ಕಳೆದ ವರ್ಷಕ್ಕೆ ಹೋಲಿಸಿದರೆ ಮಳೆ ಬಿದ್ದ ಪ್ರಮಾಣ ಕಡಿಮೆ. ವಾಡಿಕೆಗಿಂತಲೂ ಕಡಿಮೆ ಮಳೆಯಾಗಿದೆ. ಆದರೆ ಒಮ್ಮೆಲೇ ಭಾರೀ ಮಳೆ, ಪ್ರವಾಹ ಬಂದ ಹಿನ್ನೆಲೆಯಲ್ಲಿ ನೀರು ಸಾಕಷ್ಟು ಬಂದು ಜಲಾಶಯಗಳು ತುಂಬಿವೆ. ಹೀಗಾಗಿ ರಾಜ್ಯಕ್ಕೆ ಈ ಬಾರಿ ವಿದ್ಯುತ್ ಅಭಾವ ಇರದು ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಆದರೆ ಬೇಸಗೆಯಲ್ಲಿ ಹೇಗೆ ಎಂಬುದರ ಬಗ್ಗೆ ಇನ್ನೂ ನಿರ್ಧರಿಸಲು ಸಾಧ್ಯವಿಲ್ಲ, ಈಗಿನ ಅಂದಾಜು ಪ್ರಕಾರ ಅಭಾವ ಕಂಡುಬರದು. ಇದೇ ಸಂದರ್ಭ ರಾಜ್ಯದ ಹಲವು ಕಡೆಗಳಲ್ಲಿ ಮಳೆಯಾಗಿಲ್ಲ. ಕೆರೆಗಳು ಭರ್ತಿಯಾಗಿಲ್ಲ.ಈ ಬಗ್ಗೆ ಫೋಕಸ್..
ಈ ಬಾರಿ ವಿದ್ಯುತ್ ಅಭಾವ ಕಂಡುಬಾರದು. ಹೀಗೊಂದು ಅಭಿಪ್ರಾತಯ ಈಗ ವ್ಯಕ್ತವಾಗಿದೆ. ಮಳೆಯಿಂದ ರಾಜ್ಯದಲ್ಲಿ ಸಾಕಷ್ಟು ಹಾನಿಯಾಗಿದೆ. ಇಂದಿಗೂ ಜನ ಆತಂಕದಿಂದ ಇದ್ದಾರೆ. ಇದರ ನಡುವೆಯೇ ವಿದ್ಯುತ್ ಬಗ್ಗೆ ಯೋಚನೆ ಶುರುವಾದಾಗ ಲಿಂಗನಮಕ್ಕಿ ಜಲಾಶಯ ಭರ್ತಿಗೆ ಕೇವಲ ಅರ್ಧ ಅಡಿ ಬಾಕಿ ಎಂಬ ವರದಿ ಬಂದಿದೆ. ಹೀಗಾಗಿ ವಿದ್ಯುತ್ ಬಗ್ಗೆ ಭರವಸೆ ಮೂಡಿದೆ.
ಪ್ರತಿ ಬಾರಿ ರಾಜ್ಯವನ್ನು ಕಾಡುವ ವಿದ್ಯುತ್ ಅಭಾವ ಈಚೆಗೆ ಹೆಚ್ಚಾಗಿತ್ತು. ಕಳೆದ ಎರಡು ತಿಂಗಳಿನಿಂದ ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆ ಮಾಡುವ ಜಲಾಶಯಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೀರು ಇರುವ ಕಾರಣದಿಂದ ಈ ಬಾರಿಯ ಬೇಸಿಗೆಯಲ್ಲಿ ಹೆಚ್ಚೇನು ವಿದ್ಯುತ್ ಅಭಾವ ಇರಲಾರದು ಎಂಬ ಅಂದಾಜು ವ್ಯಕ್ತವಾಗಿದೆ. ರಾಜ್ಯದಲ್ಲಿ ಪ್ರಮುಖ ವಿದ್ಯುತ್ ಉತ್ಪಾದನ ಕೇಂದ್ರವಾಗಿರುವ ಲಿಂಗನಮಕ್ಕಿ ಜಲಾಶಯ ಭರ್ತಿಗೆ ಕೇವಲ ಅರ್ಧ ಅಡಿ ಬಾಕಿ ಉಳಿದಿದ್ದು, ಸೋಮವಾರ ಸಂಜೆ 6 ಗಂಟೆಯಿಂದ 3 ಕ್ರಸ್ಟ್ ಗೇಟ್‌ಗಳ ಮೂಲಕ ನೀರು ಹೊರ ಬಿಡಲಾಗಿದೆ. ನೀರಿನ ಮಟ್ಟ ಸೋಮವಾರ ಸಂಜೆ 1818.40 (ಪೂರ್ಣಮಟ್ಟ 1819) ಅಡಿಗೆ ತಲುಪಿದ್ದು ಒಳಹರಿವು 25 ಸಾವಿರ ಕ್ಯೂಸೆಕ್ ಇದೆ. ಜಲಾನಯನ ಪ್ರದೇಶವಾದ ಹೊಸನಗರ ಮತ್ತು ಸಾಗರದಲ್ಲಿ ಸತತ ಮಳೆಯಾಗುತ್ತಿದ್ದು, ಇನ್ನೂ ಎರಡು ದಿನ ಮಳೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಮಳೆಯಾದರೂ ರಾಜ್ಯದ 1685 ಕೆರೆಗಳಲ್ಲಿ ನೀರಿಲ್ಲ….!
ಪ್ರವಾಹದಿಂದ ರಾಜ್ಯದ ಹಲವು ಜಿಲ್ಲೆಗಳು ತತ್ತರಿಸಿದ್ದರೂ ಇನ್ನೂ 1685 ಕೆರೆಗಳಿಗೆ ನೀರೇ ಹರಿದಿಲ್ಲ. ದಾಖಲೆಗಳ ಪ್ರಕಾರ ರಾಜ್ಯದ 3611 ಸಣ್ಣ ಕೆರೆಗಳ ಪೈಕಿ ಪೂರ್ಣ ಪ್ರಮಾಣದಲ್ಲಿ ಭರ್ತಿಯಾಗಿರುವುದು 944 ಕೆರೆಗಳು ಮಾತ್ರ….! ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮಾಹಿತಿ ಪ್ರಕಾರ ಆಗಸ್ಟ್ ವರೆಗೆ ರಾಜ್ಯದ 3611 ಸಣ್ಣ ಕೆರೆಗಳ ಪೈಕಿ 1685 ಕೆರೆಗಳಿಗೆ ನೀರೇ ಬಂದಿಲ್ಲ. ಹೀಗಾಗಿ ಸಂಪೂರ್ಣ ಒಣಗಿತ್ತು. ಅದರಲ್ಲಿ ಕೋಲಾರ 125, ಚಿಕ್ಕಬಳ್ಳಾಪುರ 173, ತುಮಕೂರು 297, ಚಿತ್ರದುರ್ಗ 116, ದಾವಣಗೆರೆ 64, ಚಾಮರಾಜನಗರ 51, ಮಂಡ್ಯ 37, ಹಾಸನ 54, ಬಳ್ಳಾರಿ 76, ಕೊಪ್ಪಳ 40, ರಾಯಚೂರು 21, ಕಲಬುರಗಿ 93, ಬೀದರ್ 123, ಬೆಳಗಾವಿ 74, ಬಾಗಲಕೋಟೆ 54, ವಿಜಯ ಪುರ 111, ಯಾದಗಿರಿ 67, ಚಿಕ್ಕಮಗಳೂರು 30 ಕೆರೆಗಳಿಗೆ ನೀರೇ ಬಾರದ ಸ್ಥಿತಿ ಇದೆ.
ಶಿವಮೊಗ್ಗ , ಕೊಡಗು, ದಕ್ಷಿಣ ಕನ್ನಡ, ಉಡುಪಿ, ಹಾವೇರಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಹೆಚ್ಚಿನ ಕೆರೆಗಳು ಸೇರಿ ದಂತೆ 994 ಕೆರೆಗಳು ಪೂರ್ಣ ಪ್ರಮಾಣದಲ್ಲಿ ಭರ್ತಿಯಾಗಿವೆ. 652 ಕೆರೆಗಳಿಗೆ ಶೇ.30ರಷ್ಟು ನೀರು ಬಂದಿದ್ದರೆ 150 ಕೆರೆಗಳಿಗೆ ಅರ್ಧದಷ್ಟು ಮಾತ್ರ ನೀರು ಬಂದಿದೆ.
ಧರ್ಮಸ್ಥಳಕ್ಕೆ ಸಂಬಂಧಿಸಿದಂತೆ “ಮಾತು ಬಿಡ ಮಂಜುನಾಥ” ಎಂಬ ಮಾತು ಎಲ್ಲರಿಗೂ ಚಿರಪರಿಚಿತವಾಗಿದೆ. ಮಾತೇ…
ಮಂಗಳೂರು ಮಹಾನಗರಪಾಲಿಕೆ ವತಿಯಿಂದ ತುಂಬೆಯಲ್ಲಿರುವ ಕಿಂಡಿ ಅಣೆಕಟ್ಟಿನ ಬಳಿ ನೇತ್ರಾವತಿ ನದಿಗೆ ಗಂಗಾ…
ಈ ಬಾರಿ ಫೆಬ್ರವರಿ ತಿಂಗಳಲ್ಲಿ ವಾಡಿಕೆಗಿಂತ 2.5 ಡಿಗ್ರಿ ಸೆಲ್ಸಿಯಸ್ ನಷ್ಟು ಬಿಸಿಲು…
ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಚಾಲಕ ಮತ್ತು ನಿರ್ವಾಹಕರ ಮೇಲೆ ಪ್ರಯಾಣಿಕರು…
ಕೃಷಿ ಹಾಗೂ ರೈತರ ಅಭ್ಯುದಯವೇ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯಗಳ ಮೂಲ ಆಶಯವಾಗಿದೆ…
ಏರುತ್ತಿರುವ ತಾಪಮಾನ ಮತ್ತು ಹವಾಮಾನ ಬದಲಾವಣೆಯು ಮುಂದಿನ ಐದು ವರ್ಷಗಳಲ್ಲಿ ಕೃಷಿ ಮೇಲೆ…