ಸುಳ್ಯ : ಅತಿಯಾಗಿ ತಿಂದರೆ ಆರೋಗ್ಯ ಕೆಡುತ್ತದೆ. ಈ ಬಗ್ಗೆ ಗಮನ ಕೊಡದ ಕಾರಣ ಯುವ ಜನತೆಯ ಆರೋಗ್ಯ ಮಟ್ಟ ಕುಸಿಯುತ್ತಿದೆ. ಆರೋಗ್ಯ ಹಾಳಾದ ಮೇಲೆ ಗಮನ ಕೊಡುವುದಕ್ಕಿಂತ ಮುಂಜಾಗರೂಕತೆ ಮೂಲಕ ಕಟ್ಟುನಿಟ್ಟಿನ ಆಹಾರ ಪದ್ಧತಿಗೆ ಒಗ್ಗಿಕೊಳ್ಳಬೇಕೆಂದು ಹಾಸನಡ್ಕ ಆರೋಗ್ಯಧಾಮದ ಡಾ.ಶಶಿಧರ ಹಾಸನಡ್ಕ ಹೇಳಿದರು.
ಅವರು ಶ್ರೀ ಗುರು ರಾಘವೇಂದ್ರ ಮಠದಲ್ಲಿ ಸುಳ್ಯ ತಾಲೂಕು ಶಿವಳ್ಳಿ ಸಂಪನ್ನ ಆಯೋಜಿಸಿದ ತಿಂಡಿ ಮೇಳ ಕಾರ್ಯಕ್ರಮದಲ್ಲಿ ಆರೋಗ್ಯ ಮತ್ತು ಆಹಾರದ ಬಗ್ಗೆ ಉಪನ್ಯಾಸ ನೀಡಿ, ದೇಹದ ಪ್ರಕೃತಿಗನುಗುಣವಾಗಿ ಆಹಾರ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕೆಂದರು. ಪಾಕತಜ್ಞ ಪಿ.ಎಸ್.ನಾರಾಯಣ ಕೆದಿಲಾಯ ಅವರನ್ನು ಸಮ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಮಹಿಳಾ ಘಟಕದ ವತಿಯಿಂದ ಕಾಲುದೀಪ ಮತ್ತು ಆರತಿ ತಟ್ಟೆಯನ್ನು ಶ್ರೀರಾಘವೇಂದ್ರ ಮಠಕ್ಕೆ ಕೊಡುಗೆಯಾಗಿ ನೀಡಲಾಯಿತು.
ಸಭಾಧ್ಯಕ್ಷತೆಯನ್ನು ಶಿವಳ್ಳಿ ಸಂಪನ್ನದ ಅಧ್ಯಕ್ಷ ಮುರಳೀಕೃಷ್ಣ ಕಣ್ಣರಾಯ ವಹಿಸಿದ್ದರು. ವೇದಿಕೆಯಲ್ಲಿ ಬೃಂದಾವನ ಸೇವಾ ಟ್ರಸ್ಟ್ ನ ಅಧ್ಯಕ್ಷ ಎಂ.ಎನ್.ಶ್ರೀಕೃಷ್ಣ ಉಪಸ್ಥಿತರಿದ್ದರು.
ಗೌರವಾಧ್ಯಕ್ಷ ರಮೇಶ ಸೋಮಯಾಗಿ, ಸಂಘಟನಾ ಕಾರ್ಯದರ್ಶಿ ಗಿರೀಶ್ ಕೇಕುಣ್ಣಾಯ, ಕಾರ್ಯದರ್ಶಿ ರಾಮಕುಮಾರ್ ಹೆಬ್ಬಾರ್, ಕೋಶಾಧಿಕಾರಿ ಶಶಿಧರ ಕೇಕುಣ್ಣಾಯ, ಯುವ ಘಟಕ ಅಧ್ಯಕ್ಷ ಪ್ರಥಮ್ ಮೂಡಿತ್ತಾಯ, ಕಾರ್ಯದರ್ಶಿ ಅರ್ಜುನ್ ಆಚಾರ್ ಸಹಕರಿಸಿದರು.
ಪೂರ್ವಾಧ್ಯಕ್ಷ ಪ್ರಕಾಶ್ ಮೂಡಿತ್ತಾಯ ಮತ್ತು ಮಹಿಳಾ ಘಟಕದ ಅಧ್ಯಕ್ಷೆ ಮಮತಾ ಮೂಡಿತ್ತಾಯ ನಿರೂಪಿಸಿದರು.
ಅಡಿಕೆ ಬೆಳೆಗಾರರು ಭವಿಷ್ಯದ ದೃಷ್ಟಿಯಿಂದ ಏಕೆ ಜಾಗ್ರತವಾಗಬೇಕು ಎಂದು ಕುಮಾರ ಸುಬ್ರಹ್ಮಣ್ಯ ಮುಳಿಯಾಲ…
ಮೊಗ್ರದಲ್ಲಿ ಕಾಲಾವಧಿ ಜಾತ್ರೆ ನಡೆಯಿತು.
ಸಿರಿಧಾನ್ಯಗಳ ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೃಷಿ ಇಲಾಖೆ “ಸಿರಿಧಾನ್ಯ ಓಟ…
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…