ಸುಳ್ಯ:ರಕ್ತ ದಾನ ಮಹಾದಾನ ಎಂಬ ದ್ಯೇಯವನ್ನು ಮನದಲ್ಲಿಟ್ಟು ಸುಮಾರು 105 ಬಾರಿ ರಕ್ತದಾನ ಮಾಡಿ ರಾಜ್ಯಾದ್ಯಂತ ತನ್ನ ಸಮಾಜ ಸೇವೆ ಛಾಪನ್ನು ಪಸರಿಸಿರುವ ಸುಳ್ಯ ತಾಲೂಕಿನ ಚಿರಪರಿಚಿತ ವ್ಯಕ್ತಿಯಾಗಿರುವ ಪಿ.ಬಿ ಸುಧಾಕರ ರೈ ಅವರಿಗೆ ಕರ್ನಾಟಕ ರಾಜ್ಯ ಶಾಖಾ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ವತಿಯಿಂದ ಸನ್ಮಾನ ನಡೆಯಲಿದೆ.
ದಕ್ಷಿಣ ಕನ್ನಡದಲ್ಲಿ ನೂರಕ್ಕಿಂತಲೂ ಮಿಗಿಲಾಗಿ ರಕ್ತದಾನ ಮಾಡಿರುವ ಇವರು ಹಲವಾರು ಸಂಘಸಂಸ್ಥೆಗಳ ಚುಕ್ಕಾಣಿ ಹಿಡಿದು ಸದ್ದಿಲ್ಲದೆ ಸಮಾಜ ಸೇವೆ ಮಾಡಿ ನಾಡಿನಾದ್ಯಂತ ಸೈ ಎನಿಸಿದವರು.
ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯಲ್ಲಿರುವ ರೆಡ್ ಕ್ರಾಸ್ ಭವನದಲ್ಲಿ ಜೂನ್ 14 ರಂದು ವಿಶ್ವ ರಕ್ತದಾನಿಗಳ ಕಾರ್ಯಕ್ರಮದಂದು ಜಿಲ್ಲೆಯ ಪ್ರತಿನಿದಿಯಾಗಿ ಭಾಗವಹಿಸಿ ಸನ್ಮಾನ ಸ್ವೀಕರಿಸಲಿದ್ದಾರೆ. ಪ್ರಸ್ತುತ ಸುಧಾಕರ ರೈ ಅವರು ಸುಳ್ಯ ವರ್ತಕರ ಸಂಘದ ಅಧ್ಯಕ್ಷ ಗಿರಿಯನ್ನು ಹೊತ್ತಿದ್ದಾರೆ.

ರೂರಲ್ ಮಿರರ್ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್ ಮಾಧ್ಯಮ ಇದಾಗಿದೆ. ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು “ದಿ ರೂರಲ್ ಮಿರರ್.ಕಾಂ” ನಲ್ಲಿ ನೀವು ಓದಬಹುದು.
ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.
Be the first to comment on "105 ಬಾರಿ ರಕ್ತದಾನ ಮಾಡಿದ ಸುಧಾಕರ ರೈ ಅವರಿಗೆ ಸನ್ಮಾನ"