ಸುಳ್ಯ: ಕೆ ವಿ ಜಿ ಪಾಲಿಟೆಕ್ನಿಕ್ ಸುಳ್ಯ ಇದರ ವತಿಯಿಂದ ಸ್ವಾತಂತ್ರ್ಯೋತ್ಸವ ಮತ್ತು ರಕ್ಷಾ ಬಂಧನ ಉತ್ಸವವನ್ನು ಆಚರಿಸಲಾಯಿತು.
ಪ್ರಾಂಶುಪಾಲರಾದ ಬಾಲಕೃಷ್ಣ ಬೊಳ್ಳೂರು ದ್ವಜರೋಹಣಗದು ಮಾತನಾಡಿ ಇಂದು ನಮ್ಮ ರಾಷ್ಟಕ್ಕೆ ಸ್ವಾತಂತ್ರ್ಯ ಸಿಕ್ಕಿದ ಪವಿತ್ರ ದಿನ ಆ ಸ್ವಾತಂತ್ರ್ಯವನ್ನು ಕಾಪಾಡಿಕೊಳ್ಳುವದು ನಮ್ಮೆಲ್ಲರ ಕರ್ತವ್ಯ, ಹಾಗೂ ವಿಶೇಷವಾಗಿ ಇಂದು ರಕ್ಷಾ ಬಂಧನ ಉತ್ಸವದ ಸುದಿನ ನಾವೆಲ್ಲ ರಾಷ್ಟ್ರಿಯ ವಿಚಾರಧಾರೆಗಳನ್ನು ಮೈಗೂಡಿಸಿಕೊಂಡು ಪರಸ್ಪರ ರಕ್ಷೆಯನ್ನು ಕಟ್ಟೋಣ ಎಂದರು.
ಬಳಿಕ ಎಲ್ಲಾ ಉಪನ್ಯಾಸಕ ವೃಂದ, ಸಿಬ್ಬಂದಿ ವರ್ಗ, ರಾಷ್ಟ್ರಿಯ ಸೇವಾ ಯೋಜನೆಯ ಸದಸ್ಯರು, ಮತ್ತು ವಿದ್ಯಾರ್ಥಿ ಸಂಘದ ಸದಸ್ಯರು ಪರಸ್ಪರ ರಕ್ಷೆಯನ್ನು ಕಟ್ಟಿಕೊಳ್ಳುವುದರ ಮೂಲಕ ರಕ್ಷಾ ಬಂಧನ ಉತ್ಸವವನ್ನು ಆಚರಿಸಿದರು.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel