ಮಂಗಳೂರು: ಸೆಕ್ಯುಲರ್’ ಭಾರತದಲ್ಲಿ ಇರುವ ‘ಹಲಾಲ್ ಸರ್ಟಿಫಿಕೇಶನ್’ ವ್ಯವಸ್ಥೆಯು ಹಿಂದೂಗಳ ಮೇಲೆ ಹೇರಿದ ‘ಜಿಝಿಯಾ ತೆರಿಗೆ’ ಆಗಿದೆ ಎಂದು ಹಿಂದೂ ಜನಜಾಗೃತಿ ಸಮಿತಿ ರಾಷ್ಟ್ರೀಯ ವಕ್ತಾರ ರಮೇಶ ಶಿಂದೆ ಹೇಳಿದ್ದಾರೆ.
ಅವರು 9 ನೇ ‘ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನ’ದಲ್ಲಿ ಹಿಂದೂಗಳ ಮೇಲಿನ ಆಘಾತಗಳ ಬಗ್ಗೆ ನಡೆದವಿಚಾರ ಮಂಥನದಲ್ಲಿ ಮಾತನಾಡಿದರು. ಇಂದು ಭಾರತದಲ್ಲಿ ಮಾಂಸಾಹಾರವಷ್ಟೇ ಅಲ್ಲದೇ, ಅನೇಕ ಶಾಖಾಹಾರಿ ಪದಾರ್ಥ, ಸೌಂದರ್ಯವರ್ಧಕಗಳು, ಔಷಧಿಗಳು, ಆಸ್ಪತ್ರೆಗಳು, ವಸತಿಸಮುಚ್ಚಯ, ಡೇಟಿಂಗ್ ಸೈಟ್ ಇತ್ಯಾದಿಗಳಿಗೆ ಇಸ್ಲಾಮೀ ಕಾನೂನಿಗನುಸಾರ ‘ಹಲಾಲ್ ಸರ್ಟಿಫಿಕೇಶನ್’ನ ವ್ಯವಸ್ಥೆಯನ್ನು ಜಾರಿ ಮಾಡಿದೆ. ಇದರಿಂದ ಇಸ್ಲಾಮಿ ಸಂಸ್ಥೆಗಳಿಗೆ ಸಾವಿರಾರು ಕೋಟಿ ರೂಪಾಯಿ ಸಿಗುತ್ತದೆ. ವಾಸ್ತವದಲ್ಲಿ ‘ಸೆಕ್ಯುಲರ್’ ಭಾರತದಲ್ಲಿ ಇಸ್ಲಾಮೀ ಅರ್ಥವ್ಯವಸ್ಥೆಗೆ ಚಾಲನೆ ನೀಡುವ ‘ಹಲಾಲ್ ಸರ್ಟಿಫಿಕೇಶನ್’ ವ್ಯವಸ್ಥೆಯು ಶೇ.80 ರಷ್ಟು ಹಿಂದೂಗಳ ಮೇಲೆ ಹೇರಿದ ‘ಜಿಝಿಯಾ ತೆರಿಗೆ’ಯೇ ಆಗಿದೆ ಎಂದು ರಮೇಶ ಶಿಂದೆಯವರು ಪ್ರತಿಪಾದಿಸಿದರು.
ಅಧಿವೇಶನವು ಜು. 30 ರಿಂದ ಆಗಸ್ಟ್ 2 ಹಾಗೂ 6 ರಿಂದ 9 ರವರೆಗೆ ‘ಆನ್‌ಲೈನ್’ನಲ್ಲಿ ನಡೆಯುತ್ತಿದೆ. ಸಮಿತಿಯ ‘ಯೂ-ಟ್ಯೂಬ್’ ಚಾನೆಲ್ ಹಾಗೂ ಫೇಸ್‌ಬುಕ್ ಮೂಲಕ ಈ ಅಧಿವೇಶನವನ್ನು 68 ಸಾವಿರಕ್ಕಿಂತಲೂ ಹೆಚ್ಚು ಜನರು ನೋಡಿದ್ದಾರೆ.
