ಕಾಸರಗೋಡು ಸಿಪಿಸಿಆರ್‌ಐ ಯಲ್ಲಿ ಎರಡು ವರ್ಷದ ತೆಂಗಿನ ಸಸಿಗಳು ರಿಯಾಯತಿ ದರದಲ್ಲಿ ಲಭ್ಯವಿದೆ. ಈ ಬಗ್ಗೆ ಸಂಸ್ಥೆಯ ಸಭೆಯಲ್ಲಿ ನಿರ್ಧಾರಕ್ಕೆ ಬರಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಎರಡು ವರ್ಷಕ್ಕಿಂತ ಮೇಲ್ಪಟ್ಟ ತೆಂಗಿನ ಸಸಿಗಳನ್ನು, ಈಗಿರುವ ತೆಂಗಿನ ಸಸಿಗಳ ಅರ್ಧದಷ್ಟು ದರಕ್ಕೆ ಮಾರಾಟ ಮಾಡಲು ಸಕ್ಷಮ ಪ್ರಾಧಿಕಾರವು ಅನುಮೋದಿಸಿದೆ. ಹೀಗಾಗಿ ನಿರ್ಧರಿಸಲಾದ ರಿಯಾಯಿತಿ ದರವು ದಾಸ್ತಾನಿನಲ್ಲಿರುವ ಎರಡು ವರ್ಷಗಳ ಹಳೆಯ ತೆಂಗಿನ ಸಸಿಗಳಿಗೆ ಮಾತ್ರ ಅನ್ವಯಿಸುತ್ತದೆ. ಈ ಆದೇಶಗಳು ತಕ್ಷಣದಿಂದ ಜಾರಿಗೆ ಬರುತ್ತವೆ ಮತ್ತು ದಾಸ್ತಾನು ಖಾಲಿಯಾಗುವವರೆಗೆ ಮುಂದುವರಿಯುತ್ತವೆ. ಅಗತ್ಯವಿರುವ ರೈತರು ಈ ಪ್ರಯೋಜನವನ್ನು ಪಡೆಯಲು ತಕ್ಷಣ ಸಿಪಿಸಿಆರ್‌ಐ ಕಾಸರಗೋಡು ವಿಭಾಗವನ್ನು ಸಂಪರ್ಕಿಸಲು ಕೋರಲಾಗಿದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement




