“ಹಸಿರು ಭವಿಷ್ಯ”ಕ್ಕಾಗಿ ಪರಿಸರ ಸಮ್ಮೇಳನ

December 11, 2025
10:36 PM

ದಕ್ಷಿಣ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗಳು ಮತ್ತು ಸಮಿತಿಗಳ ಸಹೋಗದೊಂದಿಗೆ ಚೆನ್ನೈನ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ದಕ್ಷಿಣ ವಲಯ ಪೀಠವು ಆಯೋಜಿಸಿದ್ದ ಪರಿಸರದ ಕುರಿತಾದ ಪ್ರಾದೇಶಿಕ ಸಮ್ಮೇಳನ ಯಶಸ್ವಿಯಾಗಿ ಮುಕ್ತಾಯಗೊಂಡಿತು. ಈ 2025 ಸಮ್ಮೇಳನವನ್ನು ಎನ್ಜಿಟಿ ಅಧ್ಯಕ್ಷರಾದ ನ್ಯಾಯಮೂರ್ತಿ ಪ್ರಕಾಶ್ ಶ್ರೀವಾಸ್ತವ ಅವರ ನೇತೃತ್ವದಲ್ಲಿ, ಚೆನ್ನೈನ ದಕ್ಷಿಣ ವಲಯ ಪೀಠದ ಎನ್ಜಿಟಿ ನ್ಯಾಯಾಂಗ ಸದಸ್ಯರಾದ ನ್ಯಾಯಮೂರ್ತಿ ಪುಷ್ಪಾ ಸತ್ಯನಾರಾಯಣ ಅವರ ಮಾರ್ಗದರ್ಶನದಲ್ಲಿ ನಡೆಸಲಾಯಿತು.

ಕರ್ನಾಟಕದ ಹೈಕೋರ್ಟ್ ನ್ಯಾಯಾಧೀಶರಾದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ಅಧ್ಯಕ್ಷತೆಯಲ್ಲಿ ಕರಾವಳಿ ವಲಯಗಳನ್ನು ರಕ್ಷಿಸುವಲ್ಲಿನ ಸವಾಲುಗಳ ಕುರಿತು ನಡೆದ ಸಭೆಯಲ್ಲಿ, ಪ್ಲಾಸ್ಟಿಕ್ ಮಾಲಿನ್ಯ ಮತ್ತು ನಗರಾಭಿವೃದ್ಧಿಯಂತಹ ಮಾನವ ಚಟುವಟಿಕೆಗಳು ಸಮುದ್ರ ಜೀವಿಗಳು ಬೀರುವ ತೀವ್ರ ಪರಿಸರ ಪರಿಣಾಮವನ್ನು ಎತ್ತಿ ಹೇಳಲಾಯಿತು.

ವಿಜಯವಾಡದ ಪ್ರದೇಶಿಕ ಕಚೇರಿಯ ಹೆಚ್ಚುವರಿ ನಿರ್ದೇಶಕ ಎಂಒಇಎಫ್ & ಸಸಿ, ಡಾ. ಮುರಳಿ ಕೃಷ್ಣ ಅವರು, ಭಾರತದ 11,098.81 ಕಿ.ಮೀ. ಕರಾವಳಿಯು ಮಾಲಿನ್ಯದಿಂದಾಗಿ ಸಮಸ್ಯೆಗಳನ್ನು ಎದುರಿಸುತ್ತಿದೆ ಎಂದು ಹೇಳಿದ್ದಾರೆ. ವಾರ್ಷಿಕವಾಗಿ 11-12 ಮಿಲಿಯನ್ ಟನ್ ಪ್ಲಾಸ್ಟಿಕ್ ಬಿಡುಗಡೆಯಾಗುತ್ತದೆ ಮತ್ತು ಇದರಿಂದಾಗಿ ಸಮಸ್ಯೆಗೆ ಕಾರಣವಾಗಿದೆ. ಬಿಲಿಯನ್ ಜನರು ಸಾಗರಗಳ ಮೇಲೆ ಅವಲಂಬಿತವಾಗಿದ್ದಾರೆ ಮತ್ತು ಜಾಗತಿಕ ಪ್ರೋಟೀನ್ನ 20% ಮೀನುಗಳಿಂದ ಬರುತ್ತಿದೆ ಎಂಬ ಆರ್ಥಿಕ ಪರಿಣಾಮವನ್ನು ಅವರು ಹೇಳಿದರು. ಜೀವವೈವಿಧ್ಯತೆ ಮತು ಜೀವನೋಪಾಯಕ್ಕಾಗಿ ಹವಳದ ದಿಬ್ಬಗಳು ಮತ್ತು ಮ್ಯಾಂಗ್ರೋವ್ ಗಳ ಪ್ರಾಮುಖ್ಯತೆಯನ್ನು ಅವರು ಒತ್ತಿ ಹೇಳಿದರು.

