15 ವರ್ಷಗಳಿಂದ ಮನೆಯಿಂದ ದೂರವಾಗಿದ್ದ ವ್ಯಕ್ತಿಯನ್ನು ಮತ್ತೆ ಮನೆಗೆ ಸೇರಿಸಿದ ಸಾಯಿನಿಕೇತನ ಸೇವಾಶ್ರಮ

September 28, 2019
10:03 AM
ರಸ್ತೆ ಬದಿ ಯಾರೋ ಅಲೆದಾಟ ಮಾಡುತ್ತಿರುತ್ತಾರೆ. ಅನೇಕರಿಗೆ ಅದೊಂದು ತುಚ್ಛ ಜೀವದಾರೆ, ದೈಗೋಳಿಯ ಸಾಯಿನಿಕೇತನ ಸೇವಾಶ್ರಮಕ್ಕೆ ಅಂತಹವರ ಸೇವೆಯೇ ದೇವರ ಕಾರ್ಯ. ಅಲ್ಲಿಗೆ ಸೇರಿದ ಬಳಿಕ ಚಿಕಿತ್ಸೆ ನೀಡಿ ನೆನಪು ಮರುಕಳಿಸಿದ ನಂತರ ಮತ್ತೆ ಸಂತಸದ ವಾತಾವರಣ ಕಂಡುಬರುತ್ತದೆ. ಅಂತಹದ್ದೇ ಒಂದು ಘಟನೆ ಇದು. ಸೇವಾಶ್ರಮದ  ಮಾನವೀಯ  ಕಾರ್ಯಕ್ಕೆ ಇದೊಂದು ಅಳಿಲ ಸೇವೆಯ ಫೋಕಸ್…

ಸೆಪ್ಟೆಂಬರ್ 20, 2019. ಪಂಜಾಬ್ ನ ಫೈಸಲಾಬಾದ್ ನ  ಗ್ರಾಮವೊಂದರಲ್ಲಿ  ಮೀರಾಬಾಯಿ ಅವರ ಮನೆಯಲ್ಲಿ ಹಬ್ಬದ ವಾತಾವರಣ.  ಕಳೆದ 15 ವರ್ಷಗಳಿಂದ ಮನೆಯಿಂದ ದೂರವಾಗಿ ಕಾಣೆಯಾಗಿದ್ದ ಮನೆ ಯಜಮಾನ  ವಿಂದುಪ್ರಸಾದ್ ಯಾದವ್ ಪುನಃ ಮನೆ ಸೇರಿದ ಸಂತಸದ ದಿನವದು. ಈ ಸಂದರ್ಭದಲ್ಲಿ  ಮನೆ ಮಂದಿಯೆಲ್ಲ ಕೃತಜ್ಞತಾ ಪೂರ್ವಕವಾಗಿ ಅಭಿನಂದಿಸುತ್ತಿರುವುದು ದೈಗೋಳಿಯ ಸಾಯಿನಿಕೇತನ ಸೇವಾಶ್ರಮವನ್ನು.
15 ವರ್ಷಗಳ ಹಿಂದೆ ಕೃಷಿಕರಾಗಿದ್ದ ವಿಂದೂ ಪ್ರಸಾದ್ ಯಾದವ್ ಮಾನಸಿಕ ವಿಕಲಚೇತನರಾದ  ಕಾರಣದಿಂದ  ತಮ್ಮ ಊರನ್ನು ಬಿಟ್ಟು ಹೋಗಿದ್ದರು.ಅವರ‌ ಕುಟುಂಬಸ್ಥರು ಪೋಲಿಸ್ ಠಾಣೆಯಲ್ಲಿ ದೂರು ನೀಡಿ ಸಾಕಷ್ಟು ಹುಡುಕಿದರೂ ಪ್ರಯೋಜನವಾಗಲಿಲ್ಲ. ಇದೀಗ ಒಂದು ತಿಂಗಳ ಹಿಂದೆ ದಿಢೀರನೆ ಪೋಲೀಸ್ ಸ್ಟೇಷನ್ ನಿಂದ  ಬಂದ ಫೋನ್ ಕಾಲ್ ಆಧರಿಸಿ ಕಾಣಚ್ಚೂರು ಆಸ್ಪತ್ರೆಯ ಮಾನಸಿಕ ವಿಭಾಗಕ್ಕೆ ಬಂದ ಅವರ ಮಗ ಮಿಸ್ರೀಲಾಲರಿಗೆ ತಮ್ಮ ತಂದೆಯನ್ನು ಕಂಡು ಅತೀವ ಸಂತಸ. ಆದರೆ 15 ವರ್ಷಗಳ ಹಿಂದೆ ನೋಡಿದ್ದ ಮಾನಸಿಕ ರೋಗಿ ತತ್‍ಕ್ಷಣ ತನ್ನ ಮಗನನ್ನು ಗುರುತಿಸಲಿಲ್ಲ. ಮುಂದಿನ ಒಂದು ತಿಂಗಳ‌ ಚಿಕಿತ್ಸೆಯ ನಂತರ ಇದೀಗ ವಿಂದುಪ್ರಸಾದ್  ತನ್ನ ಮನೆಗೆ ಹೋಗಲು ಸಮ್ಮತಿಸಿದ್ದು ದಿಲ್ಲಿಯಲ್ಲಿ ಕೆಲಸ ಮಾಡುತ್ತಿರುವ ಮಿಸ್ರೀಲಾಲ್ ತನ್ನ ತಂದೆ ಯನ್ನು ಮನೆಗೆ ಕರೆದೊಯ್ದಿದ್ದಾರೆ.
ಹೀಗಾಯಿತು ಇದು :ಊರು ಬಿಟ್ಟು ಎಲ್ಲೆಲ್ಲೋ ಅಲೆದಾಡುತ್ತಿದ್ದ ವಿಂದೂ ಪ್ರಸಾದ್ ಕಳೆದ ಆರು ತಿಂಗಳ ಹಿಂದೆ ಮಂಜೇಶ್ದರ ಅಸುಪಾಸಿನಲ್ಲಿ ತಿರುಗಾಡುತ್ತಿದ್ದ ವಿಚಾರ ತಿಳಿದು ದೈಗೋಳಿಯ ಸಾಯಿ ನಿಕೇತನ ಸೇವಾಶ್ರಮದ ಮುಖ್ಯಸ್ಥ ಡಾ. ಉದಯಕುಮಾರ್ ಅವರನ್ನು ಕರೆತಂದು, ಆರೈಕೆ, ಔಷಧೋಪಚಾರ ನೀಡಿ ಸಲಹಿದರು.
ಹೆಚ್ಚಿನ ಮಾನಸಿಕ ಚಿಕಿತ್ಸೆಗಾಗಿ ಅವರನ್ನು ಕಾಣಚ್ಚೂರು ಆಸ್ಪತ್ರೆಗೆ ಸೇರಿಸಲಾಯಿತು. ಅಲ್ಲಿಯ ಡಾ.ಪ್ರದ್ಯುಮ್ನ ಹಾಗೂ ತಂಡದವರ ಚಿಕಿತ್ಸಾ ಸಮಯದಲ್ಲಿ ಅವರು ನೀಡಿದ ಮಾಹಿತಿಯನುಸಾರ ಪೋಲಿಸರ ಸಹಕಾರದಿಂದ ಮನೆ ಮಂದಿಯನ್ನು ಪತ್ತೆ ಹಚ್ಚಲಾಯಿತು.
ಇಂತಹ ಮಾನವೀಯ ಕಾರ್ಯದ ಕಡೆಗೆ ಬೆಳಕು ನೀಡುತ್ತಿರುವ ಸಾಯಿನಿಕೇತನ ಸೇವಾಶ್ರಮ ಈಗ ಮಾದರಿ ಎನಿಸಿದೆ.

