ಸುಳ್ಯ:ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಮೂರನೇ ಅವಧಿಯಲ್ಲಿ ಕೇವಲ 19 ತಿಂಗಳು ಮಾತ್ರ ಕಾಲಾವಕಾಶ ಸಿಕ್ಕಿತ್ತು. ಈ ಅವಧಿಯಲ್ಲಿ ಮಾಡಿದ ಕೆಲಸ ಕಾರ್ಯಗಳು ತೃಪ್ತಿದಾಯಕವಾಗಿತ್ತು ಎಂದು ಅಕಾಡೆಮಿ ನಿಕಟಪೂರ್ವಾಧ್ಯಕ್ಷ ಪಿ.ಸಿ.ಜಯರಾಮ ಹೇಳಿದ್ದಾರೆ.
ಸುಳ್ಯದ ವೆಂಕಟ್ರಮಣ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಇನ್ನಷ್ಟು ಸಮಯಾವಕಾಶ ಇರುತ್ತಿದ್ದರೆ ಹಮ್ಮಿಕೊಂಡ ಹಲವಾರು ಯೋಜನೆಗಳು ಪೂರ್ತಿಗೊಳಿಸಬಹುದಿತ್ತು. ಸೀಮಿತ ಅವಧಿಯಲ್ಲಿ ಹಲವು ಕೆಲಸ ಕಾರ್ಯಗಳನ್ನು ನಡೆಸಿದ ತೃಪ್ತಿ ಇದೆ ಎಂದು ಅವರು ಹೇಳಿದರು.
ರಾಷ್ಟ್ರೀಯ ಅರೆಭಾಷೆ ವಿಚಾರ ಸಂಕಿರಣ, ತರಬೇತಿ ಕಮ್ಮಟ, ಅರೆಭಾಷೆ ಸಾಹಿತ್ಯ ಸಮ್ಮೇಳನ, ಶ್ರೀ ವೆಂಕಟರಮಣ ದೇವರ ಘನ ಹರಿಸೇವೆ ದಾಖಲೀಕರಣ, ಅರೆಭಾಷೆ ಕಥೆಗಳ ಸಿ.ಡಿ ನಿರ್ಮಾಣ ಯೋಜನೆ, ಶಾಲಾ ಕಾಲೇಜುಗಳಲ್ಲಿ ಅರೆಭಾಷೆ ಕಾರ್ಯಕ್ರಮ, ಶಾಲಾ ಗ್ರಂಥಾಲಯಗಳಿಗೆ ಪುಸ್ತಕಗಳ ಕೊಡುಗೆ, ಪುಸ್ತಕಗಳ ಪ್ರಕಟಣೆ, ಮಂಗಳೂರು ವಿಶ್ವವಿದ್ಯಾಲಯದಲ್ಲಿ ಅರೆಭಾಷೆಗೆ ಮಾನ್ಯತೆ, ಆಕಾಶವಾಣಿಯಲ್ಲಿ ಅರೆಭಾಷೆ ಕಾರ್ಯಕ್ರಮ ಯೋಜನೆ, ತ್ರೈಮಾಸಿಕ ಪತ್ರಿಕೆ ಹಿಂಗಾರದ ಚಂದಾದಾರರು ವೃದ್ಧಿ, ಅರೆಭಾಷೆ ಸಂಸ್ಕೃತಿ ಕಲಾಗ್ರಾಮ ನಿರ್ಮಾಣ ಯೋಜನೆ ಹಾಗೂ ಅರೆಭಾಷೆ ಅಧ್ಯಯನ ಪೀಠ ಸ್ಥಾಪನೆಗೆ ಪ್ರಯತ್ನ, ಅರೆಭಾಷೆ ಗೌರವ ಪ್ರಶಸ್ತಿ, ಅರೆಭಾಷೆ ಫೆಲೋಷಿಪ್, ಮೊದಲಾದ ಅನೇಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಹಮ್ಮಿಕೊಳ್ಳಲಾಯಿತು ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಅಕಾಡೆಮಿಯ ನಿಕಟಪೂರ್ವ ಸದಸ್ಯರಾದ ಎ.ಕೆ.ಹಿಮಕರ, ದಿನೇಶ್ ಹಾಲೆಮಜಲು, ಕೆ.ಟಿ.ವಿಶ್ವನಾಥ, ತಿರುಮಲೇಶ್ವರಿ ಜಾಲ್ಸೂರು, ಸುರೇಶ ಎಂ.ಎಚ್., ಯತೀಶ್‌ಕುಮಾರ್ ಗೌಡ, ಬಾರಿಯಂಡ ಜೋಯಪ್ಪ, ಕಡ್ಲೇರ ತುಳಸಿ ಮೋಹನ್, ಕಾಣೆಹಿತ್ಲು ಮೊಣ್ಣಪ್ಪ, ಕುಂಬುಗೌಡನ ಪ್ರಸನ್ನ, ದೇವರಾಜ ಬೇಕಲ್ ಉಪಸ್ಥಿತರಿದ್ದರು.
ಕಳೆದ ಮೂರು ವರ್ಷಗಳಿಂದ ಕಾಡಾನೆ ದಾಳಿಗೆ ಒಟ್ಟು 129 ಮಂದಿ ರೈತರು ಬಲಿಯಾಗಿದ್ದಾರೆ.…
ಬಂಗಾಳಕೊಲ್ಲಿಯ ಉತ್ತರ ಭಾಗದಲ್ಲಿ ಆಗಸ್ಟ್ 15ರಂದು ವಾಯುಭಾರ ಕುಸಿತ ಉಂಟಾಗುವ ಲಕ್ಷಣಗಳಿದ್ದು, ಈಗಿನಂತೆ…
ವೈಜ್ಞಾನಿಕ ಶಿಫಾರಸ್ಸಿನಂತೆ ರಾಸಾಯನಿಕ ಗೊಬ್ಬರ ಬಳಕೆ ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ…
ಕರಾವಳಿ ಸೇರಿದಂತೆ ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಧಾರಾಕಾರ ಮಳೆಯಾಗಿದೆ. ರಾಜ್ಯದ…
ತ್ಯಾಗಕ್ಕೊಂದು ಸ್ವ-ಸ್ವರೂಪ ಇದ್ದರೆ ಅದು ‘ಭೀಷ್ಮಾಚಾರ್ಯ’ರಿಗೆ ಹೊಂದುತ್ತದೆ. ತ್ಯಾಗವೆಂದರೆ ದೇಹವನ್ನು ಕಳೆದುಕೊಳ್ಳುವುದಲ್ಲ! ದೇಹವಿದ್ದೂ…
ವಿಜಯಪುರ ಜಿಲ್ಲೆಯಲ್ಲಿ ಮಳೆಯಿಂದ ಹಾನಿಗೊಳಗಾದ ಗ್ರಾಮೀಣ ರಸ್ತೆ, ಕೃಷಿ, ತೋಟಗಾರಿಕೆ ಬೆಳೆಗಳು, ಜನ-ಜಾನುವಾರುಗಳ…