Advertisement
ಅನುಕ್ರಮ

ಹಪ್ಪಳವೆಂಬ ಉದ್ಯಮದ ಹಿಂದೆ… ಯಶಸ್ಸಿನ ಗುಟ್ಟಿದೆ..!

Share
ಇತ್ತೀಚಿನ ವರ್ಷಗಳಲ್ಲಿ ಮಾರುಕಟ್ಟೆ ಯಲ್ಲಿ ಆಕರ್ಷಕ ರೀತಿಯಲ್ಲಿ ಜೋಡಿಸಿಟ್ಟ ಹಪ್ಪಳಗಳು ಕಾಣಸಿಗುತ್ತವೆ. ಯಾಕೋ ಮೊದಲ ಬಾರಿಗೆ ಅದೂ ಹಲಸಿನ ಹಪ್ಪಳವನ್ನು ಈ ರೀತಿಯಲ್ಲಿ  ಕಂಡಾಗ ಮನಸ್ಸಿಗೆ ಏನೋ ಕಸಿವಿಸಿಯಾಗಿತ್ತು.
ಹಪ್ಪಳದೊಂದಿಗೆ ಬಾಲ್ಯದ ನೆನಪುಗಳು ಕಣ್ಣ ಮುಂದೆ ಒಂದೊಂದಾಗಿ ಬರಲಾರಂಭಿಸುತ್ತವೆ. ಬೇಸಿಗೆ ರಜೆಯಲ್ಲಿ ಮಕ್ಕಳಿಗೆ ಅಜ್ಜಿ ಮನೆಗೆ ಹೋಗುವ ಸಂಭ್ರಮ. ಅಲ್ಲಿ ಮಾಡುವ ಹಪ್ಪಳ, ಮಾಂಬಳ, ಸಂಡಿಗೆ ಕೆಲಸಗಳಿಗೆ ನಾವೂ ಸಾಥ್ ಕೊಡುವ ಉತ್ಸಾಹ.
ಒಂದೊಂದು  ಹಲಸಿನಹಣ್ಣುಗಳಿಗೂ ಬೇರೆ ಬೇರೆ ರೀತಿಯ ಗುಣಗಳು. ಕೆಲವು ಹಲಸಿನ ಕಾಯಿಗಳು ಪಾಯಸ ಕಡುಬುಗಳಿಗೆ ಆಗುವಂತದ್ದಾದರೆ, ಕೆಲವು ಕಾಯಿಗಳು ಸೋಂಟೆ ಹಪ್ಪಳಗಳಿಗೆ  ರುಚಿಯಾಗಿರುತ್ತವೆ. ಇನ್ನೂ ಕೆಲವು ಸಾಂಬಾರು , ಪಲ್ಯ, ದೋಸೆಗಳಿಗೆ ಲಾಯಕ್ ಆಗಿರುತ್ತವೆ.  ಕೆಲವು ಹಸಿ ತಿನ್ನಲು ರುಚಿ. ಬಹುಕಾಲ ಉಳಿಯುವಂತಹ ಹಲಸಿನ ಸೊಳೆಗಳನ್ನು ಉಪ್ಪು ನೀರಿನಲ್ಲಿ ಹಾಕಿ ಇಡುವುದು ರೂಡಿಯಲ್ಲಿದೆ. ಆಕಾಲದಲ್ಲೂ ಕೂಡ ಹಲಸಿನ ವಿವಿಧ ಖಾದ್ಯಗಳನ್ನು ಸವಿಯುವುದು ಇದರಿಂದ ಸಾಧ್ಯ ವಿದೆ.  ನಮ್ಮ ಅಜ್ಜಿ ಈ ಸೊಳೆಗಳನ್ನು ಬಳಸಿ ಹಪ್ಪಳ ಮಾಡಿದ್ದುಂಟು. ಬೇಸಿಗೆಕಾಲದಲ್ಲಿ ಕೆಲವೊಮ್ಮೆ ಹಲಸಿನಕಾಯಿ ಬೆಳೆದಿಲ್ಲದೇ ಇರುವಾಗ  ಉಪ್ಪಿನಲ್ಲಿ ಹಾಕಿಟ್ಟ ಸೊಳೆಯನ್ನು ಬಳಸಿ ಹಪ್ಪಳ ಮಾಡಿ ಬಿಡುತ್ತಿದ್ದರು.  ಅದು ಒಂದು ರೀತಿಯ ಗಮ್ಮತು.
