ಕೇಂದ್ರ ವಾಣಿಜ್ಯ ಕೈಗಾರಿಕೆಗಳ ಸಚಿವಾಲಯ ಸಹಯೋಗದೊಂದಿಗೆ ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಕೇಂದ್ರ ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವಾಲಯದ ಕಾರ್ಯದರ್ಶಿ ಡಾ.ಸುಬ್ರತಾ ಗುಪ್ತಾ ಅವರೊಂದಿಗೆ ಕೈಗಾರಿಕಾ ಸಂವಾದ ಆಯೋಜಿಸಲಾಗಿತ್ತು. ಡಾ.ಸುಬ್ರತಾ ಗುಪ್ತಾ ಮಾತನಾಡುತ್ತಾ, ಪ್ರತಿ ಮನೆಯಲ್ಲೂ ಆಹಾರ ಸಂಸ್ಕರಣೆಯ ಸಾಂಪ್ರದಾಯಿಕ ಚಟುವಟಿಕೆಗಳನ್ನು ಪರಿಣಾಮಕಾರಿಯಾಗಿ ಸಣ್ಣ ಘಟಕಗಳಾಗಿ ಕಾರ್ಯನಿರ್ವಹಿಸುತ್ತಿವೆ. ಪ್ರಸ್ತುತ ಅಡುಗೆ ಮನೆಯಲ್ಲೂ ಸಹ ಸಣ್ಣ ಆಹಾರ ಅಂಶಗಳು ಸವಾಲುಗಳನ್ನು ಹೆಚ್ಚಿಸಿವೆ. ತರಕಾರಿ ಮತ್ತು ಹಣ್ಣುಗಳಲ್ಲಿ ಶೇಕಡ 15 ರಷ್ಟು ತ್ಯಾಜ್ಯ ಉತ್ಪತ್ತಿಯಾಗುತ್ತಿದ್ದು, ಆಹಾರ ಸಂಸ್ಕರಣೆ ಪ್ರಕ್ರಿಯೆಯನ್ನು ಉತ್ತಮಗೊಳಿಸಲು ಎಲ್ಲಾ ರೀತಿಯ ಕ್ರಮಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಉಪಕೃಷಿ ಮಾರುಕಟ್ಟೆ ಸಲಹೆಗಾರ ಜೆ.ಪಿ.ಡೊಂಗಾರೆ ಸೇರಿದಂತೆ ಉದ್ಯಮಿಗಳು ಉಪಸ್ಥಿತರಿದ್ದರು.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel