ಪುತ್ತೂರು:ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಧಾರ್ಮಿಕ ಉತ್ಸವಗಳಲ್ಲಿ ಅಯೋಗ್ಯ ಕೃತಿಗಳನ್ನು ತಡೆಗಟ್ಟುವ ಬಗ್ಗೆ ಪುತ್ತೂರಿನ ಪೋಲಿಸ್ ನಿರೀಕ್ಷಕರಿಗೆ ಮತ್ತು ಉಪ್ಪಿನಂಗಡಿಯ ಪೋಲಿಸ್ ಉಪನಿರೀಕ್ಷಕರಿಗೆ ಮನವಿ ಮಾಡಲಾಯಿತು. ಪುತ್ತೂರಿನಲ್ಲಿ ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಪುತ್ತೂರು ಪೋಲಿಸ್ ನಿರೀಕ್ಷಕರಾದ ತಿಮ್ಮಪ್ಪ ನಾಯ್ಕ ಮತ್ತು ಉಪ್ಪಿನಂಗಡಿ ಪೋಲೀಸ್ ಉಪನಿರೀಕ್ಷಕರಾದ ನಂದಕುಮಾರ್ ಎಂ.ಎಂ ಇವರಿಗೆ ಧಾರ್ಮಿಕ ಉತ್ಸವಗಳಲ್ಲಿ ನಡೆಯುವ ಅಯೋಗ್ಯ ಕೃತಿಗಳನ್ನು ತಡೆಗಟ್ಟಬೇಕೆಂದು ಮನವಿ ನೀಡಲಾಯಿತು.ಈ ಸಂದರ್ಭದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಕಾರ್ಯಕರ್ತರು ಉಪಸ್ಥಿತರಿದ್ದರು.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel