ಕಳೆದ ಮೂರು ವರ್ಷಗಳಿಂದ ಕಾಡಾನೆ ದಾಳಿಗೆ ಒಟ್ಟು 129 ಮಂದಿ ರೈತರು ಬಲಿಯಾಗಿದ್ದಾರೆ. ಕಳೆದ ಮೂರು ವರ್ಷಗಳಲ್ಲಿ ದಕ್ಷಿಣ ಕನ್ನಡ -ಉಡುಪಿ ಜಿಲ್ಲೆಯಲ್ಲಿ ಆನೆ ದಾಳಿಯಿಂದ ಆಗಿರುವ ಕೃಷಿ ಹಾನಿಗೂ ಪರಿಹಾರ ನೀಡಲಾಗಿದೆ. ಈ ವರ್ಷ113 ಪ್ರಕರಣಗಳಲ್ಲಿ 32 ಲಕ್ಷಕ್ಕೂ ಅಧಿಕ ಪರಿಹಾರವನ್ನು ವಿತರಿಸಲಾಗಿದೆ ಎಂದು ಅರಣ್ಯ ಸಚಿವರು ವಿಧಾನಪರಿಷತ್ತಿನಲಿ ಉತ್ತಿರಿಸಿದ್ದಾರೆ.
ವಿಧಾನಪರಿಷತ್ ಸದಸ್ಯರುಗಳಾದ ಪ್ರತಾಪ್‌ಸಿಂಹ ನಾಯಕ್ ಹಾಗೂ ಕಿಶೋರ್ ಕುಮಾರ್ ಪುತ್ತೂರು ಅವರು ವಿಧಾನ ಪರಿಷತ್ ಕಲಾಪದಲ್ಲಿ ಚುಕ್ಕೆ ಗುರುತಿಸಿ ಪ್ರಶ್ನೆಯಾಗಿ ಕಾಡಾನೆ ಹಾವಳಿಯ ಬಗ್ಗೆ ಪ್ರಶ್ನೆ ಕೇಳಿದ್ದರು. ಇದಕ್ಕೆ ಅರಣ್ಯ ಸಚಿವರು ಲಿಖಿತವಾಗಿ ಉತ್ತರಿಸಿದ್ದಾರೆ. ಕಳೆದ ಮೂರು ವರ್ಷಗಳಲ್ಲಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಒಟ್ಟು 4 ಜನರು ಮೃತಪಟ್ಟಿದ್ದಾರೆ. ಅವರಲ್ಲಿ ಬಹುತೇಕ ಪ್ರಕರಣದಲ್ಲಿ ಪರಿಹಾರವನ್ನೂ ಸರ್ಕಾರದಿಂದ ನೀಡಲಾಗಿದೆ. ಕಳೆದ ಮೂರು ವರ್ಷಗಳಲ್ಲಿ ಆನೆ ಹಾವಳಿಗೆ ಕೃಷಿಯೂ ಅಪಾರ ನಷ್ಟವಾಗಿದೆ. ನಷ್ಟವಾಗಿರುವ ಕೃಷಿಗೆ ಪರಿಹಾರವನ್ನೂ ನೀಡಲಾಗಿದ್ದು 2022-23 ರಲ್ಲಿ 250 ಪ್ರಕರಣ ದಾಖಲಾಗಿದ್ದು ಒಟ್ಟು 45 ಲಕ್ಷ ಪರಿಹಾರ ನೀಡಲಾಗಿದೆ, 2023-24 ರಲ್ಲಿ 270 ಪ್ರಕರಣ ದಾಖಲಾಗಿದ್ದು ಒಟ್ಟು 72 ಲಕ್ಷ ಪರಿಹಾರ ನೀಡಲಾಗಿದೆ. 2024-25 ರಲ್ಲಿ 397 ಪ್ರಕರಣ ದಾಖಲಾಗಿದ್ದು ಒಟ್ಟು 1 ಕೋಟಿಗೂ ಅಧಿಕ ಪರಿಹಾರ ನೀಡಲಾಗಿದೆ. 2025-26 ರಲ್ಲಿ ಇದುವರೆಗೆ 113 ಪ್ರಕರಣ ದಾಖಲಾಗಿದ್ದು, 32 ಲಕ್ಷಕ್ಕೂ ಅಧಿಕ ಪರಿಹಾರ ನೀಡಲಾಗಿದೆ.
ಆನೆ ನಾಡಿಗೆ ಬರದಂತೆ, ಕೃಷಿ ಹಾನಿಯಾಗದಂತೆ ಇಲಾಖೆಗಳು ಕ್ರಮ ಕೈಗೊಂಡಿದೆ. ಆನೆಕಂದಕ, ಸೋಲಾರ್ ಬೇಲಿ, ಕಾಂಕ್ರೀಟ್ ಕಂಬ ಮೊದಲಾದ ಪ್ರಯತ್ನ ಇಲಾಖೆ ಮಾಡಿದೆ.




