ಸುಳ್ಯ: ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಸುಳ್ಯದ ಇಬ್ಬನಿ ಸಂಘಟನೆ ಹೊರತಂದ ‘ಸ್ವಾತಂತ್ರ್ಯ ಪ್ರಭೆ’ ವಿಶೇಷ ಸಂಚಿಕೆಯ ಬಿಡುಗಡೆ ಕಾರ್ಯಕ್ರಮ ಗಾಂಧಿನಗರ ಇಬ್ಬನಿ ಕಚೇರಿಯಲ್ಲಿ ನಡೆಯಿತು. ಪತ್ರಕರ್ತ ಗಂಗಾಧರ ಕಲ್ಲಪಳ್ಳಿ ವಿಶೇಷ ಸಂಚಿಕೆಯನ್ನು ಬಿಡುಗಡೆ ಮಾಡಿದರು.
ಇಬ್ಬನಿ ಸಂಘಟನೆಯ ಅಧ್ಯಕ್ಷ ಖಾದರ್ ಜಟ್ಟಿಪಳ್ಳ ಅಧ್ಯಕ್ಷತೆ ವಹಿಸಿದ್ದರು. ಇಬ್ಬನಿಯ ಮಾರ್ಗದರ್ಶಕ ರಶೀದ್ ಜಟ್ಟಿಪಳ್ಳ, ಗ್ರೀನ್ ಬಾಯ್ಸ್ ಅಧ್ಯಕ್ಷ ಶಿಯಾಬ್ ಶಾ, ಇಬ್ಬನಿ ಜೊತೆ ಕಾರ್ಯದರ್ಶಿ ಶಾನವಾಝ್, ಖಜಾಂಜಿ ಆಬು ತಾಹಿರ್ ಮತ್ತಿತರರು ಉಪಸ್ಥಿತರಿದ್ದರು.
ರಶೀದ್ ಜಟ್ಟಿಪಳ್ಳ ಸ್ವಾಗತಿಸಿ, ಪ್ರಸ್ತಾವನೆಗೈದರು.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel