ಬಾಂಗ್ಲಾದೇಶದಿಂದ ಭಾರತಕ್ಕೆ ಅಡಿಕೆ ರಫ್ತು ಮಾಡಲು ಕಳೆದ ಎರಡು ತಿಂಗಳಿನಿಂದ ಸಿದ್ಧತೆ ನಡೆಯುತ್ತಿದೆ. ಇದೀಗ ಸುಮಾರು 100 ಕೋಟಿ ರೂಪಾಯಿ ಮೌಲ್ಯದ 150 ಕ್ಕೂ ಹೆಚ್ಚು ಲಾರಿಗಳು ಬಾಂಗ್ಲಾದೇಶದ ಬೆನಪೋಲ್ ಬಂದರಿನಲ್ಲಿ ನಿಂತಿವೆ ಎಂದು ಅಲ್ಲಿನ ಮಾಧ್ಯಮ ವರದಿ ಮಾಡಿದೆ. ಭಾರತಕ್ಕೆ ಪ್ರವೇಶಿಸಲು ಅನುಮತಿಗಾಗಿ ಕಾಯುತ್ತಿವೆ ಎನ್ನುವ ಮಾಹಿತಿ ಇದೆ.
ಈಚೆಗಷ್ಟೇ ಅಧಿವೇಶನದಲ್ಲಿ ಸಂಸದ ಬಿ ವೈ ರಾಘವೇಂದ್ರ ಅವರ ಪ್ರಶ್ನೆಗೆ ವಾಣಿಜ್ಯ ಸಚಿವಾಲಯದಿಂದ ಲಭ್ಯವಾಗಿರುವ ಮಾಹಿತಿ ಪ್ರಕಾರ ಬಾಂಗ್ಲಾದೇಶದಿಂದ 2024-25 ನೇ ಸಾಲಿನಲ್ಲಿ 12155 ಮೆಟ್ರಿಕ್ ಟನ್ ಅಡಿಕೆ ಆಮದು ಆಗಿತ್ತು. ಈ ವರ್ಷ ಅಂದರೆ 2025–26ರ ಆರ್ಥಿಕ ವರ್ಷದ ಮೊದಲ ಐದು ತಿಂಗಳಲ್ಲಿ 10,650 ಟನ್ ಅಡಿಕೆಯನ್ನು ಭಾರತಕ್ಕೆ ರಫ್ತು ಮಾಡಲಾಗಿದೆ ಎಂದು ಬಾಂಗ್ಲಾದೇಶದ ಬೆನಪೋಲ್ ಬಂದರಿನ ಅಧಿಕಾರಿಗಳು ಹೇಳಿದ್ದಾರೆ. ಇದೀಗ 150 ಕ್ಕೂ ಹೆಚ್ಚು ಲಾರಿಗಳು ಅಡಿಕೆಯನ್ನು ಹೊತ್ತು ಕಳೆದ ಎರಡು ತಿಂಗಳನಿಂದ ಭಾರತಕ್ಕೆ ಸಾಗಾಟಕ್ಕೆ ಕಾದು ನಿಂತಿವೆ. ಆದರೆ ಭಾರತದಿಂದ ಅಡಿಕೆ ಗುಣಮಟ್ಟದ ಬಗ್ಗೆ ಖಾತ್ರಿ ಲಭ್ಯವಾಗದ ಹಿನ್ನೆಯಲ್ಲಿ ಹಾಗೂ ಗುಣಮಟ್ಟ ಪರಿಶೀಲನೆಯಲ್ಲಿನ ವಿಳಂಬದ ಕಾರಣದಿಂದ ಭಾರತಕ್ಕೆ ಬರಲು ತಡವಾಗಿದೆ. ಹೀಗಾಗಿ ಬಾಂಗ್ಲಾದೇಶದ ರಫ್ತುದಾರರಿಗೂ ನಷ್ಟವಾಗುತ್ತಿದೆ. ಹೀಗಾಗಿ ಭಾರತಕ್ಕೆ ಅಡಿಕೆ ರವಾನೆ ಮಾಡುವ ಬಗ್ಗೆ ಉನ್ನತಮಟ್ಟದಲ್ಲಿ ಮಾತುಕತೆಗಳನ್ನು ನಡೆಸುತ್ತಿದ್ದಾರೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ.
ಬಾಂಗ್ಲಾದೇಶ ದೇಶವು ವಾರ್ಷಿಕವಾಗಿ ಸುಮಾರು 700 ಕೋಟಿ ಟನ್ ಮೌಲ್ಯದ ಅಡಿಕೆಯನ್ನು ಭಾರತಕ್ಕೆ ರಫ್ತು ಮಾಡುತ್ತದೆ ಎಂದು ಅಲ್ಲಿನ ದಾಖಲೆ ಹೇಳುತ್ತದೆ. ಈ ಬಾರಿ ಬಾಂಗಾದೇಶದಿಂದ ಶೇ. 37 ರಷ್ಟು ರಫ್ತು ಏರಿಕೆಯಾಗಿತ್ತು. ಹಿಂದಿನ ವರ್ಷಕ್ಕಿಂತ ಸುಮಾರು ನಾಲ್ಕು ಪಟ್ಟು ಹೆಚ್ಚಾಗಿತ್ತು. ಆದರೆ ಆಗಸ್ಟ್ ನಂತರ ಅಡಿಕೆ ಭಾರತಕ್ಕೆ ಬರುವುದಕ್ಕೆ ತಡೆಯಾಗಿದೆ. ಈಗ ಅಡಿಕೆ ಗುಣಮಟ್ಟದ ಮೇಲೆ ಭಾರತವೂ ನಿಯಮಗಳನ್ನು ವಿಧಿಸಿದೆ. ಹೀಗಾಗಿ ಸಮಸ್ಯೆ ಆಗಿದೆ. ಈಗ ಈ ಅಡಿಕೆ ಮತ್ತೆ ಭಾರತಕ್ಕೆ ಪ್ರವೇಶವಾಗದಂತೆ ಆಡಳಿತವು ಗಮನಹರಿಸಿದರೆ ಭಾರತದ ಅಡಿಕೆ ಧಾರಣೆ ಸ್ಥಿರತೆ ಹಾಗೂ ಏರಿಕೆ ಸಾಧ್ಯತೆ ಇದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ.

