ಕಳೆದ ವಾರ ಒಂದು ಅದ್ಭುತ ನಡೆಯಿತು. ಅದೊಂದು ಸಣ್ಣ ಸುದ್ದಿಯೂ ಆಗಲಿಲ್ಲ. ಆಗಬೇಕಿತ್ತು, ಆಗಲಿಲ್ಲ…!
ನಮ್ಮಲ್ಲಿ ರಾಜಕಾರಣ(Politics), ಸಿನಿಮಾ(Cinema), ಧರ್ಮ, ಹಿಂಸೆ ಸುದ್ದಿ ಬಿತ್ತಿ ಬೆಳೆ ತೆಗೆಯುವ ಕೆಲಸ ತುಂಬಾ. ಇರಲಿ. ನವಮಾಧ್ಯಮಗಳ ಮೂಲೆಯಲ್ಲಿ ಈ ಅದ್ಭುತ ಸುದ್ದಿ ಸಿಕ್ಕಿತು.
ಅದು ಒಂದು ಹಕ್ಕಿಯ ಪಯಣ: ಪಕ್ಷಿಗಳ(Bird) ಜೀವನವೇ ವಿಸ್ಮಯ, ಅದರಲ್ಲೂ ಹಕ್ಕಿಗಳ ವಲಸೆ(Migration) ಕಥೆ ಎಂದೆಂದಿಗೂ ರೋಚಕ. ಎಲ್ಲೋ ದೂರದ ಸೈಬೀರಿಯಾದಿಂದ(Siberia) ಹಾರಿ ಭಾರತದ(India) ಪಶ್ಚಿಮ ಘಟ್ಟದ(Western Ghat) ಶ್ರೇಣಿಯಲ್ಲಿ ಗೂಡು(Nest) ಕಟ್ಟಿ ಒಂದು ಋತು ಕಳೆಯಲು ಬರುತ್ತೆ ಎಂದರೆ ಇದು ಮಹಾ ವಲಸೆಯ ಸಣ್ಣ ಝಲಕ್ ಎನ್ನಬಹುದು. ಎರಡು ವರ್ಷಗಳ ಹಿಂದೆ ಕೀನ್ಯಾದಿಂದ(Kenya) ಒಂದು ವಾರದಲ್ಲಿ 6300 ಕಿ.ಮೀ ಕ್ರಮಿಸಿ ಒನೊನ್ ಕೋಗಿಲೆ ಭಾರತಕ್ಕೆ ಬಂದಿತ್ತು. ಈಗ ಇಂಥದ್ದೇ ಸುದ್ದಿ ಆಸ್ಟ್ರೇಲಿಯಾದಿಂದ(Australia) ಬಂದಿದೆ.
ಅಲಾಸ್ಕಾದಿಂದ ತಾಸ್ಮೇನಿಯಾಕ್ಕೆ ಪುಟ್ಟ ಹಕ್ಕಿಯೊಂದು ಮಹಾ ಪ್ರಯಾಣ ಸಾಧಿಸಿದೆ. ಕಳೆದ 11 ದಿನ ಹಾಗೂ ಒಂದು ಗಂಟೆ ಅವಧಿಯಲ್ಲಿ ನಿರಂತರವಾಗಿ ಪ್ರಯಾಣಿಸಿ ವಿಶ್ವ ದಾಖಲೆ ಬರೆದಿದೆ. ಸರಿ ಸುಮಾರು 13,560 ಕಿ. ಮೀ (8,435 ಮೈಲಿ) ಪ್ರಯಾಣ ಮಾಡಿದ್ದು Bar-tailed god wit ಎಂಬ ಪುಟ್ಟ ಹಕ್ಕಿ. ಈ ವಿಶ್ವದಾಖಲೆ ಪ್ರಯಾಣ ಮಾಡಿದ ಹಕ್ಕಿಗೆ ಇನ್ನೂ ಐದು ತಿಂಗಳ ಪ್ರಾಯ. ಬಾರ್-ಟೈಲ್ಡ್ ಗೋಡ್ವಿಟ್ ಹಕ್ಕಿಗಳು ವಲಸೆಗೆ ಹೆಸರುವಾಸಿ. ಉತ್ತರಧ್ರುವ-ದಕ್ಷಿಣಧ್ರುವ ನಡುವೆ ಈ ಹಕ್ಕಿಗಳು ಆಹಾರ ವಿಹಾರಕ್ಕಾಗಿ ಹಾರಾಡುವುದುಂಟು. ವಿಜ್ಞಾನಿಗಳು 5ಜಿ ಉಪಗ್ರಹ ಟ್ಯಾಗ್ ಅನ್ನು ಹಕ್ಕಿಯ ಬೆನ್ನ ಹಿಂಬದಿಗೆ ಅಳವಡಿಸಿ, ಹಕ್ಕಿಯ ಪ್ರಯಾಣದ ಅಂಕಿ ಅಂಶ ಕಲೆ ಹಾಕುತ್ತಾರೆ.
