#EthanolBlendedPetrol | ದೇಶಾದ್ಯಂತ 20% ಎಥೆನಾಲ್ ಮಿಶ್ರಿತ ಪೆಟ್ರೋಲ್, E20 ಶೀಘ್ರದಲ್ಲಿ ಲಭ್ಯ | ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ

July 8, 2023
12:38 PM
ಪೆಟ್ರೋಲಿಯಂ ಉತ್ಪನ್ನಗಳು ದೇಶದ ಆರ್ಥಿಕತೆಗೆ ಬಹುದೊಡ್ಡ ಹೊರೆಯಾಗುತ್ತದೆ. ಅದರ ಜೊತೆಗೆ ಪರಿಸರ ಹಾನಿಗೂ ಕಾರಣವಾಗುತ್ತಿದೆ. ಅದಕ್ಕೆ ಆದಷ್ಟು ಕಡಿವಾಣ ಹಾಕಲು ಕೇಂದ್ರ ಸರ್ಕಾರ ಅನೇಕ ಪರ್ಯಾಯ ಕಂಡುಹಿಡಿಯುತ್ತಿದೆ. ಅದರ ಒಂದು ಭಾಗ ಎಥೆನಾಲ್‌ ಮಿಶ್ರಿತ ಪೆಟ್ರೋಲ್.

ದೇಶದ ಅತೀ ದೊಡ್ಡ ಆಮದು ಸಗಟು ಅಂದ್ರೆ ಅದು ಪೆಟ್ರೋಲಿಯಂ ಉತ್ಪನ್ನ. ದೇಶದ ಆರ್ಥಿಕತೆಗೆ ಬಹುದೊಡ್ಡ ಹೊರೆ ಜೊತೆಗೆ ಪರಿಸರ ಹಾನಿಗೂ ಕಾರಣವಾಗುತ್ತಿದೆ. ಅದಕ್ಕೆ ಆದಷ್ಟು ಕಡಿವಾಣ ಹಾಕಲು ಕೇಂದ್ರ ಸರ್ಕಾರ ಅನೇಕ ಪರ್ಯಾಯಗಳನ್ನು ಕಂಡು ಹಿಡಿಯುತ್ತಲೇ ಇದೆ. ಇದೀಗ ಒಂದು ಹೆಜ್ಜೆಯಾಗಿ 20 ಪ್ರತಿಶತ ಎಥೆನಾಲ್ ಮಿಶ್ರಿತ ಪೆಟ್ರೋಲ್, E20, 2025 ರ ವೇಳೆಗೆ ಭಾರತದಾದ್ಯಂತ ಲಭ್ಯವಾಗಲಿದೆ ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ತಿಳಿಸಿದ್ದಾರೆ.

Advertisement
ಭಾರತವು ಮುಂದಿನ ವರ್ಷದ ಏಪ್ರಿಲ್‌ನಿಂದ ಆಯ್ದ ಪೆಟ್ರೋಲ್ ಪಂಪ್‌ಗಳಲ್ಲಿ ಶೇಕಡಾ 20 ರಷ್ಟು ಎಥೆನಾಲ್‌ನೊಂದಿಗೆ ಪೆಟ್ರೋಲ್ ಪೂರೈಸಲು ಪ್ರಾರಂಭಿಸಲಿದೆ. ತೈಲ ಆಮದು ಅವಲಂಬನೆಯನ್ನು ಕಡಿತಗೊಳಿಸಲು ಮತ್ತು ಪರಿಸರ ಸಮಸ್ಯೆಗಳನ್ನು ಬಗೆಹರಿಸಲು ಸರಬರಾಜನ್ನು ಮತ್ತಷ್ಟು ಹೆಚ್ಚಿಸಲಾಗುತ್ತೆ ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ತಿಳಿಸಿದ್ದಾರೆ.
20 ಪ್ರತಿಶತ ಎಥೆನಾಲ್ ಮಿಶ್ರಿತ ಪೆಟ್ರೋಲ್, E20, 2025 ರ ವೇಳೆಗೆ ಭಾರತದಾದ್ಯಂತ ಲಭ್ಯವಿರುತ್ತದೆ. ನಿನ್ನೆ ನಡೆದ ಭಾರತೀಯ ಮರ್ಚೆಂಟ್ಸ್ ಚೇಂಬರ್‌ಗಳ ವರ್ಚುವಲ್ ಸಭೆಯ ನಂತರ ಮಾತನಾಡಿದ ಸಚಿವ ಹರ್ದೀಪ್ ಸಿಂಗ್ ಪುರಿ ಅವರು, ಮೊದಲ E20 ವಿಶೇಷ ಇಂಧನ ಔಟ್ಲೆಟ್ ಅನ್ನು ಈ ವರ್ಷದ ಫೆಬ್ರವರಿಯಲ್ಲಿ ತೆರೆಯಲಾಗಿತ್ತು, ನಂತರ ಇದರ ಸಂಖ್ಯೆ ಈಗಾಗಲೇ 600 ದಾಟಿದೆ. 2025 ರ ವೇಳೆಗೆ ದೇಶಾದ್ಯಂತ E20 ವಿಶೇಷ ಇಂಧನ ಔಟ್ಲೆಟ್​ಗಳು ಲಭ್ಯವಿರಲಿವೆ ಎಂದರು.

