ರಾಜ್ಯದಲ್ಲಿ ಹಲವು ಕಡೆ ಭೂಕುಸಿತ ಪ್ರದೇಶಗಳ ಗುರುತು | ಆಗಸ್ಟ್‌ನಲ್ಲಿ ಮಳೆ ಹೆಚ್ಚಾದರೆ ಭೂಕುಸಿತ ಸಾಧ್ಯತೆ |

August 7, 2024
12:07 PM

ಮುಂಗಾರು ಮಳೆಗೆ ಕೇರಳದ ವಯನಾಡ್‌ನಲ್ಲಿ ಮಾತ್ರವಲ್ಲದೆ ಕರ್ನಾಟಕದಲ್ಲೂ ಸಹ ಭೂಕುಸಿತ ಸಂಭವಿಸಿತ್ತು. ಕಳೆದ ಕೆಲ ವರ್ಷಗಳಿಂದ ರಾಜ್ಯದಲ್ಲಿ ಪ್ರತೀ ವರ್ಷ ಭೂಕುಸಿತ ಸಂಭವಿಸುತ್ತಲೇ ಇದೆ. ಅದರಲ್ಲೂ ಘಾಟ್‌ ಪ್ರದೇಶಗಳು ಈ ಬಾರಿ ಹೆಚ್ಚಾಗಿ ಭೂ ಕುಸಿತ ಕಂಡಿವೆ. 2018 ರಲ್ಲಿ  ಕೊಡಗಿನಲ್ಲಿ ನಡೆದ ಭೀಕರ ದುರಂತದ ಕಹಿ ನೆನಪು ಇನ್ನೂ ಮಾಸಿಲ್ಲ. ಇದೀಗ ಮತ್ತೆ ಇದೇ ಆತಂಕ ಎದುರಾಗಿದೆ.

Advertisement
Advertisement
Advertisement
Advertisement

ಹೌದು.. ರಾಜ್ಯದಲ್ಲಿ ಮಳೆ ಹೆಚ್ಚುತ್ತಿರುವ ಬೆನ್ನಲ್ಲೇ ಕೊಡಗಿನಲ್ಲಿ ಮತ್ತೆ ಭೂ ಕುಸಿತದ ಆತಂಕ ಎದುರಾಗಿದೆ. ಕಳೆದ ವರ್ಷಗಳಂತೆ ಈ ವರ್ಷವೂ ಭೂಕುಸಿತ ಸಂಭವಿಸುವ ಭಯದಲ್ಲಿ ಜನರಿದ್ದು, ಇದಕ್ಕೆ ಸಂಬಂಧಿಸಿದಂತೆ ಈಗಾಗಲೇ 104 ಸಂಭವನೀಯ ಭೂಕುಸಿತ ಪ್ರವಾಹ ಪ್ರದೇಶಗಳ ಗುರುತು ಮಾಡಲಾಗಿದೆ. 2995 ಕುಟುಂಬಗಳ ಸ್ಥಳಾಂತರಕ್ಕೆ ಪಟ್ಟಿ ಮಾಡಲಾಗಿದ್ದು, 95 ಕಡೆಗಳಲ್ಲಿ ಕಾಳಜಿ ಕೇಂದ್ರ ಮಾಡಲಾಗಿದೆ. ಆಗಸ್ಟ್‌ನಲ್ಲಿ ಮಳೆ ಹೆಚ್ಚಾದರೆ ಭೂಕುಸಿತ ಆಗುವ ಸಾಧ್ಯತೆ ಹೆಚ್ಚಿದೆ ಎನ್ನಲಾಗಿದೆ.

Advertisement

ಈ ಹಿಂದಿನ ವರ್ಷಗಳಲ್ಲಿ ನಡೆದ ಗುಡ್ಡ ಕುಸಿತದ ನಂತರ ಕೊಡಗು ಜಿಲ್ಲೆಯಲ್ಲಿ ಈ ವರ್ಷವೂ ಆತಂಕದ ಕರಿ ಛಾಯೆ ಉಂಟಾಗಿದೆ. ಆಗಸ್ಟ್‌ನಲ್ಲಿ ಹೆಚ್ಚಾಗುವ  ಭಾರೀ ಮಳೆ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಜನರಿಗೆ ಎಚ್ಚರಿಕೆಯನ್ನೂ ನೀಡಿದೆ. 2018ರಲ್ಲಿ ಸಂಭವಿಸಿದ ದುರಂತ ಮರೆಯುವ ಮುನ್ನವೇ ಈಗ ಮತ್ತೆ ಭೂಕುಸಿತ ಉಂಟಾಗುವ ಬಗ್ಗೆ ಜಿಯೋಲಾಜಿಕಲ್ ಸರ್ವೆ ಆರ್ವೆ ಆಫ್ ಇಂಡಿಯಾ ಮಾಹಿತಿ ನೀಡಿದೆ.

