ಫೆಬ್ರವರಿ 1 ರಂದು ಬೆಳಿಗ್ಗೆ 11 ಗಂಟೆಗೆ ಕೇಂದ್ರ ಬಜೆಟ್ ಮಂಡನೆ ಆಗಲಿದೆ ಎಂದು ಕೇಂದ್ರ ಸರ್ಕಾರದ ಮೂಲಗಳು ತಿಳಿಸಿವೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಂ ಬಜೆಟ್ ಮಂಡನೆ ನಡೆಸಲಿದ್ದಾರೆ. ಒಂದು ದಿನ ಮುಂಚಿತವಾಗಿ ಜನವರಿ 31 ರಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಸಂಸತ್ತಿನ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಕೋವಿಡ್-19 ಮಾರ್ಗಸೂಚಿಗಳ ದೃಷ್ಟಿಯಿಂದ ಲೋಕಸಭೆ ಮತ್ತು ರಾಜ್ಯಸಭೆಯು ಕಾರ್ಯನಿರ್ವಹಿಸುತ್ತದೆ. ಹೀಗಾಗಿ ಸಮಯದಲ್ಲಿ ಬದಲಾವಣೆ ಇರುವ ಸಾಧ್ಯತೆ ಇದೆ. ಜನವರಿ 31 ಮತ್ತು ಫೆಬ್ರವರಿ 1 ರಂದು, ಎರಡೂ ಸದನಗಳ ಸಮಯವು ಬೆಳಿಗ್ಗೆ 11 ರಿಂದ ಇರುತ್ತದೆ ಎಂದು ಎಂದು ಲೋಕಸಭೆಯ ಬುಲೆಟಿನ್ ತಿಳಿಸಿದೆ.
ಜನವರಿ 31 ರಿಂದ ಪ್ರಾರಂಭವಾಗುವ ಬಜೆಟ್ ಅಧಿವೇಶನದಲ್ಲಿ ಕೋವಿಡ್ ಮಾನದಂಡಗಳೊಂದಿದೆ ಸಂಸತ್ತಿನ ಎರಡು ಸದನಗಳು ದಿನದ ಪ್ರತ್ಯೇಕ ಸಮಯಗಳಲ್ಲಿ ತಲಾ ಐದು ಗಂಟೆಗಳ ಕಾಲ ನಡೆಯಲಿದೆ. ಮೊದಲಾರ್ಧದಲ್ಲಿ ರಾಜ್ಯಸಭೆ ಮತ್ತು ದ್ವಿತೀಯಾರ್ಧದಲ್ಲಿ ಲೋಕಸಭೆ. ಲೋಕಸಭೆಯು ಫೆಬ್ರವರಿ 1 ರಂದು ಬೆಳೆಗ್ಗೆ 11 ಗಂಟೆಗೆ ಕೇಂದ್ರ ಬಜೆಟ್ ಮಂಡನೆಗಾಗಿ ಸಭೆ ಸೇರಲಿದ್ದು, ಫೆಬ್ರವರಿ 2 ರಿಂದ ಫೆಬ್ರವರಿ 11 ರವರೆಗೆ ಸಂಜೆ 4 ರಿಂದ ರಾತ್ರಿ 9 ರವರೆಗೆ ಅಧಿವೇಶನ ನಡೆಯಲಿದೆ.