ಕಳೆದ ಒಂಬತ್ತು ವರ್ಷಗಳಲ್ಲಿ ಭಾರತವು ಪ್ರತಿಯೊಂದು ಕ್ಷೇತ್ರದಲ್ಲೂ ಬೆಳವಣಿಗೆಯನ್ನು ಕಂಡಿದೆ. ದೇಶವು ಈಗ ವಿಶ್ವದ ಮೂರನೇ ಅತಿದೊಡ್ಡ ಇಂಧನ ಗ್ರಾಹಕ, ಮೂರನೇ ಅತಿದೊಡ್ಡ ತೈಲ ಗ್ರಾಹಕ ಮತ್ತು ಮೂರನೇ ಅತಿದೊಡ್ಡ ಎಲ್‌ಪಿಜಿ ಗ್ರಾಹಕನಾಗಿ ನಿಂತಿರುವುದರಿಂದ ಬೆಳವಣಿಗೆ ಮತ್ತು ಶಕ್ತಿಯ ಪರಸ್ಪರ ಸಂಬಂಧವು ಸ್ಪಷ್ಟವಾಗಿ ಗೋಚರಿಸುತ್ತದೆ ಎಂದು ಅವರು ಹೇಳಿದರು. ದೇಶವು ನಾಲ್ಕನೇ ಅತಿದೊಡ್ಡ ಎಲ್‌ಎನ್‌ಜಿ ಆಮದುದಾರ, ನಾಲ್ಕನೇ ಅತಿದೊಡ್ಡ ರಿಫೈನರ್ ಮತ್ತು ವಿಶ್ವದ ನಾಲ್ಕನೇ ಅತಿದೊಡ್ಡ ಆಟೋಮೊಬೈಲ್ ಮಾರುಕಟ್ಟೆಯಲ್ಲಿ ನಿಂತಿದೆ. ಭಾರತದ ಬೆಳವಣಿಗೆಯು ಜಗತ್ತಿನಾದ್ಯಂತ ವಿಸ್ಮಯ ಮತ್ತು ವಿಶ್ವಾಸವನ್ನು ಹುಟ್ಟುಹಾಕಿದೆ. ಮತ್ತು ಪ್ರತಿಯೊಬ್ಬ ಭಾರತೀಯನ ಭರವಸೆ ಮತ್ತು ಹೆಮ್ಮೆಯ ಮೂಲವಾಗಿದೆ ಎಂದು ಸಚಿವ ಹರ್ದೀಪ್ ಸಿಂಗ್ ಪುರಿ ಹೇಳಿದರು.

Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಕೋಲಾರದಲ್ಲಿ ಸಾರ್ವಜನಿಕರು ಎಲ್ಲೆಂದರಲ್ಲಿ ಕಸ ಎಸೆದರೆ ಕ್ರಿಮಿನಲ್‌ ಕೇಸು – ಎಚ್ಚರಿಕೆ
July 11, 2025
7:22 AM
by: The Rural Mirror ಸುದ್ದಿಜಾಲ
ತೆಂಗು ಉತ್ಪಾದನೆ ಹೆಚ್ಚಿಸಲು‌ ಕೇರಳದಲ್ಲಿ ಪ್ಲಾನ್‌ | ಹೊಸ ಕೋರ್ಸ್‌ ಅಭಿವೃದ್ಧಿಪಡಿಸಲು ಚಿಂತನೆ |
July 10, 2025
8:18 AM
by: ದ ರೂರಲ್ ಮಿರರ್.ಕಾಂ
ಹೆದ್ದಾರಿಗಳಲ್ಲಿ ಹಸಿರು ಅಭಿಯಾನ | 4.78 ಕೋಟಿಗೂ ಹೆಚ್ಚು ಗಿಡಗಳ ನಾಟಿ
July 9, 2025
10:27 PM
by: The Rural Mirror ಸುದ್ದಿಜಾಲ
ಬಾಹ್ಯಾಕಾಶದಲ್ಲಿ ಹೆಸರುಕಾಳು, ಮೆಂತ್ಯ ಮೊಳಕೆಯೊಡೆಯುವ ಪ್ರಯೋಗ ಪ್ರಗತಿಯಲ್ಲಿ – ನಾಸಾ ಸ್ಪಷ್ಟನೆ
July 9, 2025
8:46 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group