19 ತಿಂಗಳಲ್ಲಿ ಅರೆಭಾಷೆ ಅಕಾಡೆಮಿಯ ಕೆಲಸ ತೃಪ್ತಿದಾಯಕ – ಪಿ.ಸಿ.ಜಯರಾಮ

October 26, 2019
4:51 PM

ಸುಳ್ಯ:ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಮೂರನೇ ಅವಧಿಯಲ್ಲಿ ಕೇವಲ 19 ತಿಂಗಳು ಮಾತ್ರ ಕಾಲಾವಕಾಶ ಸಿಕ್ಕಿತ್ತು. ಈ ಅವಧಿಯಲ್ಲಿ ಮಾಡಿದ ಕೆಲಸ ಕಾರ್ಯಗಳು ತೃಪ್ತಿದಾಯಕವಾಗಿತ್ತು ಎಂದು ಅಕಾಡೆಮಿ ನಿಕಟಪೂರ್ವಾಧ್ಯಕ್ಷ ಪಿ.ಸಿ.ಜಯರಾಮ ಹೇಳಿದ್ದಾರೆ.

ಸುಳ್ಯದ ವೆಂಕಟ್ರಮಣ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಇನ್ನಷ್ಟು ಸಮಯಾವಕಾಶ ಇರುತ್ತಿದ್ದರೆ ಹಮ್ಮಿಕೊಂಡ ಹಲವಾರು ಯೋಜನೆಗಳು ಪೂರ್ತಿಗೊಳಿಸಬಹುದಿತ್ತು. ಸೀಮಿತ ಅವಧಿಯಲ್ಲಿ ಹಲವು ಕೆಲಸ ಕಾರ್ಯಗಳನ್ನು ನಡೆಸಿದ ತೃಪ್ತಿ ಇದೆ ಎಂದು ಅವರು ಹೇಳಿದರು.

ರಾಷ್ಟ್ರೀಯ ಅರೆಭಾಷೆ ವಿಚಾರ ಸಂಕಿರಣ, ತರಬೇತಿ ಕಮ್ಮಟ, ಅರೆಭಾಷೆ ಸಾಹಿತ್ಯ ಸಮ್ಮೇಳನ, ಶ್ರೀ ವೆಂಕಟರಮಣ ದೇವರ ಘನ ಹರಿಸೇವೆ ದಾಖಲೀಕರಣ, ಅರೆಭಾಷೆ ಕಥೆಗಳ ಸಿ.ಡಿ ನಿರ್ಮಾಣ ಯೋಜನೆ, ಶಾಲಾ ಕಾಲೇಜುಗಳಲ್ಲಿ ಅರೆಭಾಷೆ ಕಾರ್ಯಕ್ರಮ, ಶಾಲಾ ಗ್ರಂಥಾಲಯಗಳಿಗೆ ಪುಸ್ತಕಗಳ ಕೊಡುಗೆ, ಪುಸ್ತಕಗಳ ಪ್ರಕಟಣೆ, ಮಂಗಳೂರು ವಿಶ್ವವಿದ್ಯಾಲಯದಲ್ಲಿ ಅರೆಭಾಷೆಗೆ ಮಾನ್ಯತೆ, ಆಕಾಶವಾಣಿಯಲ್ಲಿ ಅರೆಭಾಷೆ ಕಾರ್ಯಕ್ರಮ ಯೋಜನೆ, ತ್ರೈಮಾಸಿಕ ಪತ್ರಿಕೆ ಹಿಂಗಾರದ ಚಂದಾದಾರರು ವೃದ್ಧಿ, ಅರೆಭಾಷೆ ಸಂಸ್ಕೃತಿ ಕಲಾಗ್ರಾಮ ನಿರ್ಮಾಣ ಯೋಜನೆ ಹಾಗೂ ಅರೆಭಾಷೆ ಅಧ್ಯಯನ ಪೀಠ ಸ್ಥಾಪನೆಗೆ ಪ್ರಯತ್ನ, ಅರೆಭಾಷೆ ಗೌರವ ಪ್ರಶಸ್ತಿ, ಅರೆಭಾಷೆ ಫೆಲೋಷಿಪ್, ಮೊದಲಾದ ಅನೇಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಹಮ್ಮಿಕೊಳ್ಳಲಾಯಿತು ಎಂದು ಅವರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಅಕಾಡೆಮಿಯ ನಿಕಟಪೂರ್ವ ಸದಸ್ಯರಾದ ಎ.ಕೆ.ಹಿಮಕರ, ದಿನೇಶ್ ಹಾಲೆಮಜಲು, ಕೆ.ಟಿ.ವಿಶ್ವನಾಥ, ತಿರುಮಲೇಶ್ವರಿ ಜಾಲ್ಸೂರು, ಸುರೇಶ ಎಂ.ಎಚ್., ಯತೀಶ್‌ಕುಮಾರ್ ಗೌಡ, ಬಾರಿಯಂಡ ಜೋಯಪ್ಪ, ಕಡ್ಲೇರ ತುಳಸಿ ಮೋಹನ್, ಕಾಣೆಹಿತ್ಲು ಮೊಣ್ಣಪ್ಪ, ಕುಂಬುಗೌಡನ ಪ್ರಸನ್ನ, ದೇವರಾಜ ಬೇಕಲ್ ಉಪಸ್ಥಿತರಿದ್ದರು.

Advertisement
Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಧಾರಾಕಾರ ಮಳೆ | ಹವಾಮಾನ ಇಲಾಖೆ ಮುನ್ಸೂಚನೆ
September 22, 2025
7:04 PM
by: ದ ರೂರಲ್ ಮಿರರ್.ಕಾಂ
ನವರಾತ್ರಿ – ದಸರಾ | ಶಕ್ತಿ ತತ್ತ್ವದ ವಿಜ್ಞಾನ ಮತ್ತು ಸಂಸ್ಕೃತಿ
September 22, 2025
7:35 AM
by: ಕುಮಾರಸುಬ್ರಹ್ಮಣ್ಯ ಮುಳಿಯಾಲ
ಇಂದಿನಿಂದ ‘ನವರಾತ್ರ ನಮಸ್ಯಾ’ | ವೈಭವದೊಂದಿಗೆ ಸಂಪನ್ನವಾದ ರಾಘವೇಶ್ವರ ಶ್ರೀಗಳ ಪುರಪುವೇಶ ಮೆರವಣಿಗೆ
September 22, 2025
7:26 AM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 21-09-2025 | ಸೆ.29 ರವರೆಗೆ ಅಲ್ಲಲ್ಲಿ ಮಳೆ ನಿರೀಕ್ಷೆ | ವಾಯುಭಾರ ಕುಸಿತದ ಪರಿಣಾಮ ಏನು..?
September 21, 2025
9:24 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror

Join Our Group