಿಗೆ ಸಮಗ್ರ ದೃಷ್ಟಿ ಅಗತ್ಯ

ಕರಾವಳಿ ಜಿಲ್ಲೆಗಳ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಅಗತ್ಯ ಅನುದಾನವನ್ನು ಮುಂದಿನ ಬಜೆಟ್‌ನಲ್ಲಿ ನೀಡಬೇಕೆಂದು…

1 day ago

ಅಡಿಕೆಯ ಬಗ್ಗೆ ಹೊಸ ಅಧ್ಯಯನ | ಕ್ಯಾನ್ಸರ್‌ ಅಷ್ಟೇ ಅಲ್ಲ… ಹೃದಯ ರೋಗ ಮತ್ತು ಮೆಟಾಬಾಲಿಕ್ ಸಮಸ್ಯೆಯೂ ಇದೆ…!

ಅಡಿಕೆ ಜಗಿಯುವುದು ಕೇವಲ ಸಾಂಪ್ರದಾಯಿಕ ಅಭ್ಯಾಸ ಮಾತ್ರವಲ್ಲ,  ಅದು ಗಂಭೀರ ಆರೋಗ್ಯ ಅಪಾಯಗಳಿಗೆ…

2 days ago

ರಾಜ್ಯದಲ್ಲಿ ಹೆಚ್ಚುತ್ತಿರುವ ಮಾನವ–ವನ್ಯಜೀವಿ ಸಂಘರ್ಷ | ಶಾಶ್ವತ ಪರಿಹಾರಕ್ಕೆ ಕೇಂದ್ರದ ಗಮನ ಸೆಳೆದು ಕುಮಾರಸ್ವಾಮಿ ಮನವಿ

ರಾಜ್ಯದಲ್ಲಿ ಹೆಚ್ಚುತ್ತಿರುವ ಮಾನವ–ವನ್ಯಜೀವಿ ಸಂಘರ್ಷ ಹಾಗೂ ಆನೆ ದಾಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು…

2 days ago

ಮೆಕ್ಕೆಜೋಳ ಖರೀದಿ ಕೇಂದ್ರಗಳಿಂದ 3,412 ರೈತರಿಗೆ ಲಾಭ

ದಾವಣಗೆರೆ ಜಿಲ್ಲೆಯಲ್ಲಿ 5 ಮೆಕ್ಕೆಜೋಳ ಖರೀದಿ ಕೇಂದ್ರಗಳಿಂದ 3,412 ರೈತರು 87,258 ಕ್ವಿಂಟಲ್…

2 days ago