ಕೇರಳ ಸರ್ಕಾರದ ಪರಿಸರ ಮತ್ತು ಹವಾಮಾನ ಬದಲಾವಣೆ ನಿರ್ದೇಶನಾಲಯದ ಪರಿಸರ ಎಂಜಿನಿಯರ್ ಮತ್ತು ಹೆಚ್ಚುವರಿ ಯೋಜನಾ ನಿರ್ದೇಶಕ ಡಾ. ಕಲೈಅರಸನ್, ಕರಾವಳಿ ವಲಯಗಳನ್ನು ರಕ್ಷಿಸುವಲ್ಲಿನ ಸವಾಲುಗಳ ಬಗ್ಗೆ ಮಾತನಾಡಿದರು.ವಿಶೇಷವಾಗಿ ಕೇರಳದಲ್ಲಿ, ಸವೆತ, ತ್ಯಾಜ್ಯ ನಿರ್ವಹಣಾ ಸಮಸ್ಯೆಗಳು ಮತ್ತು ಸವಾಲುಗಳಿಂದ ಬಳಲುತ್ತಿದೆ ಎಂದರು.

 

Advertisement
Advertisement
Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ರೂರಲ್‌ ಮಿರರ್ ಸುದ್ದಿಜಾಲ

ಇದನ್ನೂ ಓದಿ

2025-26 ರಲ್ಲಿ ಅಡಿಕೆ ಕೊಳೆರೋಗ ಮತ್ತು ಎಲೆಚುಕ್ಕಿ ರೋಗ ಪ್ರಕರಣ ವರದಿಯಾಗಿಲ್ಲ…!
December 17, 2025
7:54 AM
by: ದ ರೂರಲ್ ಮಿರರ್.ಕಾಂ
ಮನೆಯ ಮೇಲ್ಛಾವಣಿಯನ್ನು ಕೃಷಿ ಭೂಮಿಯನ್ನಾಗಿಸಿದ ಆಸಿಯಾ ಇತರ ಮಹಿಳೆಯರಿಗೂ ಇಂದು ಮಾದರಿ..
December 17, 2025
7:17 AM
by: ರೂರಲ್‌ ಮಿರರ್ ಸುದ್ದಿಜಾಲ
ನಮ್ಮ ಹೊಲ ನಮ್ಮ ದಾರಿ : ರಸ್ತೆಗೆ 12.5 ಲಕ್ಷ ಸಹಾಯಧನ
December 17, 2025
7:06 AM
by: ರೂರಲ್‌ ಮಿರರ್ ಸುದ್ದಿಜಾಲ
2025-26 ನೇ ಸಾಲಿನ ಕೃಷಿ ಇಲಾಖೆ ಸಹಾಯಧನ ಯೋಜನೆಗಳು
December 17, 2025
7:02 AM
by: ರೂರಲ್‌ ಮಿರರ್ ಸುದ್ದಿಜಾಲ

You cannot copy content of this page - Copyright -The Rural Mirror