11 ರಾಜ್ಯಗಳಲ್ಲಿ ಎನ್‌ಐಎ, ಇಡಿ ದಾಳಿಯಲ್ಲಿ 106 ಪಿಎಫ್‌ಐ ಸದಸ್ಯರ ಬಂಧನ | ವಿವಿಧ ದಾಖಲೆಗಳು ವಶ | ಮುಂದುವರಿದ ತನಿಖೆ |

September 22, 2022
1:24 PM

ದೇಶದ 11 ರಾಜ್ಯಗಳಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ(NIA), ಜಾರಿ ನಿರ್ದೇಶನಾಲಯ(ED) ಮತ್ತು ಆಯಾ ರಾಜ್ಯ ಪೊಲೀಸ್ ಪಡೆಗಳ ಜಂಟಿ ಕಾರ್ಯಾಚರಣೆಯಲ್ಲಿ ಒಟ್ಟು 106 ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (PFI) ಸಂಘಟನೆಯ ಕಾರ್ಯಕರ್ತರನ್ನು ಬಂಧಿಸಲಾಗಿದೆ.ಕಾರ್ಯಾಚರಣೆಯಲ್ಲಿ ವಿವಿಧ ಡಿಜಿಟಲ್‌ ಉಪಕರಣಗಳು, ದಾಖಲೆ ಪತ್ರಗಳು, 100 ಕ್ಕೂ ಅಧಿಕ ಮೊಬೈಲ್‌ ಹಾಗೂ ಸುಮಾರು 8 ಲಕ್ಷ ರೂಪಾಯಿ ನಗದು ವಶಪಡಿಸಿಕೊಳ್ಳಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

Advertisement
Advertisement
Advertisement
Advertisement

ಗುರುವಾರ ನಡೆಸಿ ದಾಳಿಯಲ್ಲಿ  ಆಂಧ್ರಪ್ರದೇಶ (5), ಅಸ್ಸಾಂ (9), ದೆಹಲಿ (3), ಕರ್ನಾಟಕ (20), ಕೇರಳ (22), ಮಧ್ಯಪ್ರದೇಶ (4), ಮಹಾರಾಷ್ಟ್ರ (20), ಪುದುಚೇರಿ (3) , ರಾಜಸ್ಥಾನ (2), ತಮಿಳುನಾಡು (10) ಮತ್ತು ಉತ್ತರ ಪ್ರದೇಶ (8) ಜನರನ್ನು ಬಂಧಿಸಲಾಗಿದೆ. ಕಳೆದ ಹಲವು ವರ್ಷಗಳ ನಂತರ  ಅತಿದೊಡ್ಡ ತನಿಖಾ ಪ್ರಕ್ರಿಯೆ ಇದಾಗಿದೆ. ಕಾರ್ಯಾಚರಣೆಯು ತಡರಾತ್ರಿ 1 ಗಂಟೆಯ ಸುಮಾರಿಗೆ ಪ್ರಾರಂಭವಾಗಿ ಮುಂಜಾನೆ 5 ಗಂಟೆಗೆ ಮುಕ್ತಾಯವಾಯಿತು ಎಂದು ತಿಳಿದುಬಂದಿದೆ. ಆಯಾ ರಾಜ್ಯ ಪೊಲೀಸರು, ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ 1,500 ಕ್ಕೂ ಹೆಚ್ಚು ಸಿಬ್ಬಂದಿಗಳನ್ನು ಒಳಗೊಂಡ ತಂಡ ತನಿಖೆಯಲ್ಲಿ ಸಹಕರಿಸಿತ್ತು.

Advertisement

ಈ ತನಿಖೆಯ ಹಿಂದೆ , ಭಯೋತ್ಪಾದನೆಗೆ ಸಂಬಂಧಿಸಿದ ಆರೋಪದ ಕಾರಣದಿಂದ ತನಿಖೆ ನಡೆದಿದೆ. ಸಂಘಟನೆಗಳಿಗೆ ಧನಸಹಾಯ, ತರಬೇತಿ ಶಿಬಿರಗಳನ್ನು ಆಯೋಜಿಸುವುದು ಮತ್ತು ಜನರನ್ನು ನಿಷೇಧಿತ ಸಂಘಟನೆಗಳಿಗೆ ಸೇರಲು ಉತ್ತೇಜಿಸುವ, ಪ್ರಚೋದಿಸುವ ಕೆಲಸದ ಬಗ್ಗೆ ಸಂದೇಹದ ಬಗ್ಗೆ ತೀವ್ರವಾಗಿ ತನಿಖೆ ನಡೆಸಲಾಗಿತ್ತು. ಈ ತಿಂಗಳ ಆರಂಭದಲ್ಲಿ  ಪಿಎಫ್‌ಐ ಪ್ರಕರಣದಲ್ಲಿ ತೆಲಂಗಾಣ, ಆಂಧ್ರಪ್ರದೇಶದ 40 ಸ್ಥಳಗಳಲ್ಲಿ ಎನ್‌ಐಎಯು  ದಾಳಿ ನಡೆಸಿ ನಾಲ್ವರನ್ನು ಬಂಧಿಸಿತ್ತು. ನಂತರ ಸಂಸ್ಥೆಯು ತೆಲಂಗಾಣದ 38 ಸ್ಥಳಗಳಲ್ಲಿ  ಮತ್ತು ಆಂಧ್ರಪ್ರದೇಶದ ಎರಡು ಸ್ಥಳಗಳಲ್ಲಿ ಶೋಧ ನಡೆಸಿತ್ತು.

ಎನ್ಐಎ ಪ್ರಕಾರ, ಆರೋಪಿಗಳು “ಭಯೋತ್ಪಾದಕ ಕೃತ್ಯಗಳನ್ನು ಮಾಡಲು ಮತ್ತು ಧರ್ಮದ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸಲು ತರಬೇತಿ ನೀಡಲು ಶಿಬಿರಗಳನ್ನು ಆಯೋಜಿಸುತ್ತಿದ್ದರು”.

Advertisement

ಎನ್‌ಐಎ, ಇಡಿ ದಾಳಿಯ ಬಳಿಕ ಕೇಂದ್ರ ಗೃಹ ಸಚಿವ ಅಮಿತ್ ಶಾ(Amith shah) ಅವರು ಎನ್‌ಐಎ ಮತ್ತು ಇಡಿ ಮುಖ್ಯಸ್ಥರೊಂದಿಗೆ ಸಭೆ ನಡೆಸಿ ಸಂಗ್ರಹಿಸಿದ ಸಾಕ್ಷ್ಯಗಳನ್ನು ಪರಿಶೀಲಿಸಲು ಮತ್ತು ಮುಂದಿನ ಕ್ರಮದ ಬಗ್ಗೆ ಸಭೆ ನಡೆಸುತ್ತಿದ್ದಾರೆ. ಸಭೆಯಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್(Ajith doval) ಕೂಡ ಭಾಗವಹಿಸುತ್ತಿದ್ದಾರೆ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ತುಮಕೂರು ಜಿಲ್ಲೆ | 10 ಬೆಂಬಲ ಬೆಲೆ ಖರೀದಿ ಕೇಂದ್ರಗಳಲ್ಲಿ ನೋಂದಣಿ ಪ್ರಕ್ರಿಯೆ ಆರಂಭ
February 5, 2025
6:45 AM
by: The Rural Mirror ಸುದ್ದಿಜಾಲ
ಮಕ್ಕಳ ಆರೋಗ್ಯ ಮತ್ತು ಭವಿಷ್ಯದ ಹಿತದೃಷ್ಟಿಯಿಂದ  ಬೆಳೆಗಳಿಗೆ ರಾಸಾಯನಿಕ ಬಳಸಬೇಡಿ
February 5, 2025
6:42 AM
by: The Rural Mirror ಸುದ್ದಿಜಾಲ
ಕಾರವಾರದಲ್ಲಿ ಎ.18-22 ವರೆಗೆ ಕರಾವಳಿ ಉತ್ಸವ
February 5, 2025
6:40 AM
by: The Rural Mirror ಸುದ್ದಿಜಾಲ
ಕೋಲಾರ ಜಿಲ್ಲೆ | ಒತ್ತುವರಿಯಾಗಿರುವ ಕೆರೆಗಳನ್ನು ಆದ್ಯತೆ ಮೇರೆಗೆ ತೆರವುಗಳಿಸಲು ಕ್ರಮ
February 5, 2025
6:37 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror