ಬೆಳ್ಳಾರೆ: ಮಾತು ಜನರನ್ನು ಮೋಡಿಗೊಳಿಸುವಷ್ಟು ಆಕರ್ಷ ಮತ್ತು ನಾಜೂಕಾಗಿರಬೇಕು. ಮಾತುಗಾರಿಕೆ ಒಂದು ಅತ್ಯುತ್ತಮ ಕಲೆಯಾಗಿದೆ. ಹಿತಮಿತದ ಮಾತನಿಂದ ಜನರ ಮನಗೆಲ್ಲಬಹುದು ಎಂದು ಉದ್ಯಮಿ ಮಿಥುನ್ ಶೆಣೈ ಹೇಳಿದರು.
ಬೆಳ್ಳಾರೆ ಜೇಸಿಐ ಹಾಗು ಬೆಳ್ಳಾರೆ ಜ್ಞಾನದೀಪ ವಿದ್ಯಾಸಂಸ್ಥೆಯ ಜಂಟಿ ಆಯೋಜನೆಯಲ್ಲಿ ಮೋಂಟೆಸರಿ ವಿದ್ಯಾರ್ಥಿ ಶಿಕ್ಷಕಿಯರು ಮತ್ತು ವಿದ್ಯಾರ್ಥಿಗಳಿಗೆ ನಡೆದ ಎರಡು ದಿನಗಳ ಮಾತುಗಾರಿಕಾ ಕಮ್ಮಟ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಜೇಸಿಐ ರಾಷ್ಟ್ರೀಯ ತರಬೇತುದಾರ ಜೇಸಿ ರಾಜೇಂದ್ರ ಭಟ್ ಮಾತನಾಡಿ ದೇಶ ಮತ್ತು ರಾಜ್ಯದ ಶ್ರೇಷ್ಠ ವಾಗ್ಮಿಗಳಲ್ಲಿ ಬಹುತೇಕರು ಜೇಸಿಐ ಹಿನ್ನೆಲೆಯವರಾಗಿದ್ದಾರೆ. ವ್ಯಕ್ತಿತ್ವ ರೂಪಿಸುವುದರಲ್ಲಿ ಮತ್ತು ಮಾತುಗಾರಿಕೆ ಕಲಿಸುವಿಕೆಯಲ್ಲಿ ಜೇಸಿಐ ಅಗ್ರಸ್ಥಾನ ಪಡೆದಿದೆ. ಯುವಜನಾಂಗದವರು ಜೇಸಿಐ ತರಬೇತಿಗಳನ್ನು ಗರಿಷ್ಠ ಮಟ್ಟದಲ್ಲಿ ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಳ್ಳಾರೆ ವಲಯದ ಜೇಸಿಐ ಅಧ್ಯಕ್ಷ ಲೋಕೇಶ್ ತಂಟೆಪ್ಪಾಡಿ ವಹಿಸಿ ಕಾರ್ಯಕ್ರಮ ನಿರೂಪಿಸಿದರು. ವೇದಿಕೆಯಲ್ಲಿ ಜೇಸಿಐ ಬೆಳ್ಳಾರೆ ಮಾಜಿ ಅಧ್ಯಕ್ಷ ಜಯರಾಮ್ ಉಮಿಕ್ಕಳ, ಪ್ರಧಾನ ಕಾರ್ಯದರ್ಶಿ ಪ್ರವೀಣ್‍ಕುಮಾರ್ ಬೆಳ್ಳಾರೆ, ಯುವ ಜೇಸಿಐ ಅಧ್ಯಕ್ಷ ಸಾಗರ್, ಜ್ಞಾನದೀಪ ಶಿಕ್ಷಣ ಸಂಸ್ಥೆಗಳ ನಿರ್ದೇಶಕ ಉಮೇಶ್ ಮಣಿಕ್ಕಾರ ಉಪಸ್ಥಿತರಿದ್ದರು.
ಬಾಲಚಂದ್ರ ಕೋಟೆ ಜೇಸಿಐ ವಾಣಿ ವಾಚಿಸಿದರು. ರಶೀದ್ ಬೆಳ್ಳಾರೆ ಸ್ವಾಗತಿಸಿದರು. ಸಭಾ ಕಾರ್ಯಕ್ರಮದ ನಂತರ ಮಾತುಗಾರಿಕಾ ಕಮ್ಮಟ ತರಬೇತಿ ಶಿಬಿರ ನಡೆಯಿತು.
ಈ ಬಾರಿ ಫೆಬ್ರವರಿ ತಿಂಗಳಲ್ಲಿ ವಾಡಿಕೆಗಿಂತ 2.5 ಡಿಗ್ರಿ ಸೆಲ್ಸಿಯಸ್ ನಷ್ಟು ಬಿಸಿಲು…
ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಚಾಲಕ ಮತ್ತು ನಿರ್ವಾಹಕರ ಮೇಲೆ ಪ್ರಯಾಣಿಕರು…
ಕೃಷಿ ಹಾಗೂ ರೈತರ ಅಭ್ಯುದಯವೇ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯಗಳ ಮೂಲ ಆಶಯವಾಗಿದೆ…
ಏರುತ್ತಿರುವ ತಾಪಮಾನ ಮತ್ತು ಹವಾಮಾನ ಬದಲಾವಣೆಯು ಮುಂದಿನ ಐದು ವರ್ಷಗಳಲ್ಲಿ ಕೃಷಿ ಮೇಲೆ…
ದೇಶಾದ್ಯಂತ ಸ್ಥೂಲಕಾಯದ ವಿರುದ್ಧ ಹೋರಾಡಲು ಪ್ರಧಾನಿ ನರೇಂದ್ರ ಮೋದಿ ಅವರು ಹತ್ತು ಮಂದಿಯನ್ನು…
ತೀರಾ ಸಣ್ಣ ಮಟ್ಟಿನ ಆದಾಯವನ್ನೂ ಬ್ಯಾಂಕ್ ಖಾತೆಗೆ ಏಕೆ ತುಂಬಬೇಕು..?