ಅಕ್ಟೋಬರ್ ನಲ್ಲಿ ವಲಸೆ ಅಧ್ಯಯನಕ್ಕಾಗಿ ವಿಜ್ಞಾನಿಗಳು ಐದು ತಿಂಗಳು ಪ್ರಾಯದ, 400 ಗ್ರಾಂ ತೂಕದ ಗೋಡ್ವಿಟ್ ಹಕ್ಕಿಯೊಂದಕ್ಕೆ 5G ಸಾಟಲೈಟ್ ಟ್ಯಾಂಗಿಂಗ್ ಮಾಡಿದ್ದಾರೆ. ಆಮೇಲೆ ಅದು ಎಲ್ಲಿಗೆ ಹೋಗುತ್ತದೆ, ಏನು ಮಾಡುತ್ತದೆ ಎಂದು ಹಾರಾಟವನ್ನು ಮಾನಿಟರ್ ಮಾಡಿದ್ದಾರೆ. ಅಲಾಸ್ಕಾದಿಂದ ಅಕ್ಟೋಬರ್ 13ರಂದು ಈ ಹಕ್ಕಿ ಹಾರಿದೆ. ಆಮೇಲೆ ಎಲ್ಲೂ ಇಳಿದಿಲ್ಲ. ಆಹಾರ ನೀರೂ ಸೇವಿಸದೇ, ಸಮುದ್ರ ಸಾಗರಗಳ ಮೇಲೆ ಹಾರುತ್ತಾ ಹಾರುತ್ತಾ ಹನ್ನೊಂದನೇ ದಿನ ಆಸ್ಟ್ರೇಲಿಯಾದ ತಾಸ್ಮಾನಿಯಾದಲ್ಲಿ ಬಂದಿಳಿದಿದೆ. 13,560 ಕಿಮೀ ದೂರ Nonstop ಯಾನ! ಗಂಟೆಗೆ 51 ಕಿಮೀ ವೇಗದ ನಿರಂತರ ಪಯಣ!
ಗಾಡ್ ವಿಟ್ Limosa lapponica (ಸ್ಯಾಟಲೈಟ್ ಟ್ಯಾಗ್ ಸಂಖ್ಯೆ 234684) (ಕರ್ನಾಟಕದಲ್ಲಿ ಪಟ್ಟೆಬಾಲದ ಹಿನ್ನೀರಗೊರವಹಕ್ಕಿ ಎಂದು ಕರೆಯಲಾಗುತ್ತದೆ) ಮ್ಯಾರಥಾನ್ ಪ್ರಯಾಣವನ್ನು ಅಕ್ಟೋಬರ್ 13ರಂದು ಅಲಾಸ್ಕಾದಿಂದ ಆರಂಭಿಸಿ, ಎಲ್ಲೂ ವಿಶ್ರಮಿಸದೆ ಅವಿರತವಾಗಿ 11 ದಿನಗಳು ಹಾಗೂ ಒಂದು ಗಂಟೆಗಳ ಪ್ರಯಾಣ ಸಾಧಿಸಿ, ಈಶಾನ್ಯ ತಾಸ್ಮೇನಿಯಾಕ್ಕೆ ಬಂದಿದೆ ಎಂದು ಉಪಗ್ರಹ ಅಂಕಿ ಅಂಶ ತಿಳಿಸಿದೆ.
Uff! What a Trip! ಯಾವ ವಿಮಾನ, ಯಾವ ಜಿಪಿಎಸ್, ಯಾವ ಲೆಕ್ಕ? Nature is Wild! Just incredible! Fantastic! Amazing!
(ಪರಿಸರ ಪರಿವಾರದಿಂದ ಸಂಗ್ರಹಿಸಿದ್ದು)
ಭೀಮಣ್ಣ ಹುಣಶೀಕಟ್ಟಿ
The five-month-old bar-tailed godwit left Alaska on October 13 and touched down in Ansons Bay in northeast Tasmania, Australia, on October 24. Scientists say the bird, known simply as 234684, flew a minimum of 8,425 miles (13,560km) in 11 days and one hour without stopping.