ಮತ್ತೊಂದೆಡೆ ಬಲವಂತವಾಗಿಯಾದರೂ ಅಪಾಯದ ಸ್ಥಳದಲ್ಲಿ ವಾಸಿಸುತ್ತಿರುವವರನ್ನು ಸ್ಥಳಾಂತರಕ್ಕೆ ಸಚಿವರು ಖಡಕ್ ಸೂಚನೆ ನೀಡಿದ್ದು, ಅಪಾಯದಲ್ಲಿ ವಾಸಿಸುತ್ತಿರುವ ನಿವಾಸಿಗಳಿಗೆ ನೋಟಿಸ್ ನೀಡಿ ಸ್ಥಳಾಂತರಗೊಳ್ಳುವಂತೆ ಸೂಚನೆ ನೀಡಲಾಗಿದೆ.

Advertisement

ಕೇರಳದ ವಯನಾಡ್‌ನಲ್ಲಿ ನಡೆದ ಭೀಕರ ಭೂಕುಸಿತದ ನಂತರ ಈಗಿನ ಅಲ್ಲಿನ ಪರಿಸ್ಥಿತಿ ಭಯಾನಕವಾಗಿದ್ದು, ಗುಡ್ಡ ಕುಸಿದು ನಾಲ್ಕು ಗ್ರಾಮಗಳು ಸಂಪೂರ್ಣ ನಿರ್ನಾಮವಾಗಿದೆ. ಅಂದಹಾಗೆ, ವಯನಾಡಿನಲ್ಲಿ ಗುಡ್ಡ ಕುಸಿದಿದ್ದು ಇದೇ ಮೊದಲಲ್ಲ, 2018ರಲ್ಲಿ ಕೂಡಾ ಕುಸಿತವಾಗಿತ್ತು. ಈ ವರ್ಷ ದುರಂತ ಸಂಭವಿಸಿದ್ದ ಮೂರ್ನಾಲ್ಕು ಕಿಲೋ ಮೀಟರ್ ದೂರದಲ್ಲಿದ್ದ ಪುತ್ತುಮಲ ಗ್ರಾಮಕ್ಕೆ ಬೃಹತ್ ಗಾತ್ರ ಬೆಟ್ಟ ಕುಸಿದು ಅಪ್ಪಳಿಸಿದ ಪರಿಣಾಮ ಇಡೀ ಊರಿಗೆ ಊರೇ ನಿರ್ನಾಮವಾಗಿತ್ತು.

ಪರಿಣಾಮ ಊರಿನಲ್ಲಿದ್ದ ದೇವಸ್ಥಾನ, ಮಸೀದಿ ಸೇರಿದಂತೆ 80ಕ್ಕೂ ಅಧಿಕ ಮನೆಗಳು ನೆಲಸಮವಾಗಿತ್ತು. ತಮ್ಮವರನ್ನು ಕಳೆದುಕೊಂಡು ಊರು ಬಿಟ್ಟು ಬೇರೆ ಊರಿಗೆ ಹೋಗಿದ್ದ ಪುತ್ತುಮಲ ಗ್ರಾಮಸ್ಥರು, ಬೇರೆ ಊರಿನಲ್ಲಿ ನೆಲೆ ಕಂಡು ಕೊಂಡಿದ್ದರು. ಈಗ ಕಾಡು, ಬೆಟ್ಟದಂತೆ ಪುತ್ತುಮಲ ಗ್ರಾಮ ನಿರ್ಮಾಣ ಆಗಿದ್ದು, ಕೆಲವು ಜಾಗದಲ್ಲಿ ಈಗಲೂ ಟೀ ಎಸ್ಟೇಟ್ ಮಾಡಲಾಗಿದೆ. ಪುತ್ತುಮಲದಲ್ಲಿ ಅಳಿದುಳಿದಿರುವ ಕೆಲವೇ ಕೆಲವು ಮನೆಯಲ್ಲೂ ಜನರು ವಾಸ ಮಾಡುತ್ತಿಲ್ಲ.

