ದೇಶದ 132 ಮಂದಿ ಸಾಧಕರಿಗೆ ಪದ್ಮ ಪ್ರಶಸ್ತಿಗಳನ್ನು ನೀಡಿ ಗೌರವ | ಫ್ರಾನ್ಸ್​ನ ನಾಲ್ವರಿಗೆ ಪದ್ಮ ಪ್ರಶಸ್ತಿ | ಈ ನಾಲ್ವರ ಸಾಧನೆ ಏನು?

January 26, 2024
6:21 PM

ಜನವರಿ 26.. ರಾಷ್ಟ್ರೀಯ ಹಬ್ಬ. ನಮ್ಮ ದೇಶಕ್ಕೆ ಇಂದು ಸಂಭ್ರಮ ಸಡಗರ. ದೆಹಲಿಯ ಕೆಂಪುಕೋಟೆಯಲ್ಲಿ ದೇಶದ ಸಂಸ್ಕೃತಿ, ಸೇನಾ ಸಾಮರ್ಥ್ಯ ಅನಾವರಣಗೊಳ್ಳುತ್ತದೆ. ಇದರೊಂದಿಗೆ ನಮ್ಮ ದೇಶದ ನಾಡು ನುಡಿಗಾಗಿ ಶ್ರಮಿಸಿದ ಸಾಧಕರನ್ನು ಗೌರವಿಸಲಾಗುತ್ತದೆ. ಈ ಬಾರಿಯ ಗಣರಾಜ್ಯೋತ್ಸವ(Republic Day 2024) ಸಂದರ್ಭದಲ್ಲಿ 132 ಮಂದಿಗೆ ಪದ್ಮ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ. ಭಾರತ ರತ್ನ(Bharatha Ratna) ಬಿಟ್ಟರೆ ಪದ್ಮ ಪ್ರಶಸ್ತಿಗಳು(Padma Awards) ಭಾರತದ ಅತ್ಯುಚ್ಚ ನಾಗರಿಕ ಗೌರವಕ್ಕೆ ಸಂಕೇತವಾಗಿವೆ. ಈ ಬಾರಿಯ 132 ಪದ್ಮಪುರಸ್ಕೃತರಲ್ಲಿ ಫ್ರಾನ್ಸ್(France) ದೇಶದ ನಾಲ್ವರು ಪ್ರಜೆಗಳು ಸೇರಿದ್ದಾರೆ. ಕಿರಣ್ ವ್ಯಾಸ್, ಚಾರ್ಲೊಟ್ಟೆ ಚಾಪಿನ್, ಪಿಯೆರೆ ಸಿಲ್ವಿಯನ್ ಫಿಲಿಯೋಜಾಟ್ ಮತ್ತು ಫ್ರೆಡ್ ನೆಗ್ರಿಟ್ ಅವರಿಗೆ ಪದ್ಮಶ್ರೀ ಪ್ರಶಸ್ತಿ ಸಿಕ್ಕಿದೆ.

Advertisement
Advertisement
Advertisement

ಈ ಬಾರಿಯ ಗಣರಾಜ್ಯೋತ್ಸವದಂದು ಭಾರತ ಸರ್ಕಾರ 132 ಮಂದಿಗೆ ಪದ್ಮ ಪ್ರಶಸ್ತಿಗಳನ್ನು ನೀಡಿದೆ. ಐವರಿಗೆ ಪದ್ಮ ವಿಭೂಷಣ, 17 ಮಂದಿಗೆ ಪದ್ಮ ಭೂಷಣ ಮತ್ತು 110 ಮಂದಿಗೆ ಪದ್ಮ ಶ್ರೀ ಪ್ರಶಸ್ತಿಗಳನ್ನು ನೀಡಲಾಗಿದೆ. 132 ಪದ್ಮ ಪ್ರಶಸ್ತಿ ಪುರಸ್ಕೃತರ ಪೈಕಿ 30 ಮಂದಿ ಮಹಿಳೆಯರಿದ್ದಾರೆ. ಅನಿವಾಸಿ ಭಾರತೀಯರು, ಭಾರತ ಮೂಲದ ವಿದೇಶೀ ವ್ಯಕ್ತಿಗಳು 8 ಮಂದಿ ಇದ್ದಾರೆ. 9 ಮಂದಿಗೆ ಮರಣೋತ್ತರ ಪ್ರಶಸ್ತಿ ಕೊಡಲಾಗಿದೆ.

Advertisement

ವೈಜಯಂತಿ ಮಾಲ, ಮೆಗಾಸ್ಟಾರ್ ಚಿರಂಜೀವಿ, ಎಂ ವೆಂಕಯ್ಯ ನಾಯ್ಡು, ಬಿಂದೇಶ್ವರ್ ಪಾಠಕ್, ಪದ್ಮ ಸುಬ್ರಹ್ಮಣ್ಯಂ ಅವರಿಗೆ ಪದ್ಮ ವಿಭೂಷಣ ಸಿಕ್ಕಿದೆ. ಪದ್ಮ ಶ್ರೀ ಪುರಸ್ಕೃತರಲ್ಲಿ ನಾಲ್ವರು ಫ್ರಾನ್ಸ್ ನಾಗರಿಕರು ಸೇರಿದ್ದಾರೆ. ಫ್ರಾನ್ಸ್ ನಾಗರಿಕರಾದ ಚಾರ್ಲೊಟ್ಟೆ ಚೋಪಿನ್, ಕಿರಣ್ ವ್ಯಾಸ್, ಪಿಯೆರೆ ಸಿಲ್ವಿಯನ್ ಫಿಲಿಯೋಜಾಟ್ ಮತ್ತು ಫ್ರೆಡ್ ನೆಗ್ರಿಟ್ ಅವರಿಗೆ ಪದ್ಮಶ್ರೀ ದೊರಕಿದೆ. ಒಂದು ವರ್ಷದಲ್ಲಿ ಒಂದೇ ದೇಶದ ನಾಲ್ವರಿಗೆ ಪದ್ಮ ಪ್ರಶಸ್ತಿಗಳು ಸಿಕ್ಕಿದ್ದು ಇದೇ ಮೊದಲು. ಈ ನಾಲ್ವರೂ ಕೂಡ ಭಾರತದೊಂದಿಗೆ ಸಾಂಸ್ಕೃತಿಕವಾಗಿ ಮತ್ತು ಶೈಕ್ಷಣಿಕವಾಗಿ ಜೋಡಿತವಾಗಿರುವುದು ವಿಶೇಷ.

ಶತಾಯುಷಿ ಫ್ರೆಂಚ್ ಮಹಿಳೆ ಚಾರ್ಲೊಟ್ಟೆ ಚೋಪಿನ್: ಚಾರ್ಲೊಟ್ಟೆ ಚಾಪಿನ್ (Charlotte Chopin) ಅವರು ಶತಾಯುಷಿ ಮಹಿಳೆಯಾಗಿದ್ದು (100 ವರ್ಷ ವಯಸ್ಸಿನವರು) ಯೋಗ ಸಾಧಕರಾಗಿ ಗುರುತಿಸಿಕೊಂಡಿದ್ದಾರೆ. 50ನೇ ವಯಸ್ಸಿನಲ್ಲಿ ಯೋಗಾಭ್ಯಾಸ ಆರಂಭಿಸಿದ ಚಾರ್ಲೊಟ್ಟೆ ತಮ್ಮ ವಯಸ್ಸು ಹೆಚ್ಚಾದಂತೆಲ್ಲಾ ಯೋಗದ ಬಗೆಗಿನ ಆಸಕ್ತಿ ಹೆಚ್ಚಿಸಿಕೊಳ್ಳುತ್ತಾ ಬಂದಿದ್ದಾರೆ. ಕಳೆದ ವರ್ಷದ ಜುಲೈನಲ್ಲಿ ನರೇಂದ್ರ ಮೋದಿ ಅವರು ಫ್ರಾನ್ಸ್​ಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಪ್ಯಾರಿಸ್​ನಲ್ಲಿ ಚಾರ್ಲೊಟ್ಟೆ ಅವರನ್ನು ಭೇಟಿ ಮಾಡಿದ್ದರು.

Advertisement

ಸಂಸ್ಕೃತ ವಿದ್ವಾಂಸ ಪಿಯೆರೆ ಸಿಲ್ವಿಯನ್   ; ಪಿಯೆರೆ ಸಿಲ್ವಿಯನ್ ಫಿಲಿಯೋಜಾಟ್ (Pierre Sylvain Filliozat) ಅವರು ಸಂಸ್ಕೃತ ವಿದ್ವಾಂಸರು, ಬರಹಗಾರರೂ ಆಗಿದ್ದಾರೆ. 87 ವರ್ಷದ ಅವರು ಫ್ರಾನ್ಸ್ ದೇಶದಲ್ಲಿ ಭಾರತೀಯ ಸಂಸ್ಕೃತಿ ಅಧ್ಯಯನ ಕ್ಷೇತ್ರವನ್ನು ಬೆಳೆಸಿದ್ದಾರೆ. ಭಾರತದೊಂದಿಗಿನ ಇವರ ಸಂಬಂಧ ಬಹಳ ಗಾಢವಾದುದು. ಆರು ತಿಂಗಳು ಫ್ರಾನ್ಸ್​ನಲ್ಲಿ, ಮತ್ತಾರು ತಿಂಗಳು ಭಾರತದಲ್ಲಿ ಇವರು ಇರುತ್ತಾರೆ. ಪಾಂಡಿಚೆರಿಯಲ್ಲಿ ಫ್ರೆಂಚ್ ಇನ್ಸ್​ಟಿಟ್ಯೂಟ್ ಸ್ಥಾಪಿಸಿದ್ದಾರೆ. ಸಂಸ್ಕೃತ, ತಮಿಳು ಭಾಷೆ ಕಲಿತಿದ್ದಾರೆ. ಶೈವ ಆಗಮ, ವಿಶಿಷ್ಟಾದ್ವೈತ ಪ್ರಾಕಾರಗಳನ್ನು ಕರಗತ ಮಾಡಿಕೊಂಡಿದ್ದಾರೆ.

ಯೋಗ, ಆಯುರ್ವೇದ ಸಾಧಕ ಕಿರಣ್ ವ್ಯಾಸ್ ; ಕಿರಣ್ ವ್ಯಾಸ್ ಅವರು ಜಾಗತಿಕ ಯೋಗ ಮತ್ತು ಆಯುರ್ವೇದ ಸಾಧಕರಾಗಿದ್ದಾರೆ. ಗುಜರಾತ್ ಮೂಲದ 79 ವರ್ಷದ ಕಿರಣ್ ವ್ಯಾಸ್ ಲೇಖಕರೂ ಹೌದು. ಯೋಗ ಮತ್ತು ಆಯುರ್ವೇದದ ಬಗ್ಗೆ ಹಲವು ಪುಸ್ತಕಗಳನ್ನು ಬರೆದಿದ್ದಾರೆ. ಫ್ರಾನ್ಸ್​ನಲ್ಲಿ ಆಯುರ್ವೇದ ಚಿಕಿತ್ಸೆ ನೀಡುವ ತಪೋವನ ಸ್ಥಾಪಿಸಿದ್ದಾರೆ.

Advertisement

ಇಂಡಾಲಜಿಸ್ಟ್ ಫ್ರೆಡ್ ನೆಗ್ರಿಟ್ ; ಫ್ರೆಡ್ ನೆಗ್ರಿಟ್ (Fred Negrit) ಅವರು ಫ್ರಾನ್ಸ್ ದೇಶದ ಪ್ರಮುಖ ಇಂಡಾಲಜಿಸ್ಟ್ ಎಂದು ಖ್ಯಾತರಾಗಿದ್ದಾರೆ. ಭಾರತೀಯ ಸಾಂಸ್ಕೃತಿಕ ಇತಿಹಾಸದ ಬಗ್ಗೆ ಇವರು ಸಾಕಷ್ಟು ಅಧ್ಯಯನ ಮಾಡಿದ್ದಾರೆ ಎನ್ನಲಾಗಿದೆ. ಫ್ರಾನ್ಸ್ ದೇಶದ ನಾಲ್ವರು ಮಾತ್ರವಲ್ಲ ಮೆಕ್ಸಿಕೋದ ಪ್ರಕಾಶ್ ಸಿಂಗ್, ಪಪುವಾ ನ್ಯೂಗಿನಿಯಾದ ಶಶೀಂಧ್ರನ್ ಮುತುವೇಲ್ (Sasindran Muthuvel) ಅವರಿಗೂ ಪದ್ಮ ಶ್ರೀ ಪ್ರಶಸ್ತಿಗಳು ಬಂದಿವೆ. ಫಾಕ್ಸ್​ಕಾನ್ ಸಿಇಒ ಯಂಗ್ ಲಿಯು ಅವರಿಗೆ ಪದ್ಮಭೂಷಣ ಪ್ರಶಸ್ತಿ ಕೊಟ್ಟು ಗೌರವಿಸಲಾಗಿದೆ.

Source ; ಅಂತರ್ಜಾಲ ಮಾಹಿತಿ

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಅಡಿಕೆ ಮೇಲೆ ಕ್ಯಾನ್ಸರ್‌ ತೂಗುಗತ್ತಿಯ ಭಯ ಏಕೆ ? | ಅಡಿಕೆಯ ಔಷಧೀಯ ಅಧ್ಯಯನ ಸಾಕಷ್ಟಿದೆ | ಈಗ ಸಂಘಟಿತ ಹೋರಾಟ ಅಗತ್ಯ |
November 22, 2024
9:02 PM
by: ದ ರೂರಲ್ ಮಿರರ್.ಕಾಂ
ಅಡಿಕೆ ಕ್ಯಾನ್ಸರ್‌ಕಾರಕವಲ್ಲ | WHO ವರದಿ ಸತ್ಯಕ್ಕೆ ದೂರವಾದುದು | ಅಧ್ಯಯನದ ನೆರವಿಗೆ ಕೇಂದ್ರ ಸರ್ಕಾರಕ್ಕೆ ಮನವಿ | ಕ್ಯಾಂಪ್ಕೊ ಅಧ್ಯಕ್ಷ ಕಿಶೋರ್‌ ಕುಮಾರ್‌ ಕೊಡ್ಗಿ ಹೇಳಿಕೆ |
November 22, 2024
4:02 PM
by: ದ ರೂರಲ್ ಮಿರರ್.ಕಾಂ
ನ.23 | ಗುತ್ತಿಗಾರು ಸಹಕಾರಿ ಸಂಘದ ಶತಮಾನೋತ್ಸವ | ಕೃಷಿ ವಿಚಾರಗೋಷ್ಠಿ | ಅಡಿಕೆ ರೋಗಗಳ ಬಗ್ಗೆ ಮಾಹಿತಿ ವಿನಿಮಯ |
November 22, 2024
2:32 PM
by: ದ ರೂರಲ್ ಮಿರರ್.ಕಾಂ
ಕೋಲಾರದಲ್ಲಿ ಅತೀ ಹೆಚ್ಚು ನಕಲಿ ವೈದ್ಯರು…! | ನಕಲಿ ವೈದ್ಯರ ಕಡಿವಾಣಕ್ಕೆ ಕಟ್ಟುನಿಟ್ಟಿನ ಕ್ರಮ
November 21, 2024
7:36 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror