ಪುತ್ತೂರು: ಸಾಮಾಜಿಕ, ಧಾರ್ಮಿಕ ಕಾರ್ಯದ ಮೂಲಕ ಗುರುತಿಸಿಕೊಂಡಿರುವ ಉದ್ಯಮಿ, ರೈ ಎಸ್ಟೇಟ್ಸ್ ಎಜ್ಯುಕೇಶನಲ್ ಚಾರಿಟೇಬಲ್ ಟ್ರಸ್ಟ್ ನ ಮುಖ್ಯಸ್ಥರಾದ ಅಶೋಕ್ ಕುಮಾರ್ ರೈ ಕೋಡಿಂಬಾಡಿಯವರಿಂದ ಪ್ರೇರಣೆಗೊಂಡ ಯುವಕರು ರಚಿಸಿದ ಅಶೋಕ್ ಕುಮಾರ್ ರೈ ಅಭಿಮಾನಿ ಬಳಗ ಎ.ಆರ್ ವಾರಿಯರ್ಸ್ ಮೂಲಕ ಇತ್ತೀಚೆಗೆ ಮೃತಪಟ್ಟ ಹಿಂಜಾವೇ ಕಾರ್ಯಕರ್ತ ಕಾರ್ತಿಕ್ ಸುವರ್ಣ ಮೇರ್ಲರ ಸವಿನೆನಪುಗಳ ಜೊತೆಗೆ ಪ್ರತಿ ತಿಂಗಳು ಒಂದು ಅಶಕ್ತ ಕುಟುಂಬಕ್ಕೆ ಆಹಾರ ಧಾನ್ಯ ನೀಡುವ ಯೋಜನೆಯ ಪ್ರಥಮ ಹಂತವಾಗಿ ಕಳೆದ ಕೆಲ ದಿನಗಳ ಹಿಂದೆ ಅಪಘಾತದಲ್ಲಿ ಮೃತಪಟ್ಟ ಪುತ್ತೂರು ತಾಲೂಕಿನ ಬೀರಾವು ನಿವಾಸಿ ಹರೀಶ್ ಅವರ ಮನೆಗೆ ಆಹಾರ ಧಾನ್ಯಗಳನ್ನು ಎ.ಆರ್ ವಾರಿಯರ್ಸ್ ನ ಸದಸ್ಯರು ಒದಗಿಸಿದರು.
ಈ ಸಂದರ್ಭದಲ್ಲಿ ಪ್ರಜ್ವಲ್ ರೈ ಸವಣೂರು, ಧನು ಪಟ್ಲ ಕಲ್ಲೇಗ, ಕಮಲ್ ಕುಲಾಲ್, ಸುಜಿತ್ ಬಂಗೇರ ಸಂಟ್ಯಾರ್, ಪ್ರಜನ್ ರೈ ತೊಟ್ಲ, ಭರತ್ ಶೆಟ್ಟಿ, ರಾಕೇಶ್ ಈಶ್ವರಮಂಗಲ, ಮನೋಜ್ ಸಂಟ್ಯಾರ್ ಉಪಸ್ಥಿತರಿದ್ದರು. ಎ ಆರ್ ವಾರಿಯರ್ಸ್ ಬಳಗದ ಮೂಲಕ ಇತ್ತೀಚೆಗೆ ನೂರಾರು ಯುವಕರು ಸೇರಿ ನೆರೆ ಪೀಡಿತ ಪ್ರದೇಶವಾದ ಬೆಳ್ತಂಗಡಿ ತಾಲೂಕಿನ ದಿಡುಪೆಯಲ್ಲಿ ಶ್ರಮದಾನ ಕಾರ್ಯ ಮಾಡಿತ್ತು.
ದೇಶದಲ್ಲಿ 19 ರಾಜ್ಯಗಳಲ್ಲಿ 9.25 ಕೋಟಿ ರೈತ ಐಡಿ ನಿರ್ಮಾಣವಾಗಿದೆ. ಮುಂದಿನ 6…
ಬೇಸಿಗೆ ರಜೆಯಲ್ಲಿ ಮಕ್ಕಳ ಸುರಕ್ಷತೆ ಬಗ್ಗೆ ಪೋಷಕರಿಗೆ ತುಮಕೂರು ಪೊಲೀಸ್ ಎಚ್ಚರಿಕೆ ನೀಡಿದೆ.…
ಕರ್ನಾಟಕದಲ್ಲಿ ಏಪ್ರಿಲ್ 5ರವರೆಗೆ ಗುಡುಗು ಸಹಿತ ಮಳೆಯ ಚಟುವಟಿಕೆ ಮುಂದುವರಿಯಲಿದೆ. ಏಪ್ರಿಲ್ 10ರಿಂದ…
ರೈತರ ಮಕ್ಕಳಿಗೆ 10 ತಿಂಗಳ ತೋಟಗಾರಿಕೆ ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ. ದಕ್ಷಿಣ ಕನ್ನಡ…
ಮಂಗಳೂರು ಅಡಿಕೆ ಮಾರುಕಟ್ಟೆಯಲ್ಲಿ ಹೊಸ ಅಡಿಕೆ ₹500 ಮತ್ತು ಹಳೆ ಅಡಿಕೆ ₹555…
ರಸ್ತೆ ಬದಿ ಕಸ ಎಸೆಯುವವರಿಗೆ ದಂಡ ವಿಧಿಸಲಾಗುತ್ತದೆ, ಪಾವತಿಸದಿದ್ದರೆ FIR ದಾಖಲಾಗುತ್ತದೆ. ಗ್ರಾಮ…