ಮಡಿಕೇರಿ: ಕಳೆದ ವರ್ಷ ಕಳೆದ ವರ್ಷ ಪ್ರಕೃತಿ ವಿಕೋಪದಿಂದಾಗಿ ಉಂಟಾದ ಮನೆ ಹಾಗೂ ಬೆಳೆ ಹಾನಿ ಸಂಬಂಧ ಸಂತ್ರಸ್ತರರ ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ವತಿಯಿಂದ 3 ದಿನಗಳ ಕಾಲ ಏರ್ಪಡಿಸಲಾಗಿರುವ ಪರಿಹಾರ ಅದಾಲತ್‍ನಲ್ಲಿ ಸಂತ್ರಸ್ತರು ಪಾಲ್ಗೊಂಡು ತಮ್ಮ ಅಹವಾಲು ಸಲ್ಲಿಸಿದರು. ಸೋಮವಾರ 648 ಅರ್ಜಿಗಳು ಬಂದಿದ್ದು ಇದರಲ್ಲಿ 405 ಅರ್ಜಿಗಳನ್ನು ಸ್ಥಳದಲ್ಲೇ ಇತ್ಯರ್ಥ ಮಾಡಲಾಗಿದೆ. ಮೇ.29 ರವರೆಗೆ ಈ ಅದಾಲತ್ ನಡೆಯಲಿದೆ.
ಕಳೆದ ಬಾರಿ ಸಂಭವಿಸಿದ ಪ್ರಕೃತಿ ವಿಕೋಪದಿಂದಾಗಿ ಸಾಕಷ್ಟು ನಷ್ಟ ಉಂಟಾಯಿತು. ಜಾನುವಾರು, ಬೆಳೆ, ಮನೆ ಹಾನಿಯಾಯಿತು. ಆ ನಿಟ್ಟಿನಲ್ಲಿ ಜಿಲ್ಲಾಡಳಿತ ವತಿಯಿಂದ ಸಾಕಷ್ಟು ಪರಿಹಾರ ವಿತರಿಸಲಾಗಿದೆ. ಪರಿಹಾರ ನೀಡಲು ಬಿಟ್ಟು ಹೋಗಿದ್ದಲ್ಲಿ ಪರಿಹಾರ ಭರಿಸುವಂತಾಗಲು ಜಿಲ್ಲಾಡಳಿತ ವತಿಯಿಂದ ಪರಿಹಾರ ಅದಾಲತ್ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ. ಶೇ.90ರಷ್ಟು ಪರಿಹಾರ ತಲುಪಿದೆ. ಇನ್ನೂ ಶೇ.10 ರಷ್ಟು ಪರಿಹಾರ ಸಂತ್ರಸ್ತರಿಗೆ ತಲುಪದಿದ್ದಲ್ಲಿ ಅಂತಹ ಸಂತ್ರಸ್ತರು ಮೇ, 29 ರವರೆಗೆ ನಡೆಯುವ ಪರಿಹಾರ ಅದಾಲತ್‍ನಲ್ಲಿ ಪರಿಹರಿಸಿಕೊಳ್ಳಬಹುದಾಗಿದೆ ಎಂದು ಜಿಲ್ಲಾಧಿಕಾರಿ ಅವರು ಹೇಳಿದರು.
ಪ್ರಕೃತಿ ವಿಕೋಪದಿಂದ ಅನೇಕ ಮನೆಗಳ ಹಾನಿ ಮತ್ತು ಭೂಕುಸಿತ ಉಂಟಾಗಿ ಜಿಲ್ಲೆಯ ಕೆಲವು ಭಾಗಗಳಲ್ಲಿ ಗದ್ದೆ, ತೋಟಗಳು ಕೊಚ್ಚಿ ಹೋಗಿದ್ದು, ಕೆಲವು ಭಾಗಗಳಲ್ಲಿ ಗದ್ದೆ ತೋಟಗಳಲ್ಲಿ ಮಣ್ಣು ತುಂಬಿಕೊಂಡು ಇನ್ನೂ ಕೆಲವು ಭಾಗಗಳಲ್ಲಿ ಅತಿಯಾದ ಮಳೆಯಿಂದ ಫಸಲು ಕೊಳೆತು ಹೋಗಿ ಅಪಾರ ಬೆಳೆಹಾನಿ ಸಂಭವಿಸಿತ್ತು. ಬೆಳೆಹಾನಿ ಪ್ರಕರಣಗಳಲ್ಲಿ ಸರಕಾರವು ಆದ್ಯತೆ ಮೇರೆಗೆ ಪರಿಹಾರವನ್ನು ನೇರ ಪಾವತಿ ಮೂಲಕ ಸಂತ್ರಸ್ಥರ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡಿರುತ್ತದೆ. ಮನೆಹಾನಿ ಪ್ರಕರಣಗಳಲ್ಲಿ ಪೂರ್ಣ, ತೀವ್ರ ಮನೆಹಾನಿ ಸಂತ್ರಸ್ಥರನ್ನು ಮೊದಲ ಪಟ್ಟಿಯಲ್ಲಿ ಮತ್ತು ವಾಸಿಸಲು ಯೋಗ್ಯವಲ್ಲದ ಪ್ರದೇಶದಲ್ಲಿರುವ ಮತ್ತು ಅಪಾಯದ ಪ್ರದೇಶದಲ್ಲಿರುವ ಮನೆಗಳ ಸಂತ್ರಸ್ಥರನ್ನು ಎರಡನೇ ಪಟ್ಟಿಯಲ್ಲಿ ಸೇರಿಸಲಾಗಿದೆ. ಮೊದಲ ಪಟ್ಟಿಯಲ್ಲಿರುವ ಪೂರ್ಣ, ತೀವ್ರ ಮನೆಹಾನಿ ಪ್ರಕರಣಗಳಿಗೆ ನವೆಂಬರ್-2018 ರಿಂದ ಬಾಡಿಗೆ ಹಣವನ್ನು ಸಂತ್ರಸ್ತರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಜಮೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಅವರು ಹೇಳಿದರು.
ಉಪ ವಿಭಾಗಾಧಿಕಾರಿ ಟಿ.ಜವರೇಗೌಡ ಅವರ ಉಪಸ್ಥಿತಿಯಲ್ಲಿ ಪರಿಹಾರ ಅದಾಲತ್ ನಡೆಯಿತು. ತಹಶೀಲ್ದಾರ್ ನಟೇಶ್, ಕಂದಾಯ ಇಲಾಖೆ ನಾನಾ ಅಧಿಕಾರಿಗಳು ಇತರರು ಹಾಜರಿದ್ದರು.
ಅರಬ್ಬಿ ಸಮುದ್ರದ ದಕ್ಷಿಣ ಭಾಗದಲ್ಲಿ ಮುಂಗಾರು ದುರ್ಬಲಗೊಳ್ಳುವ ಲಕ್ಷಣಗಳಿವೆ. ಇದರಿಂದ ಜುಲೈ ತಿಂಗಳ…
ಮುಂದಿನ 24 ಗಂಟೆಗಳಲ್ಲಿ ದೆಹಲಿಯನ್ನು ಮುಂಗಾರು ಆವರಿಸುವ ಸಾಧ್ಯತೆಯಿದೆ. ಎರಡು ದಿನಗಳ ಹಿಂದೆ…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490
ಬಲಿತ ಹಲಸಿನ ಕಾಯಿ ಬ್ರೇಡ್ ರೋಲ್ : ಬೇಕಾಗುವ ಸಾಮಗ್ರಿಗಳು ಮತ್ತು ಮಾಡುವ…
ಪರಿಸರಕ್ಕೆ ಸಂಬಂಧಿಸಿದ ವಿವಿಧ ವಿಷಯಗಳಲ್ಲಿ ಸರ್ಕಾರ ಬೇಜಾವಾಬ್ದಾರಿ ತೋರಿದೆ ಎಂದು ಲೇಖಕ ಅರವಿಂದ್…
ಕಣ್ಣೂರು-ಬೆಂಗಳೂರು ರೈಲು ತಡವಾಗಿ ಆಗಮಿಸುತ್ತಿದ್ದು ರೈಲು ಪ್ರಯಾಣಿಕರಿಗೆ ಸಮಸ್ಯೆಯಾಗುತ್ತಿದೆ. ಹೀಗಾಗಿ ತಕ್ಷಣವೇ ಇಲಾಖೆ…