ಹವಾಮಾನದ ವ್ಯತ್ಯಾಸ ಕುತೂಹಲಕಾರಿ….!

October 28, 2019
7:28 AM

ಮೊನ್ನೆ ಮೊನ್ನೆ ಕ್ಯಾರ್ ಚಂಡಮಾರುತದ ಭೀತಿ ಕರಾವಳಿಯಲ್ಲಿತ್ತು. ನಂತರ ಈ ಭಯ ದೂರವಾದ ಬಳಿಕ ಇನ್ನೆರಡು ಚಂಡಮಾರುತದ ಭೀತಿಯೂ ಇತ್ತು. ಸದ್ಯ ಈ ಭಯ ದೂರವಾಯಿತು. ಮಳೆ ಇನ್ನೂ ಒಂದೆರಡು ದಿನ ಇರುತ್ತದೆ. ಏಕೆಂದರೆ ಹವಾಮಾನದ ಬದಲಾವಣೆ ಕುತೂಹಲಕಾರಿ. ಹೀಗಾಗಿಯೇ  ಇಲಾಖೆಗಳು ಸನ್ನದ್ಧವಾಗಿರಬೇಕಾದ ಅನಿವಾರ್ಯತೆ ಇರುತ್ತದೆ.  ಮಳೆ ಹಾಗೂ ಹವಾಮಾನದ ವ್ಯತ್ಯಾಸ ಕಿಲೋಮೀಟರ್ ನಲ್ಲಿ ವ್ಯತ್ಯಾಸವಾಗುತ್ತದೆ. ಈ ಲೆಕ್ಕವನ್ನು  ಸುಳ್ಯನ್ಯೂಸ್.ಕಾಂ ನೀಡಬೇಕು ಎಂಬ ಉದ್ದೇಶ ಹೊಂದಿದೆ.

ಸುಳ್ಯ ಹಾಗೂ ದಕ್ಷಿಣ ಕನ್ನಡದಲ್ಲಿ ಅನೇಕ ವರ್ಷಗಳಿಂದ ಮಳೆ ಲೆಕ್ಕ ಹಾಗುವ ಕೃಷಿಕರು, ಆಸಕ್ತರು ಇದ್ದಾರೆ. ಇದಕ್ಕಾಗಿಯೇ ಮಳೆ ಲೆಕ್ಕ ಎಂಬ ವ್ಯಾಟ್ಸಪ್ ಗ್ರೂಪು ರಚನೆ ಮಾಡಿ ಜಿಲ್ಲೆಯ ವಿವಿದೆಡೆ ಮಳೆ ಲೆಕ್ಕವನ್ನು  ಕೃಷಿಕರೇ ಸಂಗ್ರಹಿಸುತ್ತಾರೆ. ಈ ಬಗ್ಗೆ ಮಾಹಿತಿ ಹೀಗಿದೆ…

ಸುಳ್ಯ ತಾಲೂಕಿನ  ಬಾಳಿಲ ಪಿ ಜಿ ಎಸ್ ಎನ್ ಪ್ರಸಾದ್ ಅವರು ಅನೇಕ ವರ್ಷಗಳಿಂದ ಮಳೆಯ ಲೆಕ್ಕ ಹಾಕುತ್ತಿದ್ದಾರೆ.

ಸುಳ್ಯ ತಾಲೂಕಿನ  ಕೊಲ್ಲಮೊಗ್ರದ ಕೇಶವ ಕಟ್ಟ ಅವರು ಕೂಡಾ ಮಳೆ ಲೆಕ್ಕ ಬರೆಯುತ್ತಾರೆ.

ಸುಳ್ಯ ತಾಲೂಕಿನ  ಕಲ್ಲಾಜೆಯ ಶಿಬಿ ಅಬ್ರಹಾಂ ಅವರೂ ಮಳೆ ದಾಖಲೆ ಬರೆಯುತ್ತಾರೆ.

ಸುಳ್ಯ ತಾಲೂಕಿನ  ಹಾಲೆಮಜಲಿನ ಉಣ್ಣಿಕೃಷ್ಣ ಅವರೂ ಮಳೆ ದಾಖಲೆ ಮಾಡುತ್ತಾರೆ

ಸುಳ್ಯ ತಾಲೂಕಿನ ಕಮಿಲ-ಪುಚ್ಚಪ್ಪಾಡಿಯಲ್ಲಿ  ಮಳೆ ಲೆಕ್ಕದ ಆಸಕ್ತಿ ಹೊಂದಿದವರು ಇದ್ದಾರೆ.

ಕಡಬ ತಾಲೂಕಿನ ಕಡಬದಲ್ಲಿನ ನಿವೃತ್ತ ಅರಣ್ಯಾಧಿಕಾರಿ ಸದಾಶಿವ ಭಟ್ ಅವರಲ್ಲಿ  ಮಳೆ ದಾಖಲೆ ಇದೆ

ಬೆಳ್ತಂಗಡಿ ತಾಲೂಕಿನ ಉರುವಾಲಿನ ಡಾ.ಕಿಶನ್ ಅವರು ಅನೇಕ ವರ್ಷಗಳಿಂದ ಮಳೆ ಲೆಕ್ಕ ಇದೆ

ಬಂಟ್ವಾಳ ತಾಲೂಕಿನ ವಿಟ್ಲಯ ಕೆಲಿಂಜದ ವೆಂಕಟಗಿರಿ ಅವರು ಮಳೆ ಲೆಕ್ಕ ಬರೆಯುತ್ತಾರೆ.

