ಕಡಬ : ಕಡಬ ತಾಲೂಕು ಸರಸ್ವತೀ ವಿದ್ಯಾಲಯ ಪ್ರೌಢ ಹಾಗೂ ಪದವಿಪೂರ್ವ ವಿದ್ಯಾಲಯದ ವಿದ್ಯಾಥರ್ಿಗಳು ಕಡಬದ ನಾರಾಯಣ ಗೌಡ ಸಂಕೇಶ ಗದ್ದೆಯಲ್ಲಿ ಭತ್ತದ ಕೃಷಿಯಲ್ಲಿ ತೊಡಗಿಸಿಕೊಂಡರು.
ವಿದ್ಯಾಲಯದ ಸಂಚಾಲಕ ವೆಂಕಟ್ರಮಣ ರಾವ್ ಮಂಕುಡೆ ಕೃಷಿ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿ, ಕೃಷಿ ಪದ್ದತಿ ನಮ್ಮ ಹಿರಿಯ ಬಳುವಳಿ. ಇದನ್ನು ಮುಂದುವರಿಸಿವುದು ನಮ್ಮೆಲ್ಲರ ಕರ್ತವ್ಯ. ಜೀವನದಲ್ಲಿ ಸ್ವಾವಲಂಬಿಯಾಗಿ ಬದುಕಲು ಕೃಷಿ ಸಹಕಾರಿಯಾಗಿದೆ ಈ ನಿಟ್ಟನಲ್ಲಿ ವಿದ್ಯಾವಂತರು ಕೃಷಿಯಲ್ಲಿ ತೊಡಗಿಸಿಕೊಳ್ಳಬೇಕು. ವಿದ್ಯಾರ್ಥಿ ದಿಸೆಯಿಂದಲೇ ರೈತರ ಪರಿಶ್ರಮದ ಬಗ್ಗೆ ಅರಿವು ಪಡೆದು ಭವಿಷ್ಯದಲ್ಲಿ ಕೃಷಿ ಕಾಯಕವನ್ನು ಮುಂದುವರಿಸಬೇಕೆಂದರು.
ಆಡಳಿತ ಮಂಡಳಿಯ ನಿರ್ದೇಶಕ ಉಮೇಶ್ ಶೆಟ್ಟಿ ಸಾಯಿರಾಂ ಮಾತನಾಡಿ, ಭತ್ತದ ಕೃಷಿಯಿಂದ ಈ ಮಣ್ಣಿನ ಜೊತೆಗಿನ ಒಡನಾಟ ಸಾಧ್ಯ. ಅದು ಚಿಕಿತ್ಸಕ ರೀತಿಯಲ್ಲಿ ದೇಹದ ಮೇಲೆ ಉತ್ತಮ ಪರಿಣಾಮ ಬೀರಿ ಆರೋಗ್ಯ ಕಾಪಾಡಿಕೊಳ್ಳಲು ಸಹಕಾರಿಯಾಗುತ್ತದೆ. ಜೊತೆಗೆ ಗದ್ದೆ ಇದ್ದಲ್ಲಿ ನೀರಿನ ಅಭಾವ ಕಡಿಮೆ ಎಂದು ಅಭಿಪ್ರಾಯಪಟ್ಟರು.
ಕೃಷಿ ಚಟುವಟಿಕೆಯಲ್ಲಿ ಆಡಳಿತ ಮಂಡಳಿಯ ನಿರ್ದೇಶಕಿ ಪ್ರಮೀಳಾ ಲೋಕೇಶ್, ಪದವಿಪೂರ್ವ ವಿಭಾಗದ ಮುಖ್ಯಸ್ಥ ಮಹೇಶ್ ನಿಟಿಲಾಪುರ, ಪ್ರೌಢ ವಿಭಾಗದ ಮುಖ್ಯಶಿಕ್ಷಕಿ ಶೈಲಶ್ರೀ ರೈ, ಕೃಷಿಕ ನಾರಾಯಣ ಗೌಡ ಸಂಕೇಶ, ಉಪನ್ಯಾಸಕವೃಂದ, ಶಿಕ್ಷಕವೃಂದ, ವಿದ್ಯಾರ್ಥಿಗಳು ಭತ್ತದ ಕೃಷಿಯಲ್ಲಿ ತೊಡಗಿಸಿಕೊಂಡರು.
ಕಾಲೇಜಿನ ಪಕ್ಕದಲ್ಲಿರುವ ಹಡಿಲು ಬಿದ್ದ ಸುಮಾರ 60 ಸೆಂಟ್ಸ್ ಭತ್ತದ ಗದ್ದೆಯಲ್ಲಿ ಈ ವರ್ಷದಿಂದ ಭತ್ತದ ನಾಟಿ ಮಾಡಲು ಪ್ರಾರಂಭಿಸಲಾಗಿದೆ. ಕಟಾವು ಮಾಡುವವರೆಗಿನ ಎಲ್ಲಾ ಪ್ರಕ್ರಿಯೆ ಶಾಲಾ ವಿದ್ಯಾರ್ಥಿಗಳೇ ಮಾಡಲಿದ್ದಾರೆ. ಇಲ್ಲಿ ಬೆಳೆಯಲಾದ ಅಕ್ಕಿಯನ್ನು ಶಾಲಾ ಬಿಸಿಯೂಟಕ್ಕೆ ಉಪಯೋಗಿಸಿಕೊಳ್ಳಲಾಗುವುದು. ಭತ್ತದ ಕೃಷಿಯ ಪ್ರಾಯೋಗಿಕ ಪಾಠ ಮತ್ತು ಕೃಷಿಯತ್ತ ಆಸಕ್ತಿ ಮೂಡಿಸಲು, ರೈತರ ಕಷ್ಟ ಅರಿಯಲು ಇಂತಹ ಕಾರ್ಯಕ್ರಮದಿಂದ ಸಾಧ್ಯ.- ಮಹೇಶ್ ನಿಟಲಾಪುರ , ಪ್ರಾಂಶುಪಾಲ ಸರಸ್ವತೀ ಪದವಿ ಪೂರ್ವ ವಿದ್ಯಾಲಯ,
Advertisement