150 ರೂಪಾಯಿ ದಾಟಿದ ರಬ್ಬರ್ ಧಾರಣೆ

June 13, 2019
4:00 PM

ಸುಳ್ಯ: ಅನೇಕ ಸಮಯಗಳ ಬಳಿಕ ರಬ್ಬರ್ ಧಾರಣೆ 150 ರೂಪಾಯಿ ದಾಟಿದೆ. ಕಳೆದ ವಾರ 145 ರೂಪಾಯಿ ಆಸುಪಾಸಿನಲ್ಲಿ ಇದ್ದ ಧಾರಣೆ ಗುರುವಾರದಂದು 151 ರೂಪಾಯಿಗೆ ತಲಪಿದೆ.

Advertisement
Advertisement

ಕಳೆದ ವರ್ಷದ ಕೇರಳದಲ್ಲಿ ಉಂಟಾದ ವಾತಾವರಣದ ಪ್ರತಿಕೂಲ ಪರಿಸ್ಥಿತಿಯಿಂದ ಕೇರಳದಲ್ಲಿ ರಬ್ಬರ್ ಉತ್ಪಾದನೆಯಲ್ಲಿ  ಗಣನೀಯ ಇಳಿಕೆ ಕಂಡಿದ್ದರೆ ವಿದೇಶದಲ್ಲೂ ರಬ್ಬರ್ ಬೇಡಿಕೆ ಹೆಚ್ಚಾಗಿದೆ. ಆದರೆ ಪೂರೈಕೆ ಸಾಧ್ಯವಾಗದ ಹಿನ್ನೆಲೆಯಲ್ಲಿ  ಧಾರಣೆ ಏರಿಕೆಯಾಗುತ್ತಿದೆ. ಇದೀಗ ಮಳೆಗಾಲ ಆರಂಭವಾದ ಬಳಿಕ ರಬ್ಬರ್ ಗೆ ಪ್ಲಾಸ್ಟಿಕ್ ಅಳವಡಿಕೆ ಕಾರ್ಯ ನಡೆಯುತ್ತಿದೆ. ನಂತರ ಟ್ಯಾಪಿಂಗ್ ಆರಂಭವಾಗುವ ಹೊತ್ತಿಗೆ ಧಾರಣೆಯಲ್ಲಿ  ಇಳಿಕೆ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗುತ್ತಿದೆ.

2018 ರಲ್ಲಿ ವಿಶ್ವದ ಬಳಕೆಯಲ್ಲಿ ಶೇ 40 ರಷ್ಟು ರಬ್ಬರ್ ಬಳಕೆ ಇತ್ತು. ಇದೀಗ ಬಹುಪಾಲು ರಬ್ಬರ್ ಬಳಕೆ ಹೊಂದಿರುವ ಚೀನಾದ ಬಳಕೆ 2019 ರಲ್ಲಿ 3.2 ಶೇಕಡದಿಂದ 5.85 ಮಿ.ಟಿ.ಗೆ ಹೆಚ್ಚಳವಾಗಲಿದೆ ಎಂದು ನಿರೀಕ್ಷಿಸಲಾಗಿದೆ.

ಪ್ರಾಥಮಿಕ ಅಂದಾಜು ಪ್ರಕಾರ, ಭಾರತವು 2018 ರ ಅವಧಿಯಲ್ಲಿ 1.218 ಮೆಟ್ರಿಕ್ ಟನ್ ರಬ್ಬರ್ ಬಳಕೆ ಮಾಡಿದ್ದರೆ ಈ ವರ್ಷ ಶೇ 12.6 ರಷ್ಟು ಏರಿಕೆಯಾಗಿದೆ.
2010-12ರ ಅವಧಿಯಲ್ಲಿ ರಬ್ಬರ್ ಬೆಲೆಯಲ್ಲಿ ಗಣನೀಯ ಏರಿಕೆ ಇದೆ ಎಂದು ಈ ಹಿಂದೆ ವಿಶ್ಲೇಷಣೆ ಮಾಡಲಾಗಿತ್ತು. ಹೀಗಾಗಿ ಈಗಿನ ಧಾರಣೆ ಅದಕ್ಕೆ ಪೂರಕವಾಗುತ್ತಿದೆ.
ಆಗಸ್ಟ್ 2018 ರಲ್ಲಿ ಕೇರಳದ ಪ್ರವಾಹದಿಂದಾಗಿ ಈ ಪ್ರವಾಹವು ಮಣ್ಣಿನ ಗುಣಮಟ್ಟವನ್ನು ಕುಸಿದಿದೆ. ಹೀಗಾಗಿ ಇಳುವರಿಯಲ್ಲೂ ಕೊರತೆ ಕಂಡಿದೆ. ಇದೆಲ್ಲಾ ಸದ್ಯ ಬೆಲೆ ಏರಿಕೆಗೆ ಕಾರಣವಾಗಿದೆ.

 

Advertisement

 

 

 

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ರಾಜ್ಯದಲ್ಲಿ ರಸಗೊಬ್ಬರ, ಬಿತ್ತನೆ ಬೀಜಕ್ಕೆ ಯಾವುದೇ ಕೊರತೆಯಿಲ್ಲ
July 25, 2025
7:36 AM
by: The Rural Mirror ಸುದ್ದಿಜಾಲ
ಅಡಿಕೆಗೆ ಕೊಳೆರೋಗ | ಮಳೆಯಲ್ಲೂ ಇವರು ಔಷಧಿ ಸಿಂಪಡಿಸುತ್ತಾರೆ..!
July 24, 2025
4:42 PM
by: The Rural Mirror ಸುದ್ದಿಜಾಲ
ಕೃಷಿಕರಿಗೆ ಕೈಕೊಟ್ಟ ಹವಾಮಾನ | ಅಡಿಕೆಗೆ ವ್ಯಾಪಕವಾಗಿ ಹರಡಿದ ಕೊಳೆರೋಗ | ರೋಗನಿಯಂತ್ರಣಕ್ಕೆ ಇನ್ನಿಲ್ಲದ ಪ್ರಯತ್ನದಲ್ಲಿ ಅಡಿಕೆ ಬೆಳೆಗಾರರು |
July 24, 2025
10:48 AM
by: ವಿಶೇಷ ಪ್ರತಿನಿಧಿ
ಹವಾಮಾನ ಆಧಾರಿತ ಬೆಳೆ ವಿಮೆಗೆ ಸಮಸ್ಯೆ | ಮಳೆ ಮಾಪನ ಯಂತ್ರಗಳ ನಿರ್ವಹಣೆ ಅವ್ಯವಸ್ಥೆ ಸರಿಪಡಿಸಲು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮನವಿ
July 23, 2025
7:21 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group