ಅಜ್ಜ ಬೆಳಿಗ್ಗೆಯೇ ಹಲಸಿನಕಾಯಿ ಕೊಯ್ದು ಭಾಗ ಮಾಡಿ ಕೊಟ್ಟು ಬಿಡುತ್ತಿದ್ದರು. ಅಜ್ಜಿ ನಮಗೂ ನಮ್ಮ ಅತ್ತೆಯಂದಿರ ಕೈಗೂ ಈ ಸೊಳೆಗಳನ್ನು ಸರಿಮಾಡುವ ಜವಾಬ್ದಾರಿ ಗಳನ್ನು ಒಪ್ಪಿಸಿ ಬಿಡುತ್ತಿದ್ದರು. ನಾವೆಲ್ಲ ಸೇರಿ ಸರಿಮಾಡಿ ಕೊಟ್ಟರೆ ಅವರು ದೊಡ್ಡ ಒಲೆಯಲ್ಲಿ ಬೇಯಿಸಿ ಬೀಸಲು ತಯಾರು ಮಾಡಿಕೊಡುತ್ತಿದ್ದರು. ಅತ್ತೆಯಂದಿರ ಜೊತೆ ನಾವು ಸೇರಿ ಬೀಸುತ್ತಿದ್ದೆವು. ಆಮೇಲೆ ಉಂಡೆ ಮಾಡಿ ಜೋರು ಬಿಸಿಲು ಬರಬೇಕಾದರೆ ಒತ್ತಿಯಾಗ ಬೇಕೆಂದು ಗಡಿಬಿಡಿ ಮಾಡುತ್ತಿದ್ದರು.. ಅಜ್ಜ ಹಪ್ಪಳ ಒತ್ತುವಾಗ ನಾವು ನಾವು ಎಂದು ಜಗಳವೂ ನಡೆಯುತ್ತಿತ್ತು.
ಒಣಗಿದ ಹಪ್ಪಳವನ್ನು ಅಜ್ಜಿ ಜತನದಿಂದ ಅಟ್ಟಿ ಮಾಡಿ ಜೆಂಗದ ಮೇಲೆ ಶೇಕರಿಸಿಡುತ್ತಿದ್ದದ್ದೇ ಒಂದು ಚೆಂದ. ಗಾಳಿಯಾಡದಂತೆ ಕಾಪಾಡಿ  ಬೇಕೆಂದಾಗ ಅವರೇ ತೆಗೆದು, ಹುರಿದು ಅಥವಾ ಕೆಂಡದಲ್ಲಿ ಸುಟ್ಟು ಕೊಬ್ಬರಿ ತುಂಡಿನೊಂದಿಗೆ‌ ತಿನ್ನಲು ಕೊಟ್ಟರೆ ತಟ್ಟೆ ಖಾಲಿಯಾದದ್ದೇ ಗೊತ್ತಾಗುತ್ತಿರಲಿಲ್ಲ. ಹೀಗೆ ಹಪ್ಪಳ ಹಳ್ಳಿಯ ೮೦ ರ ದಶಕದ ನೆನಪುಗಳನ್ನು ಕಣ್ಣ ಮುಂದೆ ತಂದು ಬಿಟ್ಟಿತು.
ಬದಲಾದ ಕಾಲ ಘಟ್ಟದಲ್ಲಿ ಹಪ್ಪಳ ತಯಾರಿ, ಮಾರಾಟವೊಂದು ಯಶಸ್ವಿ ಉದ್ಯಮ. ಹಲವು ಜನರ ಬದುಕಿನ ದಾರಿ ದೀಪ. ಒಳ್ಳೆಯ ಜಾತಿಯ ಒಂದೆರಡು ಹಲಸಿನ ಮರವಿದ್ದು, ದುಡಿಮೆಯ ಮನಸ್ಸಿದ್ದರೆ ಬದುಕಿನ ದಾರಿ ತಾನೇ ತಾನಾಗಿ ಗೋಚರಿಸುವುದರಲ್ಲಿ ಸಂಶಯವಿಲ್ಲ.
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