ಅಧಿವೇಶನದಲ್ಲಿ ತಮಿಳುನಾಡಿನ ಹಿಂದೂ ಮಕ್ಕಲ ಕಛ್ಚಿಯ ಸಂಸ್ಥಾಪಕ ಅಧ್ಯಕ್ಷ ಅರ್ಜುನ ಸಂಪಥ ಮಾತನಾಡುತ್ತಾ, ‘ಕೊರೋನಾ ವಾಹಕ’ರಂತೆ ವರ್ತಿಸಿದ ತಬಲಿಗೀ ಜಮಾತ್‌ನ ದೆಹಲಿಯ ಕಾರ್ಯಕ್ರಮಕ್ಕೆ ತಮಿಳುನಾಡಿನಿಂದ 2,500 ಕ್ಕೂ ಹೆಚ್ಚು ಜನರು ಪಾಲ್ಗೊಂಡಿದ್ದರು. ಅವರು ರಾಜ್ಯಕ್ಕೆ ಮರಳಿದಾಗ ಅವರ ಮೇಲೆ ಕ್ರಮ ಕೈಗೊಳ್ಳುವುದಕ್ಕಿಂತ ಅವರಿಗೆ ಹೆಚ್ಚು ವೈದ್ಯಕೀಯ ಸೌಲಭ್ಯವನ್ನು ನೀಡಲಾಯಿತು. ಗುಣಮುಖರಾದ ನಂತರ ಆಡಳಿತಾಧಿಕಾರಿಗಳು ಅವರನ್ನು ಸ್ವಾಗತಿಸಿದರು. ಅವರಿಗೆ ಕುರಾನ್ ಹಂಚಿದರು. ತದ್ವಿರುದ್ಧ ಈ ಕಾಲಾವಧಿಯಲ್ಲಿ ಹಿಂದೂಗಳಿಗೆ ವೈದ್ಯಕೀಯ ಸೌಲಭ್ಯಗಳನ್ನು ನೀಡುವಾಗ ತಾರತಮ್ಯ ಮಾಡಲಾಗುತ್ತಿತ್ತು’ ಎಂದು ಹೇಳಿದರು.
ತಮಿಳುನಾಡಿನ ಶಿವಸೇನೆಯ ಅಧ್ಯಕ್ಷ ಜಿ. ರಾಧಾಕೃಷ್ಣನ್ ಮಾತನಾಡುತ್ತಾ, ‘ಪೆರಿಯಾರ, ಅದೇರೀತಿ ದ್ರಮುಕನ ಕಾರ್ಯಕರ್ತರು ವಾಕ್ ಸ್ವಾತಂತ್ರ್ಯದ ಹೆಸರಿನಲ್ಲಿ ಹಿಂದೂ ಧರ್ಮ, ಪರಂಪರೆ, ಸಂಸ್ಕೃತಿ, ಸ್ತೋತ್ರ, ಅದೇರೀತಿ ಬ್ರಾಹ್ಮಣ ಸಮಾಜವನ್ನು ಅವಮಾನಿಸಿ ಹಿಂದೂದ್ವೇಷವನ್ನು ಮಾಡುತ್ತಿದ್ದಾರೆ. ಪೆರಿಯಾರನ ಪ್ರತಿಮೆಗೆ ಮಸಿ ಬಳಿಯುವ ಹಿಂದೂಗಳ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ; ಆದರೆ ಹಿಂದೂ ವಿರೋಧಕರ ಮೇಲೆ ಕ್ರಮ ಕೈಗೊಳ್ಳುತ್ತಿಲ್ಲ. ಎಲ್ಲಿ ಧರ್ಮಕ್ಕೆ ಆಘಾತವಾಗುತ್ತದೆಯೋ ಅಲ್ಲಿ ನಾವು ರಸ್ತೆಗಿಳಿಯುವೆವು, ಕಾನೂನಿನ ಮೂಲಕ ಹೋರಾಡುವೆವು’ ಎಂದು ಹೇಳಿದರು.
ಪಾಕಿಸ್ತಾನದಲ್ಲಿ 2 ಸಾವಿರಕ್ಕಿಂತಲೂ ಹೆಚ್ಚು ಹಿಂದೂಗಳಿಗೆ ಭಾರತೀಯ ಪೌರತ್ವ ಕೊಡಿಸುವ ‘ನಿಮಿತ್ತೆಕಮ’ ಸಂಸ್ಥೆಯ ಅಧ್ಯಕ್ಷ ಜಯ ಅಹುಜಾ ಮಾತನಾಡುತ್ತಾ, ‘ಇಮ್ರಾನ್ ಖಾನ್ ಸರಕಾರವು ‘ರಿಯಾಸತ-ಎ-ಮದಿನಾ’ ಅಂದರೆ ‘ಕಾಫಿರಮುಕ್ತ ಭೂಮಿ’ ಈ ಸಂಕಲ್ಪನೆಯ ಅಡಿಯಲ್ಲಿ ಇಂದು ಪಾಕಿಸ್ತಾನದಲ್ಲಿ ಅಳಿದುಳಿದ 70 ಲಕ್ಷ ಹಿಂದೂಗಳ ವಂಶನಾಶ ಮಾಡುವ ಕೃತ್ಯವನ್ನು ಮಾಡುತ್ತಿದೆ. ಪ್ರತಿದಿನ ಹಿಂದೂ ಹುಡುಗಿಯರನ್ನು ಬಲವಂತವಾಗಿ ಅಪಹರಣ, ವಿವಾಹ, ನಂತರ ವೇಶ್ಯಾವಾಟಿಕೆಗೆ ನೂಕಿ ಅವರ ಶೋಷಣೆಯನ್ನು ಮಾಡಲಾಗುತ್ತಿದೆ. ಕೊರೋನಾ ಮಾಹಾಮಾರಿಯ ಕಾಲಾವಧಿಯಲ್ಲಿ ಹಸಿದಿರುವ 1600 ಹಿಂದೂಗಳಿಗೆ ಆಹಾರದ ‘ಕಿಟ್’ಗಳನ್ನು ನೀಡುವ ಬದಲಿಗೆ ಅವರನ್ನು ಮತಾಂತರಿಸಲಾಯಿತು’ ಎಂದು ಹೇಳಿದರು.
ಪಾಕಿಸ್ತಾನಿ ಹಿಂದೂಗಳಿಗಾಗಿ ಕಾರ್ಯ ಮಾಡುವ ಮಿನಾಕ್ಷೀ ಶರಣ ಮಾತನಾಡುತ್ತಾ, ‘ಪಾಕಿಸ್ತಾನದಲ್ಲಿನ ಸಂತ್ರಸ್ತ ಹಿಂದೂಗಳು ಭಾರತದಲ್ಲಿ ಆಶ್ರಯ ಪಡೆಯುತ್ತಿದ್ದಾರೆ; ಅವರು ದೌರ್ಜನ್ಯವನ್ನು ಸಹಿಸಿದರೂ ಧರ್ಮವನ್ನು ಬದಲಾಯಿಸಲಿಲ್ಲ. ಇವರು ನಿಜವಾದ ಪ್ರಾಮಾಣಿಕ ಹಿಂದೂಗಳಾಗಿದ್ದಾರೆ, ಆದರೆ ಅವರು ಭಾರತದಲ್ಲಿ ಮುಖ್ಯ ಪ್ರವಾಹದಲ್ಲಿ ಇನ್ನೂ ಸೇರಿಕೊಂಡಿಲ್ಲ. ಅವರ ಸೆಳೆತ ಹಾಗೂ ಕೌಶಲ್ಯವನ್ನು ನೋಡಿ ಅವರಿಗೆ ಕೆಲಸವನ್ನು ಕೊಡಿಸಬೇಕು’ ಎಂದು ಹೇಳಿದರು.
‘ಪ್ರಜ್ಞತಾ’ ಸಂಸ್ಥೆಯ ಸಹಸಂಸ್ಥಾಪಕರಾದ ಆಶಿಷ ಧರ ಮಾತನಾಡುತ್ತಾ, ನಾವು ರಾಷ್ಟ್ರ-ಧರ್ಮ ಇವುಗಳ ಮೇಲಿನ ಆಘಾತಗಳ ಬಗೆಗಿನ ಮಾಹಿತಿಯನ್ನು ತಲುಪಿಸುವ ಉದ್ದೇಶದಿಂದ ವಿಡಿಯೋವನ್ನು ನಿರ್ಮಿಸಿ ಪ್ರಸಾರ ಮಾಡುತ್ತೇವೆ. ನಿರಾಶ್ರಿತ ಕಾಶ್ಮೀರಿ ಪಂಡಿತರು, ರಾಮ ಮಂದಿರ ನಿರ್ಮಾಣ, ಬಾಂಗ್ಲಾದೇಶಿ ಹಿಂದೂಗಳ ವ್ಯಥೆ ಇತ್ಯಾದಿಗಳ ಬಗೆಗಿನ ಅನೇಕ ವಿಡಿಯೋಗಳಿಂದ ದೊಡ್ಡ ಪ್ರಮಾಣದಲ್ಲಿ ಜಾಗೃತಿಯಾಗಿದೆ ಎಂದು ಹೇಳಿದರು.