ಬೆಂಕಿಯಲ್ಲೇ ಇವರ ಬದುಕು | ಅರೆ ಕ್ಷಣದಲ್ಲೇ ಜೀವ ಇಲ್ಲದಾಗಬಹುದು | ಪಟಾಕಿ ಘಟಕಗಳಲ್ಲಿ ಸಂಭವಿಸಿದ ಸ್ಫೋಟಕ್ಕೆ 11 ಮಂದಿ ಸಾವು

October 17, 2023
7:59 PM

ತಮಿಳುನಾಡಿನ ಅದೆಷ್ಟೋ ಬಡ ಕಾರ್ಮಿಕರು ಬದುಕು ಕಟ್ಟಿಕೊಂಡಿರೋದೆ ಈ ಪಟಾಕಿ ಉದ್ಯಮದಲ್ಲಿ. ಈಗ ಇದ್ದವರು ಮರು ಕ್ಷಣದಲ್ಲಿ ಸುಟ್ಟು ಕರಕಲಾಗಬಹುದು ಎಂದು ತಿಳಿದಿದ್ದರು, ತಮ್ಮವರಿಗಾಗಿ ಜೀವನ ನಡೆಸಲೇಬೇಕಾದ ಅನಿವಾರ್ಯ. ದೀಪಾವಳಿ(Diwali) ಬರುತ್ತಿದ್ದಂತೆ ಪಟಾಕಿ(Fire Crackers) ಅವಘಡಗಳು ಸಂಭವಿಸೋದು ಸರ್ವೆ ಸಾಮಾನ್ಯ ಆಗಿದೆ. ಕೆಲ ದಿನಗಳ ಹಿಂದೆಯಷ್ಟೇ ಆನೆಕಲ್‌ನಲ್ಲಿ 10 ಕ್ಕೂ ಅಧಿಕ ಮಂದಿ ಪಟಾಕಿ ದುರಂತದಲ್ಲಿ ಸಾವನ್ನಪ್ಪಿದ್ದರು. ಇದೀಗ ತಮಿಳುನಾಡಿನ(Tamilnadu) ಶಿವಕಾಶಿಯ ಎರಡು ಪಟಾಕಿ ಘಟಕಗಳಲ್ಲಿ ಸಂಭವಿಸಿದ ಸ್ಫೋಟದಲ್ಲಿ ಒಂಬತ್ತು ಮಹಿಳೆಯರು ಸೇರಿದಂತೆ 11 ಜನರು ಸಾವನ್ನಪ್ಪಿದ್ದಾರೆ. ಅವಘಡದಲ್ಲಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

Advertisement

ಎಂ. ಪುದುಪಟ್ಟಿಯಲ್ಲಿರುವ ಕನಿಷ್ಕರ್ ಹಾಗೂ ಅದರ ಪಕ್ಕದಲ್ಲಿರುವ ಪಟಾಕಿ ಅಂಗಡಿಗಳಲ್ಲಿ ಮಧ್ಯಾಹ್ನ ಸ್ಫೋಟ ಸಂಭವಿಸಿದೆ. ವಿರುದುನಗರ, ಶಿವಕಾಶಿ, ವಾಟ್ಸಪ್ ಮತ್ತು ಶ್ರೀವಿಲ್ಲಿ ಪುತ್ತೂರಿನಿಂದ ನಾಲ್ಕು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸುತ್ತಿವೆ. ಈವರೆಗೆ ಅಗ್ನಿಶಾಮಕ ಮತ್ತು ರಕ್ಷಣಾ ದಳದ ಸಿಬ್ಬಂದಿ 10 ಶವಗಳನ್ನು ಹೊರತೆಗೆದಿದ್ದಾರೆ. ಕಳೆದ ಕೆಲವು ದಿನಗಳಿಂದ ಹವಾಮಾನ ಪರಿಸ್ಥಿತಿಯಿಂದಾಗಿ ಸರಿಯಾಗಿ ಒಣಗದ ಪಟಾಕಿಗಳ ಮಾದರಿ ಪರೀಕ್ಷೆಯ ಸಮಯದಲ್ಲಿ ಸ್ಫೋಟ ಸಂಭವಿಸಿದೆ ಎಂದು ಶಂಕಿಸಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಸುಮಾರು 20-25% ರಷ್ಟು ಸುಟ್ಟ ಗಾಯಗಳಾಗಿರುವ ಇತರೆ ಇಬ್ಬರು ಕಾರ್ಮಿಕರನ್ನು ಶ್ರೀವಿಲ್ಲಿಪುತ್ತೂರಿನ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.

ಬೆಂಕಿ ಅವಘಡದ ನಂತರ ಘಟಕದಲ್ಲಿದ್ದ ಕಾರ್ಮಿಕರು ಓಡಿ ಹೋಗಿದ್ದು, ಸ್ಫೋಟದಲ್ಲಿ ಸುಟ್ಟು ಕರಕಲಾದ ಕಾರ್ಮಿಕರನ್ನು ಗುರುತಿಸುವ ಕಾರ್ಯ ನಡೆಯುತ್ತಿದೆ. ಘಟಕವು ಡಿಆರ್‌ಒ ಪರವಾನಗಿಯನ್ನು ಹೊಂದಿದೆ. ವಿರುದುನಗರ ಎಸ್‌ಪಿ ಶ್ರೀನಿವಾಸ ಪೆರುಮಾಳ್, ಜಿಲ್ಲಾ ಅಗ್ನಿಶಾಮಕ ಅಧಿಕಾರಿ ವಿವೇಕಾನಂದನ್ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸುತ್ತಿದ್ದಾರೆ. ಕಿಚ್ಚನಾಯಕನಪಟ್ಟಿಯಲ್ಲಿ ನಡೆದ ಮತ್ತೊಂದು ಅಗ್ನಿ ಅವಘಡದಲ್ಲಿ 60 ವರ್ಷದ ವ್ಯಕ್ತಿಯೊಬ್ಬರು ಸುಟ್ಟು ಕರಕಲಾಗಿದ್ದಾರೆ.

ನತಿಕುಡಿಯ ನಿವಾಸಿ ಪಿ.ವೆಂಬು (60) ಹೆಸರಿನ ಕಾರ್ಮಿಕ, ಘಟಕದ ಕೊಠಡಿಯೊಂದರಲ್ಲಿ ರಾಸಾಯನಿಕ ಮಿಶ್ರಣ ಮಾಡುವಾಗ ಬೆಂಕಿ ಕಾಣಿಸಿಕೊಂಡಿದೆ. ಮಾರನೇರಿ ಪೊಲೀಸರು ಘಟಕದ ಮುಖ್ಯಸ್ಥ ಗುರುಮೂರ್ತಿಯನ್ನು ಬಂಧಿಸಿದ್ದು, ಪರಾರಿಯಾಗಿರುವ ಮಾಲೀಕ ಮುತ್ತುವಿಜ್ಯನಿಗಾಗಿ ಶೋಧ ನಡೆಸುತ್ತಿದ್ದಾರೆ. ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಅವಘಡಕ್ಕೆ ಸಂತಾಪ ಸೂಚಿಸಿದ್ದು, ಮೃತರ ಕುಟುಂಬಕ್ಕೆ ತಲಾ 3 ಲಕ್ಷ ಹಾಗೂ ಗಾಯಗೊಂಡವರಿಗೆ ತಲಾ 1 ಲಕ್ಷ ಪರಿಹಾರ ಘೋಷಿಸಿದ್ದಾರೆ.

– ಅಂತರ್ಜಾಲ ಮಾಹಿತಿ

11 people, including nine women, were killed in an explosion at two firecracker units in Tamil Nadu's Sivakashi. Two people were seriously injured in the accident. M. An explosion occurred in the afternoon at Kanishkar and adjacent firecracker shops in Pudupatti.

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಮ್ಯಾನ್ಮಾರ್‌ನಿಂದ ಅಕ್ರಮ ಅಡಿಕೆ ಆಮದು | ಮಿಜೋರಾಂ ಅಡಿಕೆ ಬೆಳೆಗಾರರಿಗೆ ಸವಾಲು
April 10, 2025
9:58 AM
by: The Rural Mirror ಸುದ್ದಿಜಾಲ
ಉತ್ತರ ಭಾರತದಲ್ಲಿ ಆವರಿಸಿದ ಬಿಸಿಗಾಳಿ | 27 ಹವಾಮಾನ ಕೇಂದ್ರಗಳಲ್ಲಿ 43 ಡಿಗ್ರಿಗಿಂತ ಹೆಚ್ಚಿನ ತಾಪಮಾನ |
April 10, 2025
8:13 AM
by: ದ ರೂರಲ್ ಮಿರರ್.ಕಾಂ
ಹೊಸರುಚಿ | ಗುಜ್ಜೆ ಕಡಲೆ ಗಸಿ
April 10, 2025
8:00 AM
by: ದಿವ್ಯ ಮಹೇಶ್
ಸ್ಥಳೀಯ ಉತ್ಪನ್ನ ಉತ್ತೇಜನ, ಪರಿಸರ ಸಂರಕ್ಷಣೆಗೆ ಪ್ರಧಾನಿ ಕರೆ
April 10, 2025
7:46 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror

Join Our Group