Advertisement

ಇದೀಗ ಮತ್ತೆ ಕೊಡಗಿನಲ್ಲೂ ಕುಸಿತದ ಎಚ್ಚರಿಕೆಯನ್ನು ಜಿಯೋಲಾಜಿಕಲ್ ಸರ್ವೆ ಆರ್ವೆ ಆಫ್ ಇಂಡಿಯಾ ನೀಡಿದೆ. ಭಾರೀ ಮಳೆಗೆ ಮಣ್ಣು ಸಡಿಲವಾಗಿರುತ್ತದೆ, ಬೆಟ್ಟದ ಪ್ರದೇಶದಲ್ಲಿ ಮಣ್ಣು ಸಡಿಲಗೊಂಡು ಸಣ್ಣದಾಗಿ ಬಿರುಕು ಇರುತ್ತದೆ. ಮಳೆಯ ಕಡಿಮೆಯಾಗಿ ಈಗ ಬಿಸಿಲು ಬಂದು ಬಳಿಕ   ಆಗಸ್ಟ್‌ ತಿಂಗಳಲ್ಲಿ ವೇಳೆಗೆ ಭಾರೀ ಮಳೆಯಾದರೆ ಬಿರುಕುಗಳ ಮೂಲಕ ನೀರು ತುಂಬಿ ಸಡಿಲಗೊಂಡ ಗುಡ್ಡ ಮತ್ತೆ ಕುಸಿಯುವ ಭೀತಿಯ ಬಗ್ಗೆ ಎಚ್ಚರಿಕೆ ನೀಡಲಾಗಿದೆ. ಈ ಹಿಂದೆಯೂ ಇದೇ ಮಾದರಿಯ ಘಟನೆಗಳು ನಡೆದಿತ್ತು.

ಈ ಎಚ್ಚರಿಕೆಯನ್ನು 2018 ರಲ್ಲಿ 2022 ರಲ್ಲಿ ಕೂಡಾ ನೀಡಲಾಗಿತ್ತು. ಅಂದು ಎಚ್ಚರಿಕೆಯನ್ನು ನೀಡಲಾಗಿತ್ತು. ಆಗ ಸಂಭವಿಸಿದ ಭೂಕುಸಿತಗಳ ಬಗ್ಗೆ ಅಧ್ಯಯನವೂ ನಡೆದಿತ್ತು.2018ರ ಕೊಡಗು ಅವಘಡದ ವೇಳೆ ಹೈದರಾಬಾದ್‌ನಿಂದ ಬಂದಿದ್ದ ತಜ್ಞರ ತಂಡದ ವರದಿ ಹಾಗೂ ಏಪ್ರಿಲ್‌ 2021ರಲ್ಲಿ ಹಿಂದಿನ ಸಿಎಂ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಸಲ್ಲಿಕೆಯಾಗಿದ್ದ ಮತ್ತೊಂದು ತಜ್ಞರ ವರದಿಯಲ್ಲಿ ಕೂಡಾ ಹಲವು ಅಂಶಗಳ ಬಗ್ಗೆ ಎಚ್ಚರಿಕೆ ನೀಡಲಾಗಿತ್ತು. 2018ರ ಸೆಪ್ಟೆಂಬರ್‌ನಲ್ಲಿ ಸರಕಾರಕ್ಕೆ ಸಲ್ಲಿಕೆಯಾಗಿದ್ದ ಜಿಎಸ್‌ಐ ತಜ್ಞರ ತಂಡದ ವರದಿಯಲ್ಲಿ ಮಾನವ ಚಟುವಟಿಕೆಯಯಿಂದ ಆಗುವ ಅಪಾಯದ ಬಗ್ಗೆ ಪ್ರಮುಖವಾಗಿ ಉಲ್ಲೇಖಿಸಲಾಗಿತ್ತು.

Advertisement

ಈ ಸಂದರ್ಭ ಪಶ್ಚಿಮ ಘಟ್ಟ ಪ್ರದೇಶದ ಜಿಲ್ಲೆಗಳಲ್ಲಿ ಅನಿವಾರ್ಯ ಹೊರತಾಗಿ ಉಳಿದಂತೆ ಭೂಪರಿವರ್ತನೆ ನಿಲ್ಲಿಸಬೇಕು. ಪ್ರವಾಸೋದ್ಯಮ ಆಕರ್ಷಣೆಯಿಂದಾಗಿ ನಾಯಿಕೊಡೆಗಳಂತೆ ತಲೆಎತ್ತಿದ ಅನಧಿಕೃತ ಹೋಂ ಸ್ಟೇಂ ಹಾಗೂ ರೆಸಾರ್ಟ್‌ಗಳಿಗೆ ಕಡಿವಾಣ ಹಾಕುವುದು ಹಾಗೂ ಜಿಲ್ಲಾವಾರು ಪರಿಸರ ಪುನರ್‌ ನಿರ್ಮಾಣ ಪ್ರಾಧಿಕಾರ ರಚನೆ ಮಾಡುವುದು ಇತ್ಯಾದಿ ಸಲಹೆಗಳನ್ನೂ ನೀಡಲಾಗಿತ್ತು.

ಘಟ್ಟ ಪ್ರದೇಶದಲ್ಲಿ ಮಳೆಗಾಲದಲ್ಲಿ ಭೂಕುಸಿತ ಸಾಮಾನ್ಯ ಮತ್ತು ಸಹಜ ಪ್ರಕ್ರಿಯೆ. ಆದರೆ, ಇತ್ತೀಚೆಗೆ ಪರಿಸರ ವಿರೋಧಿ ಚಟುವಟಿಕೆಗಳು, ಹೋಟೆಲ್‌, ಹೋಂ ಸ್ಟೇ, ರೆಸಾರ್ಟ್‌ ಮತ್ತು ವಾಣಿಜ್ಯ ಚಟುವಟಿಕೆಗಳ ಹೆಚ್ಚಳದಿಂದ ನೈಸರ್ಗಿಕವಾಗಿ ನೀರು ಹರಿದುಹೋಗುವ ವ್ಯವಸ್ಥೆಗೇ ಸಂಚಾಕಾರ ತಂದೊಡ್ಡಿದೆ. ಯಂತ್ರೋಪಕರಣ ಬಳಸಿ ಗುಡ್ಡಗಳನ್ನೇ ಕಡಿದು ಝರಿ, ಹೊಳೆ ಮಾರ್ಗಗಳು ಬಂದ್‌ ಆಗುತ್ತಿರುವುದೂ ಈ ಪ್ರಾಕೃತಿಕ ಅವಘಡಗಳಿಗೆ ಕಾರಣ ಎಂಬುದು ತಜ್ಞರ ಅಭಿಪ್ರಾಯವಾಗಿತ್ತು.

Advertisement

Source: Social network

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಹವಾಮಾನ ವರದಿ | 21-02-2025 | ಮೋಡದ ವಾತಾವರಣ | ಇಂದೂ ಕೆಲವು ಕಡೆ ಮಳೆ ಸಾಧ್ಯತೆ |
February 21, 2025
10:43 AM
by: ಸಾಯಿಶೇಖರ್ ಕರಿಕಳ
ಈ ಬಾರಿ ವರ್ಷದ ಮೊದಲ ಬೇಸಗೆ ಮಳೆ ಕೊಡಗಿನಲ್ಲಿ..!
February 20, 2025
8:07 PM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 20-02-2025 | ಅಧಿಕ ತಾಪಮಾನ- ಕೆಲವು ಕಡೆ ತುಂತುರು ಮಳೆ ಸಾಧ್ಯತೆ | ಫೆ.25 ರಿಂದ ಮೋಡ-ಬಿಸಿಲು |
February 20, 2025
11:34 AM
by: ಸಾಯಿಶೇಖರ್ ಕರಿಕಳ
ಅಡಿಕೆಗೆ ಮೈಟ್ | ಆತಂಕ ಬೇಡ, ಇರಲಿ ಎಚ್ಚರ | ವಿಜ್ಞಾನಿಗಳಿಂದ ಮಾಹಿತಿ |
February 20, 2025
6:58 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror