ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಶನಿವಾರ 2020-2021ನೇ ಸಾಲಿನ ಬಜೆಟ್ ಮಂಡನೆ ಮಾಡಿದ್ದಾರೆ. ಇದರ ಆಧಾರದಲ್ಲಿ ದರೆ ಏರಿಕೆ ಹಾಗೂ ಇಳಿಕೆಯಾಗುವ ವಸ್ತುಗಳು ಯಾವ್ಯಾವು ?
ವಿದೇಶಗಳಿಂದ ಆಮದು ಮಾಡಿಕೊಂಡ ನ್ಯೂಸ್ ಪ್ರಿಂಟ್ ಮೇಲಿನ ತೆರಿಗೆಯನ್ನು ತಗ್ಗಿಸಲಾಗಿದೆ. ಅದೇ ರೀತಿ ಎಲೆಕ್ಟ್ರಿಕ್ ವಾಹನಗಳು ಮತ್ತು ಮೊಬೈಲ್ ಫೋನ್‌ಗಳ ಮೇಲಿನ ತೆರಿಗೆಯನ್ನು ಕಡಿಮೆ ಮಾಡಲಾಗಿದೆ. ಪ್ಲಾಸ್ಟಿಕ್ ಆಧಾರಿತ ಕಚ್ಚಾ ವಸ್ತುಗಳ ಮೇಲಿನ ಕಸ್ಟಮ್ಸ್ ತೆರಿಗೆ ಇಳಿಸಲಾಗಿದೆ.
ಕಸ್ಟಮ್ಸ್ ಸುಂಕ ಹೆಚ್ಚಳದಿಂದಾಗಿ ಪೀಠೋಪಕರಣ, ಪಾದರಕ್ಷೆ ಬೆಲೆಗಳು ಏರಿಕೆಯಾಗಲಿವೆ. ಸಿಗರೇಟ್ ಮತ್ತು ತಂಬಾಕು ಉತ್ಪನ್ನಗಳ ಬೆಲೆಗಳು ಏರಿಕೆಯಾಗಲಿವೆ.
ದರ ಇಳಿಕೆಯಾಗಲಿರುವ ವಸ್ತುಗಳು:
ನ್ಯೂಸ್ ಪ್ರಿಂಟ್, ಹಗುರವಾದ ಕೋಟೆಡ್ ಕಾಗದ ಮೇಲೆ ಸುಂಕ ಶೇ 5ರಷ್ಟು ಇಳಿಕೆ
ಜವಳಿ ಹಾಗೂ ಪ್ಲಾಸ್ಟಿಕ್ ಉತ್ಪನ್ನ ತಯಾರಿಕೆಯಲ್ಲಿ ಬಳಸುವ ಶುದ್ಧೀಕರಿಸಿದ ತೆರೆಫಾಥಾಲಿಕ್ ಆಮ್ಲದ ಮೇಲಿನ ಸುಂಕ ಕಡಿತ.
ಕೃಷಿ-ಪಶು ಆಧಾರಿತ ಉತ್ಪನ್ನ, ತುನಾ ಬೈಟ್, ಸ್ಕಿಮ್ಡ್ ಹಾಲು, ಕೆಲವು ಆಲ್ಕೋಹಾಲ್ ಯುಳ್ಳ ಪೇಯಗಳು ಮೇಲೆ ಸೀಮಾ ಸುಂಕ ತೆಗೆದು ಹಾಕಲಾಗಿದೆ. ಮೊಬೈಲ್ ಫೋನ್‌ಗಳಿಗಾಗಿ ಬಿಡಿಭಾಗಗಳು.
ಎಲೆಕ್ಟ್ರಿಕ್ ವಾಹನ ಖರೀದಿಗೆ ಉತ್ತೇಜನ ಎಲೆಕ್ಟ್ರಿಕ್ ವಾಹನ ಖರೀದಿಗೆ ಉತ್ತೇಜನ , ಸೌರಫಲಕ, ಇಟ್ಟಿಗೆ, ಕಿವುಡು ಮೂಗರಿಗೆ ಬಳಸುವ ಸಾಧನಗಳು ಇತ್ಯಾದಿಗಳ ಮೇಲಿನ ಬೆಲೆ ಇಳಿಕೆಯಾಗಿದೆ.
ದರ ಏರಿಕೆಯಾಗಲಿರುವ ವಸ್ತುಗಳ:
ಪೀಠೋಪಕರಣಗಳು, ಸ್ಯಾಂಡಲ್ , ಸಿಗರೇಟ್, ತಂಬಾಕು ಉತ್ಪನ್ನಗಳು, ವೈದ್ಯಕೀಯ ಉಪಕರಣಗಳು, ಅಡುಗೆಮನೆಯಲ್ಲಿ ಬಳಸುವ ವಸ್ತುಗಳು
ಕ್ಲೇ ಐರನ್, ಸ್ಟೀಲ್, ಕಾಪರ್, ವಾಣಿಜ್ಯ ವಾಹನಗಳಿಗೆ ಬಿಡಿಭಾಗಗಳು, ವಾಲ್ ಪ್ಯಾನ್ ಗಳು