ಹರಿದಾಸ್ ಶೇಣಿ ಗೋಪಾಲಕೃಷ್ಣ ಭಟ್ಟರ ‘ಶೂರಪದ್ಮ’)
ಪ್ರಸಂಗ : ಕುಮಾರ ವಿಜಯ
(ಸಂದರ್ಭ : ಷಣ್ಮುಖ ಮತ್ತು ಶೂರಪದ್ಮ ಯುದ್ಧದ ಸನ್ನಿವೇಶ)
“.. ಮರಣವೇನು? ಸಾಮಾನ್ಯ. ಹುಟ್ಟಿದವರು ಸಾಯ್ತಾರೆ. ಈ ತತ್ವದಿಂದ ಬದುಕಿದರೆ ಅದು ಬದುಕಾಗುವುದಿಲ್ಲ. ಯುದ್ಧ…. ಯುದ್ಧದಲ್ಲಿ ಸತ್ತವನೂ ಸೋತವನಲ್ಲ. ಯುದ್ಧದಲ್ಲಿ ಬದುಕಿದವನು ಮಾತ್ರ ಗೆದ್ದವನೂ ಅಲ್ಲ. ಹೋರಾಟ…. ಆನುವಂಶಿಕತೆಯಿಂದ ಬಂದದ್ದದು. ರಕ್ತಗತವಾದ ದೇವತೆಗಳಲ್ಲಿ ದ್ವೇಷ. ಇಲ್ಲದಿದ್ದರೆ ‘ಸುರ-ಅಸುರ’ ಎಂಬ ವಿರುದ್ಧವಾದ ಸಂಘರ್ಷಾತ್ಮಕವಾದಂತಹ ಪದ ಹುಟ್ಟುತ್ತಲೇ ಇರಲಿಲ್ಲ. ಅವರಿದ್ದಲ್ಲಿ ನಾವಿಲ್ಲ ಎಂದರ್ಥ….
ಭಾಪುರೇ… ಕುಮಾರನೆಂದು ನಿನ್ನ ಹೆಸರು. ಆಕೃತಿಯೂ ಕುಮಾರನದ್ದು. ಅಯ್ಯಾ…. ಕೌಮಾರ, ಇಷ್ಟು ವಿಜೃಂಭಿಸಿದರೆ ಬಹುಶಃ ಮುಂದಿನದ್ದು ಕಳೆಗುಂದುತ್ತದೋ ಎಂಬ ಸಂದೇಹ ನನಗಿದೆ. ಬಾಲ್ಯ, ಕೌಮಾರ – ಇದು ಮುಂದಿನದ್ದಾದಂತಹ ಜೀವನದ ಯೌವನ, ವಾರ್ಧಕ್ಯಕ್ಕೆ ಪೋಷಕವಾಗಬೇಕು, ಪೂರಕವಾಗಬೇಕು. ಅವಾಗ ಮಾಡಬೇಕಾದ್ದು ಸಂಗ್ರಹ, ನಿಗ್ರಹವಲ್ಲ. ಚಿಂತಿಲ್ಲ. ಎಳೆಯ ವಯಸ್ಸಿನಲ್ಲಿ ನೀನು ಮಾಡಿದಂತಹ ಅದ್ಭುತ ಪರಾಕ್ರಮಗಳನ್ನೆಲ್ಲಾ ಕಂಡಾಗ ನನ್ನ ವಿರೋಧಿ ಸ್ಥಾನದಲ್ಲಿ ನೀನು ನಿಂತರೂ ಕೂಡಾ ವೀರರಸ ಪ್ರಧಾನವಾದಂತಹ ಯಾವುದೇ ಕಥಾನಕವನ್ನು ತಾಳಿ ರೋಮಾಂಚನಗೊಳ್ಳುವ ನನ್ನ ಜಾಯಮಾನದಿಂದ ನಿನ್ನನ್ನು ನಾನು ಮೆಚ್ಚುತ್ತೇನೆ.
ಏನಯ್ಯಾ… ಈ ಮರಣ ಎನ್ನುವುದು ನನ್ನಂತಹ ಜೀವರಿಗೆ ಮಹಾನವಮಿ, ಉತ್ಸವ! ‘ಹೇಗಾದರೂ ಸಾಯಕೂಡದು’ ಎಂಬುದು ನನ್ನ ಹಠ. ನಮ್ಮಂತಹ ಯೋಧರಿಗೆ ಜೀವನವೇ ಒಂದು ಸಂಗ್ರಾಮ. ಭೂಮಿಯಾದ್ದರಿಂದ, ಆ ಸಂಗ್ರಾಮ ಭೂಮಿ ಕೊನೆಯ ಉಸಿರಿನಲ್ಲಿ ಈ ರೀತಿಯ ಹೋರಾಟ ಭೂಮಿಯಾಗಿ, ರಕ್ತದಲ್ಲಿ ವಿರೋಧಿಯ ಆಯುಧದಿಂದ ಗತಪ್ರಾಣನಾದರೆ, ಶಾಸ್ತ್ರ ಹೌದಾಗಿದ್ದರೆ ಯುದ್ಧದಲ್ಲಿ ಸತ್ತವರು ಮರಳಿ ಹುಟ್ಟುವುದಿಲ್ಲ. ಜೈಸಿದರಂತೂ ‘ಇಹ’ ಉಂಟು. ಸತ್ತರೆ ‘ಪರ’ ಮಾತ್ರ. ಇಹ-ಪರ ಎರಡನ್ನೂ ಸಾಧಿಸುವ ಸಾಧನೆ ನನ್ನದು….”
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…
ಬೀದರ್ ನ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಶ್ವವಿದ್ಯಾಲಯದ 20 ನೇ ಸಂಸ್ಥಾಪನಾ…
ಕರ್ನಾಟಕದಲ್ಲಿ ಅಡಿಕೆಯು ಪ್ರಮುಖ ವಾಣಿಜ್ಯ ಬೆಳೆಯಾಗಿರುವುದು ಕೇಂದ್ರದ ಗಮನದಲ್ಲಿದೆ. ಈ ನಿಟ್ಟಿನಲ್ಲಿ ವಿದೇಶಗಳಿಂದ…
ಸಹಕಾರಿ ಕ್ಷೇತ್ರದಲ್ಲಿ ಹೆಸರುವಾಸಿಯಾಗಿರುವ ಅಂತರಾಷ್ಟ್ರೀಯ ಮಟ್ಟದ ಕ್ಯಾಂಪ್ಕೊ ಸಂಸ್ಥೆ "ಕಲ್ಪ" ಕೊಬ್ಬರಿ ಎಣ್ಣೆ…
ಮುಂಜಾನೆಯ ಸಮಯದಲ್ಲಿ ಸ್ಥಬ್ಧವೆನ್ನಿಸುವ ವಾತಾವರಣದಲ್ಲೂ ಸಾಕಷ್ಟು ಹಕ್ಕಿಗಳ ಚಿಲಿಪಿಲಿ ಶಬ್ದ ಕೇಳುತ್ತಿರುತ್ತದೆ. ಆದರೆ…
ದಕ್ಷಿಣ ಬಂಗಾಳಕೊಲ್ಲಿಯಲ್ಲಿ ಸಣ್ಣ ಪ್ರಮಾಣದ ತಿರುಗುವಿಕೆ ಉಂಟಾಗುವ ಸಾಧ್ಯತೆಗಳಿದ್ದು, ಜನವರಿ 18 ರಂದು…