ಪತ್ರಿಕೋದ್ಯಮ ಪದವೀಧರೆ, ಲೇಖಕಿ ಗೃಹಿಣಿ,

Published by
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

Recent Posts

ಶಬರಿಮಲೆ ಯಾತ್ರೆ – ಆನ್‌ಲೈನ್ ಕೊಠಡಿ ಬುಕ್ಕಿಂಗ್ ಮಿತಿ 400ಕ್ಕೆ ಹೆಚ್ಚಳ – ಅ. 7ರಿಂದ ನೋಂದಣಿ ಆರಂಭ

ಶಬರಿಮಲೆಯಲ್ಲಿ ತುಲಾ ಮಾಸದ ಪೂಜೆಗೆ ತೆರಳುವ ಭಕ್ತರ ಅನುಕೂಲಕ್ಕಾಗಿ ಆನ್‌ಲೈನ್ ಕೊಠಡಿ ಬುಕ್ಕಿಂಗ್…

1 hour ago

ಬೇವು ಲೇಪಿತ ಯೂರಿಯಾ ಬಳಕೆಯಿಂದ ಕೃಷಿ ಕ್ಷೇತ್ರದಲ್ಲಿ ಮಹತ್ವದ ಸುಧಾರಣೆ

ಕೇಂದ್ರ ಸರ್ಕಾರ 2015ರಲ್ಲಿ ದೇಶೀಯ ಹಾಗೂ ಆಮದು ಯೂರಿಯಾಗೆ ಬೇವು ಲೇಪನ ಕಡ್ಡಾಯಗೊಳಿಸುವ…

2 hours ago

ಮನೆ ಎಂದರೆ ಗೋಡೆಗಳಲ್ಲ , ನೆಮ್ಮದಿಯನ್ನು ಕಟ್ಟುವ ಜೀವನಕಲೆ

ಮನೆತನವನ್ನು ಕಟ್ಟುವುದು ಕೇವಲ ಆರ್ಥಿಕ ಸೌಲಭ್ಯಗಳನ್ನು ಒದಗಿಸುವುದಲ್ಲ; ಕುಟುಂಬದ ಸದಸ್ಯರ ನಡುವೆ ಪ್ರೀತಿ,…

2 hours ago

ಮಿಜೋರಾಂ ಮೂಲಕ 3,103 ಮೆಟ್ರಿಕ್ ಟನ್ ಅಡಿಕೆ ಕಳ್ಳಸಾಗಣೆ ಆರೋಪ – ಮ್ಯಾನ್ಮಾರ್‌ ಜಾಲ ಪತ್ತೆ

ಮ್ಯಾನ್ಮಾರ್‌ನಿಂದ ಮಿಜೋರಾಂ ಮೂಲಕ ಸುಮಾರು ₹1,022 ಕೋಟಿ ಮೌಲ್ಯದ 3,103 ಮೆಟ್ರಿಕ್ ಟನ್…

12 hours ago

ಹವಾಮಾನ ವರದಿ | 08-10-2026 | ಅ.11ರಿಂದ ಮಳೆ ಇಳಿಕೆ; ಅ.15ರಿಂದ ಹಿಂಗಾರು ಮಳೆ ಆರಂಭದ ಸೂಚನೆ

ಅ.11ರಿಂದ ಕರ್ನಾಟಕದ ಹಲವು ಭಾಗಗಳಲ್ಲಿ ಮಳೆ ಪ್ರಮಾಣ ಕಡಿಮೆಯಾಗುವ ಸಾಧ್ಯತೆಯಿದ್ದರೂ, ಅ.14–16ರಿಂದ ಹಿಂಗಾರು…

19 hours ago

ಮನಸ್ಸಿನಲ್ಲಿರುವ ಮಾತು ಹೇಳಿಬಿಡಿ… ಬದುಕಿಗೊಂದು ತಿರುವು ಸಿಗಬಹುದು..!

ಕೃಷಿ ಸೇರಿದಂತೆ ಕುಟುಂಬದ ಬದುಕಿನಲ್ಲಿ ಕಾಣದ ಶ್ರಮವನ್ನು ಗುರುತಿಸಿ ಮೆಚ್ಚುಗೆ ವ್ಯಕ್ತಪಡಿಸುವುದು ಸಂಬಂಧಗಳನ್ನು…

20 hours ago