ಪೆರ್ಲ ಬಳಿಯ ಸ್ವರ್ಗದ ಪಡ್ರೆಯ ವಿವೇಕ್ ಅವರಲ್ಲಿ ಮಳೆ ಲೆಕ್ಕ ಇದೆ.

ಮುಂದೆ ಇಲ್ಲಿನ ಮಳೆ ದಾಖಲೆಗಳನ್ನು ಇಲ್ಲಿ ಪ್ರಕಟ ಮಾಡುವ ಇರಾದೆ ಇದೆ. ಇನ್ನಷ್ಟು ಮಳೆ ಲೆಕ್ಕ ಬರೆಯುವ ಆಸಕ್ತರಿದ್ದರೆ ಅದನ್ನೂ ಸೇರಿಸಿ ಮಳೆಯ ಮಾಪನ ಮಾಡಬಹುದಾಗಿದೆ. ಏಕೆಂದರೆ ಕಿಲೋಮೀಟರ್ ವ್ಯತ್ಯಾಸದಲ್ಲಿ ಬೀಳುವ ಮಳೆಯಲ್ಲಿ ವ್ಯತ್ಯಾಸ ಇರುತ್ತದೆ. ಹೀಗಾಗಿ ಮಳೆ ದಾಖಲೆ ಮಾಡುವವರು ಇದ್ದರೆ ತಿಳಿಸಿದರೆ ಸುಳ್ಯನ್ಯೂಸ್.ಕಾಂ ಗೆ ಮಾಹಿತಿ ನೀಡಬೇಕಾಗಿ ವಿನಂತಿ.

ಭಾನುವಾರದ ಮಳೆಯ ಲೆಕ್ಕ ಹೀಗಿದೆ:

ಕೊಲ್ಲಮೊಗ್ರ : 14 ಮಿಮೀ

ಕಲ್ಲಾಜೆ : 24 ಮಿಮೀ

ಅಡೆಂಜ-ಉರುವಾಲು : 48 ಮಿಮೀ

ಬಾಳಿಲ : 44 ಮಿಮೀ

ಕಡಬ : 23.5 ಮಿಮೀ

ಪಡ್ರೆ : 54 ಮಿಮೀ

ಕಮಿಲ-ಪುಚ್ಚಪ್ಪಾಡಿ : 27 ಮಿಮೀ

ಕೆಲಿಂಜ-ಕೋಡಪದವು :42 ಮಿಮೀ

ಹಾಲೆಮಜಲು : 29 ಮಿಮೀ

ಸೋಮವಾರ:

ಕೊಲ್ಲಮೊಗ್ರ : 19 ಮಿಮೀ

ಹಾಲೆಮಜಲು : 5 ಮಿಮೀ

ಅಡೆಂಜ-ಉರುವಾಲು : 1 ಮಿಮೀ

ಕಮಿಲ-ಪುಚ್ಚಪ್ಪಾಡಿ : 4 ಮಿಮೀ

 

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ತೀವ್ರ ವಿರೋಧದ ಹಿನ್ನೆಲೆ – ರಾಜ್ಯದಲ್ಲಿ ಗುಟ್ಕಾ ನಿಷೇಧ ಹಿಂತೆಗೆದುಕೊಳ್ಳಲು ಸರ್ಕಾರ ನಿರ್ಧಾರ – ಹೊರಬೀಳದ ಅಧಿಕೃತ ಆದೇಶ..!
August 15, 2026
7:18 AM
by: ದ ರೂರಲ್ ಮಿರರ್.ಕಾಂ
ಎಲ್ ನಿನೊ ಪರಿಣಾಮ 15 ರಾಜ್ಯಗಳ 342 ಜಿಲ್ಲೆಗಳಲ್ಲಿ ಮಳೆ ಕೊರತೆ
August 13, 2026
6:59 AM
by: ದ ರೂರಲ್ ಮಿರರ್.ಕಾಂ
ಕೈಗಾರಿಕಾ ಕೋಳಿ ಸಾಕಾಣಿಕೆ ಆಹಾರ ವಿಷಬಾಧೆಗೆ ಕಾರಣವಾಗುತ್ತಿದೆಯೇ? – ಹೊಸ ಅಧ್ಯಯನದ ಎಚ್ಚರಿಕೆ
August 13, 2026
6:35 AM
by: ದ ರೂರಲ್ ಮಿರರ್.ಕಾಂ
ಹವಾಮಾನ ಬದಲಾವಣೆಯಿಂದ ರೈತರ ರಕ್ಷಣೆಗೆ ಸರ್ಕಾರದ ತಂತ್ರ – 310 ಜಿಲ್ಲೆಗಳು ಅಪಾಯದಲ್ಲಿ, 2,661 ಸಹಿಷ್ಣು ತಳಿಗಳ ಅಭಿವೃದ್ಧಿ
August 12, 2026
8:24 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror