2025ರ ವೇಳೆಗೆ ಸುಸ್ಥಿರದ ಗುರಿಗಳು ತಲುಪುವಂತಾಗಬೇಕು

September 1, 2019
4:00 PM

ಬೆಳ್ಳಾರೆ: ಸುಸ್ಥಿರ ಅಭಿವೃದ್ದಿಯ ಗುರಿಗಳ ವ್ಯಾಪ್ತಿಯು ಬಹಳ ವಿಶಾಲವಾಗಿದ್ದು, 2025ರ ವೇಳೆಗೆ ಈ ಗುರಿಗಳನ್ನು ನನಸಾಗಿಸಿಕೊಳ್ಳುವ ಪ್ರಯತ್ನ ನಡೆಸಬೇಕು ಎಂದು ರಾಜ್ಯ ಸುಸ್ಥಿರ ಅಭಿವೃದ್ಧಿ ಗುರಿಗಳ ಯೋಜನಾ ಆಯೋಗದ ಮುಖ್ಯ ಸಲಹೆಗಾರ್ತಿ ರೂಪಾ ಎಸ್.ಗೌಡ ಹೇಳಿದರು.

ಚಿಕ್ಕಮಗಳೂರಿನ ಮಯೂರ ಫೌಂಡೇಷನ್ ಹಾಗು ಸಮಾಜಕಾರ್ಯ ವಿಭಾದ ಸಹಭಾಗಿತ್ವದಲ್ಲಿ ಪೆರುವಾಜೆ ಡಾ|ಕೆ. ಶಿವರಾಮ ಕಾರಂತ ಕಾಲೇಜಿನಲ್ಲಿ ನಡೆದ ಸುಸ್ಥಿರ ಅಭಿವೃದ್ದಿಯ ಗುರಿಗಳು ಕಾರ್ಯಾಗಾರವನ್ನು ಉದ್ಘಾಟಿಸಿ ಮಾಹಿತಿ ನೀಡಿದ ಅವರು ಪ್ರತಿಯೊಂದು ಗ್ರಾಮದ ಪ್ರತಿಯೊಬ್ಬನೂ ಈ ಯೋಜನೆಯ ಸೌಲಭ್ಯವನ್ನು ಪಡೆಯುವಮತಾಗಬೇಕು. ಇದಕ್ಕಾಗಿ ನಾವೆಲ್ಲ ಪ್ರಾಮಾಣಿಕತನದಿಂದ ಶ್ರಮಿಸಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲ ರಾಘವ ಅವರು ವಹಿಸಿದರು. ವೇದಿಕೆಯಲ್ಲಿ ಪ್ರಾಧ್ಯಾಪಕರಾದ ಅರ್ಚನಾ, ಯತೀಶ್‍ಕುಮಾರ್, ಗಿರೀಶ್ ಉಪಸ್ಥಿತರಿದ್ದರು. ಪದವಿ ವಿದ್ಯಾರ್ಥಿನಿ ಕಾವ್ಯ ವಂದಿಸಿ, ಸ್ನಾತಕೋತ್ತರ ವಿಭಾಗದ ವಿದ್ಯಾರ್ಥಿ ರಮೇಶ್ ಕಾರ್ಯಕ್ರಮ ನಿರೂಪಿಸಿದರು. ಕಾಲೇಜಿನ ಉಪನ್ಯಾಸಕರು, ಸಮಾಜಕಾರ್ಯ ವಿಭಾಗದ ವಿದ್ಯಾರ್ಥಿಗಳು ಶಿಬಿರದಲ್ಲಿ ಭಾಗವಹಿಸಿದರು.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಎಲೆಯ ಫೋಟೋ ತೆಗೆದರೆ AI ಕೀಟ ಯಾವುದೆಂದು ಹೇಳುತ್ತದೆ…! – 73 ಬೆಳೆಗಳ ಮೇಲೆ ಭಾರತದ ಹೊಸ ಕೃಷಿ ಕಣ್ಗಾವಲು
August 24, 2026
10:24 PM
by: ದ ರೂರಲ್ ಮಿರರ್.ಕಾಂ
ಕರ್ನಾಟಕದ ಕೊಪ್ಪಳ ಹಸು, ಮದಗ್ಯಾಳ ಕುರಿಗೆ ರಾಷ್ಟ್ರೀಯ ಮಾನ್ಯತೆ – ದೇಶದ ಸ್ಥಳೀಯ ಜಾನುವಾರು ತಳಿಗಳ ಸಂಖ್ಯೆ 262ಕ್ಕೆ ಏರಿಕೆ
August 24, 2026
12:44 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 24-08-2026 | ಕರಾವಳಿಯಲ್ಲಿ ಮಳೆ ಮುಂದುವರಿಕೆ – ಕರ್ನಾಟಕದಲ್ಲಿ ಮಳೆ ಪರಿಸ್ಥಿತಿ ಹೇಗೆ..?
August 24, 2026
12:18 PM
by: ದ ರೂರಲ್ ಮಿರರ್.ಕಾಂ
ಉದ್ಯೋಗಗಳಿಲ್ಲವೇ? ಅಥವಾ ಉದ್ಯೋಗಕ್ಕೆ ಬೇಕಾದ ಕೌಶಲ್ಯವಿರುವವರು ಇಲ್ಲವೇ?
August 24, 2026
6:50 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror