ಯುವಕರಿಗೆ ಹಲಸು ಉತ್ಪನ್ನ ತಯಾರಿಕಾ ತಂತ್ರಜ್ಞಾನ ನೀಡಲು ಸಿದ್ಧವಾಗಿದೆ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ

June 16, 2019
8:00 AM

ಪುತ್ತೂರು:  ಉತ್ತಮ ಇಳುವರಿ ನೀಡುವ ವಿವಿಧ  ತರಕಾರಿ ತಳಿಗಳು ಬರ್ತಾ ಇವೆ. ಅಷ್ಟೂ ಅಲ್ಲ ವಿವಿಧ ಗುಣಮಟ್ಟದ ಮಾವು, ಹಲಸು ತಳಿಗಳು ಅಭಿವೃದ್ಧಿಯಾಗಿವೆ. ಇದಕ್ಕೆ ಕಾರಣವಾದದ್ದು ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ.ಇದೀಗ ಒಪ್ಪಂದದ ಆಧಾರದಲ್ಲಿ ಹಲಸು ಉತ್ಪನ್ನಗಳ ತಯಾರಿಕೆಯ ತಂತ್ರಜ್ಞಾನ ನೀಡಲೂ ಸಿದ್ಧವಾಗಿದೆ ಈ ಸಂಸ್ಥೆ.‌ಯುವಕರು ಮುಂದೆ ಬಂದರೆ ಭವಿಷ್ಯದ ಯಶಸ್ವಿ  ಉದ್ಯಮ ಇದಾಗಬಹುದು.

Advertisement
Advertisement
Advertisement

 

Advertisement

ಇದೀಗ ಶಂಕರ ಎನ್ನುವ ಹಲಸು ತಳಿಯ ಅಭಿವೃದ್ಧಿಯಲ್ಲಿ , ಹಲಸು ಉತ್ಪನ್ನಗಳ ತಯಾರಿಕೆಗೆ ಪ್ರೋತ್ಸಾಹವನ್ನೂ ನೀಡುವ ಈ ಸಂಸ್ಥೆಯ ನಿರ್ದೇಶಕ ಡಾ. ಎಂ.ಆರ್‌. ದಿನೇಶ್‌  ಹಲಸು ಸಾರ ಮೇಳದಲ್ಲಿ  ಪತ್ರಕರ್ತರ ಜೊತೆ  ಮಾತನಾಡಿದ್ದಾರೆ. ಅದರ ವಿವರ ಹೀಗಿದೆ,

ಹಲಸಿನಲ್ಲಿ  ವಿವಿಧ ತಳಿಗಳು ಬಂದಿವೆ. ಆದರೆ ಇದೀಗ ಗುರುತಿಸಲಾಗಿರುವ ಶಂಕರ ತಳಿ , ಸಿದ್ದು ಹಲಸು ಮಾದರಿಯಲ್ಲೇ ಗುರುತಿಸಿಕೊಂಡಿದೆ. ಆದರೆ ಇತರ ವೈಶಿಷ್ಟ್ಯಗಳು ಇವೆ. ವಿಶೇಷವಾಗಿ ಬಣ್ಣದಲ್ಲಿ  ಗುರುತಿಸಿಕೊಂಡಿದೆ. ದಪ್ಪ ಸೊಳೆ ಇದ್ದು ತಾಮ್ರದ ಬಣ್ಣದ ಇದೆ, ಸಿಹಿ ಜಾಸ್ತಿ ಇದ್ದು ಗಟ್ಟಿಯಾಗಿದೆ. ಹೀಗಾಗಿ ದಿನಗಳ ಕಾಲ ಕೆಡದಂತೆ ಇಡಬಹುದಾಗಿದೆ. ಭಾರೀ ದೊಡ್ಡದಲ್ಲದ ಈ ಹಲಸು ಸುಮಾರು 2.5 ಕೆಜಿಯಿಂದ 3.5 ಕೆಜಿ ಮಾತ್ರವೇ ತೂಗಬಹುದು. ಹೀಗಾಗಿ ಸಾಮಾನ್ಯ ಕುಟುಂಬಕ್ಕೆ ಈ ಹಲಸು ಇಷ್ಟವಾಗುತ್ತದೆ.

Advertisement

 

Advertisement

ಈಗಾಗಲೇ ತಳಿ ಅಭಿವೃದ್ಧಿಗೆ ಮುಂದಾಗಿದ್ದು ಒಂದೇ ಮರ ಇರಿವ ಕಾರಣದಿಂದ ಹಂತ ಹಂತವಾಗಿ ಗಿಡಗಳನ್ನು  ತಯಾರ ಮಾಡಲಾಗುತ್ತಿದೆ. ಇದಕ್ಕಾಗಿ ರೈತರೊಂದಿಗೆ ಮಾತುಕತೆ ನಡೆಸಿದ್ದು ಶೇ.75 ರಷ್ಟು ರೈತರಿಗೆ ಸಂದಾಯವಾದರೆ ಶೇ.25 ರಷ್ಟು ಸಂಸ್ಥೆಗೆ ಲಭ್ಯವಾಗುತ್ತದೆ. ಸಂಸ್ಥೆಯ ಡಾ.ಕರುಣಾಕರನ್ ಅವರು ಈ ತಳಿ ಗುರುತಿಸಿದ್ದು 10 ಸಾವಿರ ಶಂಕರ ತಳಿಯ ಗಿಡ ಮಾಡುವ ಉದ್ದೇಶ ಹೊಂದಲಾಗಿದೆ ಎಂದು  ಡಾ.ದಿನೇಶ್ ಹೇಳುತ್ತಾರೆ.

ಇದಿಷ್ಟೇ ಅಲ್ಲ,  ಹಲಸಿನ  ಜ್ಯೂಸ್, ಬಿಸ್ಕೆಟ್ ಹಾಗೂ ಹಲಸಿನ ಬೀಜದ ಚಾಕೋಲೇಟ್ ಕೂಡಾ ತಯಾರು ಮಾಡಲಾಗಿದ್ದು ಈ ಉತ್ಪನ್ನಗಳನ್ನು ದೆಹಲಿಯಲ್ಲಿ  ಬಿಡುಗಡೆ ಮಾಡಲಾಗಿದೆ. ಈಗ ಈ ಉತ್ಪನ್ನಗಳ ತಂತ್ರಜ್ಞಾನ ನಮ್ಮಲ್ಲಿ ಲಭ್ಯವಿದ್ದು ಒಪ್ಪಂದ ಮಾಡಿಕೊಂಡು ಸಂಸ್ಥೆಯಿಂದ ಪಡೆದುಕೊಳ್ಳಬಹುದು. ಈ ಮೂಲಕ ರೈತರಿಗೂ ಪ್ರಯೋಜನವಾಗುವಂತೆ ಯುವಕರು ಮಾಡಬಹುದು  ಎಂದು ಡಾ.ದಿನೇಶ್ ಹೇಳುತ್ತಾರೆ.

Advertisement

ಕರಾವಳಿ ಜಿಲ್ಲೆಯಲ್ಲೂ ಹಲಸಿನ ಬೆಳೆ ಇದೆ ಆದರೆ ವ್ಯವಸ್ಥಿತವಾಗಿ ಹಲಸಿನ ಬೆಳೆ ಆಗಿಲ್ಲ. ಸುಮಾರು 4 ವರ್ಷಗಳಲ್ಲಿ  ಒಂದೇ ತಳಿಗಳು ಬಂದಾಗ ಹಲಸಿನ ಉತ್ಪನ್ನಗಳು ಇನ್ನಷ್ಟು ತಯಾರು ಮಾಡಲು ಸಾಧ್ಯವಾಗುತ್ತದೆ, ರೈತರಿಗೆ ಪ್ರಯೋಜನವಾಗುತ್ತದೆ ಎನ್ನವ ವಿಶ್ವಾಸ ಡಾ.ದಿನೇಶ್ ಅವರದ್ದು.

ಅಡಿಕೆಗೆ ಪರ್ಯಾಯ ಬೆಳೆ ಹಲಸು ಆಗಬೇಕಾದರೆ ಹಲಸಿನ ಉತ್ಪನ್ನಗಳನ್ನು  ತಯಾರು ಮಾಡಲು ಸಂಸ್ಕರಣೆ ಹಾಗೂ ಮೌಲ್ಯವರ್ಧನೆ ಆಗಬೇಕು. ಇದಕ್ಕಾಗಿ ಸೂಕ್ತ ತಳಿ ಬೇಕು. ಹೀಗಾಗಿ ವ್ಯವಸ್ಥಿತವಾಗಿ ಹಲಸು ಬೆಳೆ ಆದರೆ ಅಡಿಕೆಗೆ ಪರ್ಯಾಯ ಬೆಳೆಯಾಗಬಹುದು. ಈ ಕಾರಣಕ್ಕಾಗಿ ಯುವಕರು ಮುಂದೆ ಬರಬೇಕಿದೆ, ಯುವಕರಿಗೆ ಇದಕ್ಕಾಗಿಯೇ ಸಂಸ್ಥೆ ತರಬೇತಿ ನೀಡುತ್ತಿದೆ ಮಾತ್ರವಲ್ಲ ಜೊತೆಗೆ ನಿಂತು ಸಹಕಾರ ಮಾಡುತ್ತದೆ. ಹಲಸು ಉತ್ಪನ್ನಗಳ ತಯಾರು ಮಾಡುವ ತಂತ್ರಜ್ಞಾನ ನೀಡುವುದರ ಜೊತೆಗೆ 6 ತಿಂಗಳ ಕಾಲ ತಂತ್ರಜ್ಞಾನದ ಮೂಲಕ ಸಹಾಯ ಮಾಡುತ್ತದೆ. ಇದು ಭವಿಷ್ಯದಲ್ಲಿ  ಸಹಾಯವಾಗುತ್ತದೆ ಎನ್ನುತ್ತಾ ಡಾ.ದಿನೇಶ್.

Advertisement

ಹಲಸಿನ ಬಗ್ಗೆ ವಿವಿಧ ಪ್ರಯತ್ನಗಳು ನಡೆಯುತ್ತಿದೆ. ಬಿಸ್ಕೆಟ್ ತಂತ್ರಜ್ಞಾನ ಈಗಷ್ಟೇ 15 ದಿನಗಳ ಹಿಂದೆ ಬಿಡುಗಡೆ ಮಡಲಾಗಿದೆ. ಕಳೆದ ಕೆಲವು ಸಮಯಗಳಿಂದ ಈ ಬಗ್ಗೆ ಅಭಿವೃದ್ಧಿ ನಡೆಸಲಾಗುತ್ತಿತ್ತು ಈಗ ಚಾಕೋಲೇಟ್ ಕೂಡಾ ತಯಾರು ಮಾಡಬಹುದು. ಈ ತಂತ್ರಜ್ಞಾನವನ್ನು  ಯಾರಿಗೆ ಬೇಕಾದರೂ ಕೊಡಬಹುದು. ಇಂತಹ ಹೊಸ ಪ್ರಾಡಕ್ಟ್ ಗಳು ಬಂದಾಗ ರೈತನಿಗೆ ನೆರವಾಗುತ್ತದೆ. ಮುಂದೆ ವೆಜಿಟೇಬಲ್ ಹಲಸು  ಬಗ್ಗೆಯೂ ಪ್ರಯತ್ನ ನಡೆಯುತ್ತಿದೆ ಎನ್ನುತ್ತಾರೆ ಡಾ.ದಿನೇಶ್.

Advertisement

 

ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ (ಐಐಎಚ್‌ಆರ್‌) ಈ ಹಿಂದೆ ಬೆಂಗಳೂರಿನಲ್ಲಿ ಹಲಸು ಮೇಳ, ಮಾವು ಮೇಳ ಸೇರಿದಂತೆ ವಿವಿಧ ತೋಟಗಾರಿಕಾ ಮೇಳವನ್ನು  ಮಾಡಿ ಯಶಸ್ಸು ಕಂಡಿದೆ. ಬೆಂಗಳೂರಿನ  ಚಿತ್ರಕಲಾ ಪರಿಷತ್‌ನಲ್ಲಿ ಮಾವು ಮೇಳ ಮಾಡಿ ಸುಮಾರು 300 ಬಗೆಯ ಮಾವು ಪರಿಚಯ ಮಾಡಿತ್ತು. ಇದರಲ್ಲಿ  ಆಂಧ್ರದ ಪಪ್ಪಾಯ ಮಾವು, ಎಲಿಫೆಂಟ್‌ ಹೆಡ್‌, ಮಹಾರಾಷ್ಟ್ರದ ಎಲಿಫೆಂಟ್‌, ಬಿಹಾರದ ಹತಿಜುಲ್‌, ಕರ್ನಾಟಕದ ಅಪ್ಪೆಮಿಡಿ  ಸೇರಿದಂತೆ 111 ಗ್ರಾಂ ತೂಕದ ಕೆಂಪಿಕುಂಡೆ ಮಾವಿನಿಂದ ಹಿಡಿದು, ಒಂದು ಕೆ.ಜಿ. 800 ಗ್ರಾಂ ತೂಕದ ತಮಿಳುನಾಡಿನ ಸಫೆದ ಮಲಗೋವಗಳು ಕಂಡುಬಂದಿದ್ದವು. ಬೆಮಗಳೂರಿನ ಹಲಸು ಮೇಳದಲ್ಲಿ  ನೂರಾರು ಬಗೆಯ ಹಲಸು ತಳಿಗಳ ವೈವಿಧ್ಯ ಅನಾವರಣವಾಗಿದ್ದರೆ ಅದರಲ್ಲಿ  ಸುಮಾರು 80 ತಳಿಯ ವಿಶೇಷ ಹಲಸುಗಳನ್ನು  ಪ್ರದರ್ಶನ ಮಾಡಲಾಗಿತ್ತು.

Advertisement

 

 

Advertisement

 


 

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಕೋಲಾರದಲ್ಲಿ ಅತೀ ಹೆಚ್ಚು ನಕಲಿ ವೈದ್ಯರು…! | ನಕಲಿ ವೈದ್ಯರ ಕಡಿವಾಣಕ್ಕೆ ಕಟ್ಟುನಿಟ್ಟಿನ ಕ್ರಮ
November 21, 2024
7:36 PM
by: The Rural Mirror ಸುದ್ದಿಜಾಲ
ನಬಾರ್ಡ್ ಸಾಲದ ಮಿತಿ ಹೆಚ್ಚಿಸುವಂತೆ  ಮನವಿ
November 21, 2024
7:32 PM
by: The Rural Mirror ಸುದ್ದಿಜಾಲ
ಕೆಎಂಎಫ್ ನಂದಿನಿ ಉತ್ಪನ್ನಗಳು ಈಗ ದೆಹಲಿಯಲ್ಲಿ ಲಭ್ಯ | 2.5 ಲಕ್ಷ ಲೀಟರ್ ಹಾಲು ದೆಹಲಿಗೆ ಪೂರೈಸಲು ತೀರ್ಮಾನ |
November 21, 2024
7:25 PM
by: ದ ರೂರಲ್ ಮಿರರ್.ಕಾಂ
2025 ರ ಜನವರಿಯಲ್ಲಿ ಮಾನವ ಸಹಿತ ಗಗನಯಾನಕ್ಕೆ ಇಸ್ರೋ ಸಿದ್ಧತೆ
November 20, 2024
4:43 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror