ದೇಶದಲ್ಲಿ 138.34 ಕೋಟಿ ಆಧಾರ್ ಸಂಖ್ಯೆಗಳು ನೋಂದಣಿ

December 10, 2024
6:41 AM

ಭಾರತದ ಡಿಜಿಟಲ್ ಮೂಲ ಸೌಕರ್ಯವು ಅಭೂತಪೂರ್ವ ಬೆಳವಣಿಗೆ ಸಾಧಿಸಿದ್ದು, ಇಲ್ಲಿಯವರೆಗೆ 138.34 ಕೋಟಿ ಆಧಾರ್ ಸಂಖ್ಯೆಗಳು ನೋಂದಣಿಯಾಗಿವೆ. ಡಿಜಿ ಲಾಕರ್‌ನಂತಹ ಪ್ರಮುಖ ಡಿಜಿಟಲ್ ವೇದಿಕೆಗಳು ಈಗ 776 ಕೋಟಿ ದಾಖಲೆಗಳೊಂದಿಗೆ  37 ಕೋಟಿ ಬಳಕೆದಾರರನ್ನು ಹೊಂದಿದೆ. ಭಾರತದ ಡಿಜಿಟಲ್ ಆರ್ಥಿಕತೆಯು ಕ್ಲೌಡ್ ಕಂಪ್ಯೂಟಿಂಗ್, ಎಐ ಮತ್ತು ಡಿಜಿಟಲ್ ಗವರ್ನ್ಸೆ ಆಧಾರಿತವಾಗಿವೆ ಎಂದು ಮಾಹಿತಿ ಮತ್ತು ಪ್ರಸಾರ ಸಚಿವಾಲಯ ತಿಳಿಸಿದೆ.

Advertisement

ಇದೇ ವೇಳೆ ಯುಪಿಐ ವಹಿವಾಟು ನವೆಂಬರ್‌ನಲ್ಲಿ15.48 ಶತಕೋಟಿ ತಲುಪಿದ್ದು, 21.55  ಲಕ್ಷ ಕೋಟಿ ರೂಪಾಯಿಗಳಷ್ಟು ಮೌಲ್ಯದ ವಹಿವಾಟು ನಡೆಸಿದೆ. 2025  ರ ವೇಳೆಗೆ ಯುಪಿಐ ಮಾಸಿಕ ವಹಿವಾಟು 25  ಶತಕೋಟಿ ತಲುಪುವ ನಿರೀಕ್ಷೆಯಿದೆ. ಭಾರತದ ಡೇಟಾ ಸೆಂಟರ್ ವಲಯವು ಕ್ಷಿಪ್ರವಾಗಿ ವಿಸ್ತರಣೆಗೊಳ್ಳುತ್ತಿದ್ದು, ರಾಷ್ಟ್ರೀಯ ಡೇಟಾ ಕೇಂದ್ರಗಳು – ಎನ್‌ಡಿಸಿ ದೆಹಲಿ, ಪುಣೆ, ಭುವನೇಶ್ವರ್ ಮತ್ತು ಹೈದರಾಬಾದ್‌ನಲ್ಲಿ ಸೇವೆಗಳನ್ನು ಒದಗಿಸುತ್ತಿವೆ. ಸುಮಾರು 300 ಸರ್ಕಾರಿ ಇಲಾಖೆಗಳು ಈಗ ಕ್ಲೌಡ್ ಸೇವೆಗಳನ್ನು ಬಳಸುತ್ತಿವೆ. ಮುಖ್ಯವಾಗಿ ಉಮಂಗ್, ಕೋವಿನ್ ಮತ್ತು ಆರೋಗ್ಯ ಸೇತುನಂತಹ ವೇದಿಕೆಗಳು ಭಾರತದ ಡಿಜಿಟಲ್ ಸೌಲಭ್ಯದ ಸಾಮರ್ಥ್ಯವನ್ನು ವೃದ್ಧಿಸಿದೆ.

Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಹವಾಮಾನ ವರದಿ | 09-07-2025 | ಇಂದು ಸಾಮಾನ್ಯ ಮಳೆ | ಜುಲೈ 16 ರಿಂದ ಮುಂಗಾರು ದುರ್ಬಲಗೊಳ್ಳಬಹುದಾ ? |
July 9, 2025
1:47 PM
by: ಸಾಯಿಶೇಖರ್ ಕರಿಕಳ
ಜೋಯಿಡಾದ ಗ್ರಾಮದಲ್ಲಿ ಸೇತುವೆ ಕುಸಿತ | ತಾತ್ಕಾಲಿಕ ಕಾಲು ಸಂಕ ನಿರ್ಮಾಣ |
July 9, 2025
10:57 AM
by: The Rural Mirror ಸುದ್ದಿಜಾಲ
ಮಕ್ಕಳ ಪುಟ | ನಿಮ್ಮ ಚಿತ್ರ-ನಮ್ಮ ಬೆಳಕು | ಶಿಖರ್ ಬಿ.ಕೆ.
July 9, 2025
7:44 AM
by: ದ ರೂರಲ್ ಮಿರರ್.ಕಾಂ
ಮಕ್ಕಳ ಪುಟ | ನಿಮ್ಮ ಚಿತ್ರ-ನಮ್ಮ ಬೆಳಕು | ಕ್ರಿಶನ್ ಎಸ್ ಭಟ್
July 9, 2025
7:18 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror

Join Our Group