Advertisement
Advertisement
Advertisement

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಈ ಬಾರಿಯ ಬಜೆಟ್‌ನಲ್ಲಿ ಅಡಿಕೆ ಬೆಳೆ ರಕ್ಷಣೆಗೆ 67 ಕೋಟಿ ರೂಪಾಯಿ ನಿರೀಕ್ಷೆ | ಕರ್ನಾಟಕ ಸರ್ಕಾರದಿಂದಲೂ ತನ್ನ ಪಾಲನ್ನು ಮೀಸಲಿಡಲು ಒತ್ತಾಯ |
January 24, 2025
8:57 PM
by: ದ ರೂರಲ್ ಮಿರರ್.ಕಾಂ
ವರ್ಷದ ಬಳಿಕ ಮನೆಗೆ ಸೇರಿದ ಬಿಹಾರದ ಮಹಿಳೆ | ಪುನರ್ಜನ್ಮ ನೀಡಿದ ಸಾಯಿನಿಕೇತನ ಸೇವಾಶ್ರಮ |
January 24, 2025
11:33 AM
by: ದ ರೂರಲ್ ಮಿರರ್.ಕಾಂ
ಶ್ರೀಲಂಕಾದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಾದರಿ |
January 23, 2025
8:49 PM
by: The Rural Mirror ಸುದ್ದಿಜಾಲ
ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ವಿಶೇಷ ಫಿಲ್ಟರ್ ಕಾಫಿ ಕೆಫೆ – ಸರ್ಕಾರ ಒಪ್ಪಂದ | ಕಾಫಿ ಉದ್ಯಮ ಉತ್ತೇಜಿಸಲು ಮಹತ್ವದ ಹೆಜ್ಜೆ |
January 23, 2025
10:46 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror