2 ನೇ ಬಾರಿಗೆ ಪ್ರಧಾನಿಯಾಗಿ ನರೇಂದ್ರ ಮೋದಿ ಪ್ರಮಾಣ ವಚನ ಸ್ವೀಕಾರ : ದೇಶಾದ್ಯಂತ ಸಂಭ್ರಮ, ಸಡಗರ

Advertisement

ನವದೆಹಲಿ : 68 ವರ್ಷದ ನರೇಂದ್ರ ದಾಮೋದರ ದಾಸ್ ಮೋದಿ ಭಾರತದ ಪ್ರಧಾನಮಂತ್ರಿಯಾಗಿ ಎರಡನೇ ಬಾರಿಗೆ ಗುರುವಾರ ಸಂಜೆ 7 ಗಂಟೆಗೆ ಪ್ರಮಾಣ ವಚನ ಸ್ವೀಕಾರ ಮಾಡಿದರು. ಇನ್ನೀಗ ನಮೋ 2.0 ಸರಕಾರ.

Advertisement

 

Advertisement
Advertisement

Advertisement

 

ರಾಷ್ಟ್ರಪತಿ ಭವನದ ರೈಸಿನಾ ಹಿಲ್ಸ್ ನಲ್ಲಿ  ನರೇಂದ್ರ ಮೋದಿ ಅವರಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಪ್ರಮಾಣ ವಚನ ಬೋಧಿಸಿದರು. ‘ನವ ಭಾರತ’ ನಿರ್ಮಾಣಕ್ಕೆ ಸಿದ್ಧವಾಗಿರುವ ಮೋದಿ ಅವರು ತಮ್ಮ ಹೊಸ ಸಚಿವ ಸಂಪುಟವನ್ನೂ ಇದೇ ಬಾರಿಗೆ ರಚಿಸಿಕೊಂಡರು. ಏಪ್ರಿಲ್ 11 ರಿಂದ ಮೇ  19 ರವರೆಗೆ ಏಳು ಹಂತಗಳಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿ ಎ ಮೈತ್ರಿಕೂಟ 352 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. ಅದರಲ್ಲೂ ಬಿಜೆಪಿ ಅತ್ಯಧಿಕ ಸ್ಥಾನ ಪಡೆಯಿತು.

Advertisement

 

Advertisement

 

ಪ್ರಮಾಣ ವಚನ ಕಾರ್ಯಕ್ರಮಕ್ಕೂ ಮುನ್ನ ಇಂದು ಮುಂಜಾನೆ ದೆಹಲಿಯಲ್ಲಿ ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಿ ಸ್ವಾತಂತ್ರ್ಯ ನಂತರ ಹುತಾತ್ಮರಾದ ಯೋಧರಿಗೆ ನರೇಂದ್ರ ಮೋದಿ ಪುಷ್ಪ ನಮನ ಸಲ್ಲಿಸಿದರು. ಮಹಾತ್ಮಾ ಗಾಂಧಿ ಮತ್ತು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ ಸಮಾಧಿ ಬಳಿ ತೆರಳಿ ಅಗಲಿದ ಹಿರಿಯ ಗಣ್ಯರಿಗೆ ಗೌರವ ನಮನ ಸಲ್ಲಿಸಿದರು.

Advertisement

 

 

Advertisement

Advertisement

ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಸುಮಾರು  8 ಸಾವಿರಕ್ಕೂ ಹೆಚ್ಚು ಅತಿಥಿಗಳು ಭಾಗವಹಿಸಿದ್ದರು. ಪೇಜಾವರ ಶ್ರೀ, ಮಂತ್ರಾಲಯ ಶ್ರೀ , ಆದಿಚುಂಚನಗಿರಿ ಶ್ರೀಗಳು ಸೇರಿದಂತೆ ರಾಜ್ಯದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಅನೇಕ ಗಣ್ಯರು ರಾಜ್ಯದಿಂದ ಭಾಗವಹಿಸಿದ್ದರು.

ಸಚಿವರಾಗಿ ರಾಜನಾಥ ಸಿಂಗ್,  ಅಮಿತ್ ಷಾ,  ನಿತಿನ್ ಗಡ್ಕರಿ ,  ಡಿ.ವಿ.ಸದಾನಂದ ಗೌಡ , ನಿರ್ಮಲಾ ಸೀತಾರಾಮನ್ , ರಾಮ್ ವಿಲಾಸ್ ಪಾಸ್ವಾನ್ , ರವಿ ಶಂಕರ್ ಪ್ರಸಾದ್,  ಸೇರಿದಂತೆ ವಿವಿಧ ಸಂಸದರು  ಪ್ರಮಾಣವಚನ ಸ್ವೀಕರಿಸಿದರು.

Advertisement

 

 

Advertisement

 

 

Advertisement

 

 

Advertisement
Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Advertisement

Be the first to comment on "2 ನೇ ಬಾರಿಗೆ ಪ್ರಧಾನಿಯಾಗಿ ನರೇಂದ್ರ ಮೋದಿ ಪ್ರಮಾಣ ವಚನ ಸ್ವೀಕಾರ : ದೇಶಾದ್ಯಂತ ಸಂಭ್ರಮ, ಸಡಗರ"

Leave a comment

Your email address will not be published.


*