ಸುಳ್ಯ: ಹವ್ಯಕ ವಲಯ ಸುಳ್ಯದ ಆಂಜನೇಯ ಘಟಕದ ಸಭೆ ನ.19 ರಂದು ಉಬರಡ್ಕದ ನಾರಾಯಣ ಭಟ್ ಕುತ್ತಮೊಟ್ಟೆಯವರ ಮನೆಯಲ್ಲಿ ನಡೆಯಿತು.
ಶಂಖನಾದ ಗುರುವಂದನೆಯೊಂದಿಗೆ ಸಭೆ ಪ್ರಾರಂಭವಾಯಿತು. ಗುರಿಕ್ಕಾರರಾದ ರಾಮಕೃಷ್ಣ ನೆಯ್ಯೋಣೆ ಸಭಾಧ್ಯಕ್ಷತೆ ವಹಿಸಿದರು. ವಲಯದ ಅಧ್ಯಕ್ಷರಾದ ಈಶ್ವರಕುಮಾರ್ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿ ವಿವಿಧ ವಿಭಾಗಗಳ ಬಗ್ಗೆ ಮಾಹಿತಿ ನೀಡಿದರು.
ವಲಯ ಕಾರ್ಯದರ್ಶಿ ವಿಷ್ಣುಕಿರಣ್ ನೀರಬಿದಿರೆ ಮಾಹಿತಿ ನೀಡಿದರು. ಘಟಕ ಸಂಯೋಜಕರಾದ ಗೋಪಾಲಕೃಷ್ಣ ಭಟ್, ವಲಯ ದಿಗ್ ದರ್ಶಕರಾದ ಸುಬ್ರಮಣ್ಯ ಭಟ್ ದಂಬೆಮೂಲೆ ಸಲಹೆ ಸೂಚನೆಗಳನ್ನು ನೀಡಿದರು. ಘಟಕ ನಿರ್ದೇಶಕರಾಗಿ ಮಹಾಲಿಂಗೇಶ್ವರ ಭಟ್ ಕೂಟೇಲು ಇವರನ್ನು ಆರಿಸಲಾಯಿತು. ರಾಮಜಪ ಶಾಂತಿಮಂತ್ರದೊಂದಿಗೆ ಸಭೆ ಮುಕ್ತಾಯವಾಯಿತು.
ಅಡಿಕೆ ಬೆಳೆಗಾರರು ಭವಿಷ್ಯದ ದೃಷ್ಟಿಯಿಂದ ಏಕೆ ಜಾಗ್ರತವಾಗಬೇಕು ಎಂದು ಕುಮಾರ ಸುಬ್ರಹ್ಮಣ್ಯ ಮುಳಿಯಾಲ…
ಮೊಗ್ರದಲ್ಲಿ ಕಾಲಾವಧಿ ಜಾತ್ರೆ ನಡೆಯಿತು.
ಸಿರಿಧಾನ್ಯಗಳ ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೃಷಿ ಇಲಾಖೆ “ಸಿರಿಧಾನ್ಯ ಓಟ…
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…