ಭಾರತದ ಡಿಜಿಟಲ್ ಮೂಲ ಸೌಕರ್ಯವು ಅಭೂತಪೂರ್ವ ಬೆಳವಣಿಗೆ ಸಾಧಿಸಿದ್ದು, ಇಲ್ಲಿಯವರೆಗೆ 138.34 ಕೋಟಿ ಆಧಾರ್ ಸಂಖ್ಯೆಗಳು ನೋಂದಣಿಯಾಗಿವೆ. ಡಿಜಿ ಲಾಕರ್‌ನಂತಹ ಪ್ರಮುಖ ಡಿಜಿಟಲ್ ವೇದಿಕೆಗಳು ಈಗ 776 ಕೋಟಿ ದಾಖಲೆಗಳೊಂದಿಗೆ 37 ಕೋಟಿ ಬಳಕೆದಾರರನ್ನು ಹೊಂದಿದೆ. ಭಾರತದ ಡಿಜಿಟಲ್ ಆರ್ಥಿಕತೆಯು ಕ್ಲೌಡ್ ಕಂಪ್ಯೂಟಿಂಗ್, ಎಐ ಮತ್ತು ಡಿಜಿಟಲ್ ಗವರ್ನ್ಸೆ ಆಧಾರಿತವಾಗಿವೆ ಎಂದು ಮಾಹಿತಿ ಮತ್ತು ಪ್ರಸಾರ ಸಚಿವಾಲಯ ತಿಳಿಸಿದೆ.
ಇದೇ ವೇಳೆ ಯುಪಿಐ ವಹಿವಾಟು ನವೆಂಬರ್‌ನಲ್ಲಿ15.48 ಶತಕೋಟಿ ತಲುಪಿದ್ದು, 21.55 ಲಕ್ಷ ಕೋಟಿ ರೂಪಾಯಿಗಳಷ್ಟು ಮೌಲ್ಯದ ವಹಿವಾಟು ನಡೆಸಿದೆ. 2025 ರ ವೇಳೆಗೆ ಯುಪಿಐ ಮಾಸಿಕ ವಹಿವಾಟು 25 ಶತಕೋಟಿ ತಲುಪುವ ನಿರೀಕ್ಷೆಯಿದೆ. ಭಾರತದ ಡೇಟಾ ಸೆಂಟರ್ ವಲಯವು ಕ್ಷಿಪ್ರವಾಗಿ ವಿಸ್ತರಣೆಗೊಳ್ಳುತ್ತಿದ್ದು, ರಾಷ್ಟ್ರೀಯ ಡೇಟಾ ಕೇಂದ್ರಗಳು – ಎನ್‌ಡಿಸಿ ದೆಹಲಿ, ಪುಣೆ, ಭುವನೇಶ್ವರ್ ಮತ್ತು ಹೈದರಾಬಾದ್‌ನಲ್ಲಿ ಸೇವೆಗಳನ್ನು ಒದಗಿಸುತ್ತಿವೆ. ಸುಮಾರು 300 ಸರ್ಕಾರಿ ಇಲಾಖೆಗಳು ಈಗ ಕ್ಲೌಡ್ ಸೇವೆಗಳನ್ನು ಬಳಸುತ್ತಿವೆ. ಮುಖ್ಯವಾಗಿ ಉಮಂಗ್, ಕೋವಿನ್ ಮತ್ತು ಆರೋಗ್ಯ ಸೇತುನಂತಹ ವೇದಿಕೆಗಳು ಭಾರತದ ಡಿಜಿಟಲ್ ಸೌಲಭ್ಯದ ಸಾಮರ್ಥ್ಯವನ್ನು ವೃದ್ಧಿಸಿದೆ.
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಕಾವೇರಿ ನದಿ ತೀರದಲ್ಲಿ ಅಸ್ತಿ ವಿಸರ್ಜನೆ ಮಾಡಿ ನದಿ…
ದ ಕ ಜಿಲ್ಲೆಯಲ್ಲಿ ಅಡಿಕೆಗೆ ಕೊಳೆರೋಗ ಭಾದಿಸಿದ್ದು ಇದರಿಂದ ಅಡಿಕೆ ಬೆಳೆಗಾರರು ಸಂಕಷ್ಟಕ್ಕೆ…
15.08.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕರಾವಳಿ :…
ಒಂದು ಹಸುವಿನ ಸಗಣಿಯಿಂದ ಪ್ರತಿ ವರ್ಷ 225 ಲೀಟರ್ ಪೆಟ್ರೋಲ್ಗೆ ಸಮಾನವಾದ ಮೀಥೇನ್…
ಕನ್ನಡದ ಸ್ಥಿತಿ ಇಂದು ಬೇಲಿ ಇಲ್ಲದ ತೋಟದಂತೆ, ಬಾಗಿಲಿಲ್ಲದ ಮನೆಯಂತಾಗಿದ್ದು, ನಾಲಿಗೆ ಶುದ್ಧೀಕರಣ,…