ಸ್ವಚ್ಛ ಭಾರತ ಕನಸು ನನಸು ಮಾಡಿದ 11 ವರ್ಷದ ಬಾಲಕಿ | ಶೌಚಾಲಯ ನಿರ್ಮಿಸಲು ಪಾಕೆಟ್‌ ಮನಿ ಬಳಕೆ | ಪ್ಲಾಸ್ಟಿಕ್‌ ಬಾಟಲಿಗಳಿಂದ ಶೌಚಾಲಯ |

October 13, 2022
8:49 AM

ಸ್ವಚ್ಚ ಭಾರತದ ಅಭಿಯಾನ ಎಲ್ಲೆಡೆಯೂ ನಡೆಯುತ್ತದೆ. ಸ್ವಚ್ಛ ಭಾರತ ಅಭಿಯಾನ ಕಸ ಹೆಕ್ಕುವುದರಲ್ಲಿ ಫೋಟೊ ತೆಗೆಯುವುದರಲ್ಲಿ  ಹಲವು ಕಡೆ ಉಳಿದು ಬಿಡುತ್ತದೆ. ಬ್ಯಾನರ್‌ ಅಳವಡಿಕೆ, ಪ್ಲಾಸ್ಟಿಕ್‌ ನಿರ್ಮೂಲನೆ ಇದೆಲ್ಲಾ ಬಳಕೆಯಲ್ಲಿಯೇ ಕಡಿಮೆಯಾಗಬೇಕಿದೆ ಎಂದರೂ ಅದು ಕಾರ್ಯರೂಪಕ್ಕೆ ಬಂದಿಲ್ಲ. ಆದರೆ ಇಲ್ಲೊಬ್ಬಳು 11 ವರ್ಷದ ಬಾಲಕಿ ಸ್ವಚ್ಛ ಭಾರತ ಯೋಜನೆಯ ಪರಿಣಾಮಕಾರಿ ಅನುಷ್ಟಾಕ್ಕೆ ಮುಂದಾಗಿದ್ದಾಳೆ. ಈಗ ದೇಶದ ಗಮನ ಸೆಳೆದಿದ್ದಾಳೆ. 11 ವರ್ಷದ ಬಾಲಕಿಯೊಬ್ಬಳು ಮಾಡಬಹುದಾದ ಈ ದೇಶ ಸೇವೆ ಇನ್ನಷ್ಟು ಜನರಿಗೆ ಮಾಡಲು ಏಕೆ ಸಾಧ್ಯವಿಲ್ಲ..?

Advertisement

ಜಾರ್ಖಂಡ್‌ ರಾಜ್ಯ ಜೆಮ್‌ಶೆಡ್‌ಪುರದ ಹಿಲ್ ಟಾಪ್ ಶಾಲೆಯ 5 ನೇ ತರಗತಿ ವಿದ್ಯಾರ್ಥಿನಿ  ಮೊಂದ್ರಿತಾ ಚಟರ್ಜಿ ಈಗ ಗಮನ ಸೆಳೆದಿರುವ 11 ವರ್ಷದ ಬಾಲಕಿ.  ಶೌಚಾಲಯ ನಿರ್ಮಿಸಲು ಪಾಕೆಟ್‌ ಮನಿ ಬಳಕೆ ಹಾಗೂ ಪ್ಲಾಸ್ಟಿಕ್‌ ಬಾಟಲಿಗಳಿಂದ ಗೋಡೆ ನಿರ್ಮಾಣ ಮಾಡಿದ್ದಾಳೆ. ಶಾಲೆಗಳಲ್ಲಿ ಶೌಚಾಲಯವಿಲ್ಲ ಎಂದು ತನ್ನ ವಯಸ್ಸಿನ ಹೆಣ್ಣುಮಕ್ಕಳು ಶಾಲೆ ತೊರೆದು ಮನೆಯಲ್ಲಿ ಕುಳಿತಿದ್ದಾರೆ ಎನ್ನುವುದು ತಿಳಿದಾಗ ಬಹಳ ದು:ಖ ಆಗಿತ್ತು, ಇದಕ್ಕಾಗಿ ಏನಾದರೂ ಮಾಡಬೇಕು ಎಂದು ಯೋಚಿಸುತ್ತಿದೆ. ಆಗ ಪ್ರಧಾನಿಗಳ ಸ್ವಚ್ಛ ಭಾಋತದ ಮಾತುಗಳು ಪ್ರೇರಣೆಯಾದವು ಎಂದು ಹೇಳುತ್ತಾರೆ. ಇದಕ್ಕಾಗಿ ಪಾಕೆಟ್‌ ಮನಿ ಉಳಿಸಲು ತೊಡಗಿದೆ. 2014-2016 ನಾನು ರೂ 24000 ಉಳಿಸಿದ್ದೇನೆ ಎನ್ನುತ್ತಾಳೆ ಮೊಂದ್ರಿತಾ.

2014 ರಲ್ಲಿ, ಸ್ವಚ್ಛ ಭಾರತ ಅಭಿಯಾನದ ಕುರಿತು ಪ್ರಧಾನಿ ನರೇಂದ್ರ ಮೋದಿಯವರ ಭಾಷಣವನ್ನು ಕೇಳಿದಾಗ, ಇದಕ್ಕಾಗಿ ಏನಾದರೂ ಮಾಡಬೇಕೆಂದು ಯೋಚಿಸುತ್ತಿದೆ. ಆಗ  ಭಾರತದಲ್ಲಿ ಅನೇಕ ಹೆಣ್ಣುಮಕ್ಕಳು ಶಾಲೆಗಳಲ್ಲಿ ಶೌಚಾಲಯಗಳಿಲ್ಲದ ಕಾರಣ ದಿನನಿತ್ಯದ ತಮ್ಮ ಅಧ್ಯಯನವನ್ನು ತ್ಯಜಿಸುತ್ತಿದ್ದಾರೆ ಎಂದು ಓದಿದ್ದೆ. ಹೀಗಾಗಿ ಪಾಕೆಟ್‌ ಮನಿ ಉಳಿಸುತ್ತಿದ್ದೆ. ಹಣ ಉಳಿಸಿ ಶೌಚಾಲಯ ನಿರ್ಮಾಣ ಮಾಡಲಾಗಿದೆ. ಶೌಚಾಲಯ ನಿರ್ಮಾಣದ ವೇಳೆ ಪ್ಲಾಸ್ಟಿಕ್‌ ಬಾಟಲಿಗಳನ್ನು ಸಂಗ್ರಹಿಸಿ ಅದರಿಂದಲೇ ಗೋಡೆ ನಿರ್ಮಾಣ ಮಾಡಿಸಲಾಯಿತು ಎನ್ನುತ್ತಾರೆ ಮೋಂದ್ರಿತಾ. ಆಕೆಯ ಈ ಪ್ರಯತ್ನವು ಸುಮಾರು 350 ಜನರಿಗೆ ಈಗ ಪ್ರಯೋಜನವನ್ನು ನೀಡಿದೆ. ಅಲ್ಲಿಯವರೆಗೂ ಗ್ರಾಮದ ಆ ಪ್ರದೇಶದಲ್ಲಿ ಶೌಚಾಲಯವೇ ಇರಲಿಲ್ಲ, ಎಲ್ಲರೂ ಬಯಲಿನಲ್ಲಿ ಶೌಚ ಮಾಡುತ್ತಿದ್ದರು.

ಇದ್ದಕ್ಕಿದ್ದಂತೆ, ಮೊಂದ್ರಿತಾ ನಮ್ಮಿಂದ ಹೆಚ್ಚು ಹೆಚ್ಚು ಹಣವನ್ನು ಕೇಳಲು ಪ್ರಾರಂಭಿಸಿದಳು. ನಾವು ಕುತೂಹಲಗೊಂಡೆವು ಮತ್ತು ಒಂದು ದಿನ ಅವಳನ್ನು ಕೇಳಿದೆವು, ಆಗ ನಮಗೆ ತಿಳಿಯಿತು, ಶೌಚಾಲಯ ನಿರ್ಮಾಣದ ಅವಳ ಕನಸು. ಈಗ ಕೆಲವು ತಿಂಗಳುಗಳಿಂದ ಉಳಿತಾಯ ಮಾಡುತ್ತಿದ್ದಾಳೆ ಎಂದು ಮೊಂದ್ರಿತಾ ತಂದೆ ಅಮಿತಾಬ್ ಚಟರ್ಜಿ ಹೇಳುತ್ತಾರೆ.

ಈಗ ಮಗಳ ಕನಸು ನನಸು ಮಾಡಲು ಇನ್ನೊಂದಿಷ್ಟು ಯೋಜನೆ ಹಾಕೊಕೊಂಡಿದ್ದೇವೆ ಎನುತ್ತಾರೆ ಅವರು. ಜೆಮ್‌ಶೆಡ್‌ಪುರದ ಹಲುಬಾನಿ ಎಂಬ ಇನ್ನೊಂದು ಗ್ರಾಮವನ್ನು ಗುರುತಿಸಿದ್ದೇವೆ. ನಮ್ಮ ಒಳ್ಳೆಯ ಕಾರ್ಯಗಳಿಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ನೋಡಿದಾಗ ಸಂತಸವಾಗಿದೆ ಎನ್ನುತ್ತಾರೆ ಅಮಿತಾಬ್ ಚಟರ್ಜಿ ಹೇಳಿದರು.

ಮೊಂದ್ರಿತಾ ಅವರನ್ನು ಇತ್ತೀಚೆಗೆ ರಾಜ್ಯ ಸರ್ಕಾರವು ಗೌರವಿಸಿತು ಮತ್ತು ಸ್ವಚ್ಛ ಭಾರತ ಅಭಿಯಾನಕ್ಕೆ ನೀಡಿದ ಕೊಡುಗೆಯನ್ನು ಗುರುತಿಸಿ ‘ನೈರ್ಮಲ್ಯ ಚಾಂಪಿಯನ್’ ಪ್ರಮಾಣಪತ್ರವನ್ನು ನೀಡಿದೆ. ಜೆಮ್‌ಶೆಡ್‌ಪುರದ ಜಿಲ್ಲಾಧಿಕಾರಿ ಅಮಿತ್‌ ಕುಮಾರ್‌  ಮೊಂದ್ರಿತಾ ಅವರನ್ನು ತಮ್ಮ ಪ್ರದೇಶದಲ್ಲಿ ಸ್ವಚ್ಛ ಭಾರತ ಅಭಿಯಾನದ ಬ್ರಾಂಡ್‌ ಅಂಬಾಸಿಡರ್‌ ಆಗಿ ಮಾಡುವುದಾಗಿ ಹೇಳಿದ್ದಾರೆ.

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಮುಂಗಾರು ಮೇ 27 ರಂದು ಆರಂಭ | ನಿಗದಿತ ಸಮಯಕ್ಕಿಂತ ಮೊದಲೇ ಮಳೆಗಾಲ ಆರಂಭ | ಕೇರಳದಲ್ಲಿ ಇಂದು ಮಳೆ ಸಾಧ್ಯತೆ |
May 13, 2025
7:20 AM
by: ದ ರೂರಲ್ ಮಿರರ್.ಕಾಂ
ಈ ರಾಶಿಯವರಿಗೆ, ಮುಟ್ಟಿದ್ದೆಲ್ಲ ಚಿನ್ನ ಆ ರಾಶಿಗಳು ಯಾವುದು ತಿಳಿಯೋಣ
May 13, 2025
6:53 AM
by: ದ ರೂರಲ್ ಮಿರರ್.ಕಾಂ
ಆಪರೇಷನ್ ಸಿಂದೂರ್ ಕೇವಲ ಹೆಸರಲ್ಲ, ಅದು ದೇಶದ ಜನರ ಸಾಮೂಹಿಕ ಭಾವನೆ – ಪ್ರಧಾನಿ ನರೇಂದ್ರ ಮೋದಿ
May 12, 2025
10:14 PM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 12-05-2025 | ಇಂದು ರಾಜ್ಯದಾದ್ಯಂತ ಅಲ್ಲಲ್ಲಿ ಮಳೆಯ ಮುನ್ಸೂಚನೆ
May 12, 2025
2:17 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror

Join Our Group