ಒಂದು ದೇಶದ ಪ್ರಧಾನಿ(Prime Minister) ಹುದ್ದೆಗೇರುವವರಿಗೆ ದೇಶಧ ಮುಂದಿನ ಭವಿಷ್ಯದ ಬಗ್ಗೆ ದೂರಾಲೋಚನೆ ಇರಬೇಕು. ನಮ್ಮ ದೇಶದ ಪ್ರಧಾನಿ ಮೋದಿ(PM MOdi) ಕೂಡ ಇದೇ ಹಾದಿಯಲ್ಲಿ ಸಾಗುತ್ತಿದ್ದಾರೆ. 2047 ಗಮನದಲ್ಲಿಟ್ಟುಕೊಂಡು ಇನ್ನಷ್ಟು ಕೆಲಸ ಮಾಡುವುದು ಬಾಕಿ ಇದೆ. 2024 ಚುನಾವಣೆ ಬೇರೆ, 2047 ಬೇರೆ. 2047 ಭಾರತಕ್ಕೆ(India) ಸ್ವಾತಂತ್ರ್ಯ(Freedom) ಸಿಕ್ಕಿ 100 ವರ್ಷವಾಗಲಿದೆ. ಈ ಅವಧಿಗೆ ಮಾಡಬೇಕಾದ ಕೆಲಸಗಳ ಗುರಿ ಇರಬೇಕು ಎಂದು ಹೇಳುತ್ತಾ ಮುಂದಿನ 25 ವರ್ಷಕ್ಕೆ ತಯಾರಿಯ ಬಗ್ಗೆ ಪ್ರಧಾನಿ ಮೋದಿ (Narendra Modi) ಮಾತನಾಡಿದರು.
ನಾನು ದೊಡ್ಡ ಯೋಜನೆಗಳನ್ನು ಹೊಂದಿದ್ದೇನೆ. ಯಾರಿಗೂ ಹೆದರುವ ಅಗತ್ಯ ಇಲ್ಲ. ಯಾರನ್ನೂ ಹೆದರಿಸಲು ಅಥವಾ ಯಾರನ್ನೂ ಕಡಿಮೆ ಮಾಡಲು ನಾನು ನಿರ್ಧಾರ ತೆಗೆದುಕೊಳ್ಳುವುದಿಲ್ಲ. ಆ ನಿರ್ಧಾರಗಳು ದೇಶದ ಸರ್ವಾಂಗೀಣ ಅಭಿವೃದ್ಧಿಗಾಗಿ ಮಾಡಲಾಗಿದೆ ಎಂದು ತಿಳಿಸಿದರು.
ಚುನಾವಣೆಯನ್ನು ಲಘುವಾಗಿ ಸ್ವೀಕರಿಸಬಾರದು. ಇದು ಪ್ರಜಾಪ್ರಭುತ್ವ ಉತ್ಸವ. ಚುನಾವಣೆಯಲ್ಲಿ ನಾನು ಮಾತ್ರ ಅಲ್ಲ ಪ್ರತಿಯೊಬ್ಬ ಮತದಾರ, ಬೂತ್ ಕಾರ್ಯಕರ್ತ, ಅಭ್ಯರ್ಥಿಯೂ ಮುಖ್ಯ. ಒಬ್ಬರು ಇಲ್ಲದಿದ್ದರೂ ಚುನಾವಣೆ ನಡೆಯಲ್ಲ ಎಂದು ಮೋದಿ ಹೇಳಿದರು. ಕಳೆದ ಬಾರಿ ಅಧಿಕಾರ ಬಂದ ನೂರು ದಿನದಲ್ಲಿ 370 ರದ್ದು ಮಾಡಿತು. ತ್ರಿವಳಿ ತಲಾಕ್ ರದ್ದು ಮಾಡಲಾಯಿತು. ಬ್ಯಾಂಕ್ ಗಳ ಮರ್ಜ್ ಮಾಡಲಾಯಿತು. ಒಂದು ರಾಷ್ಟ್ರ ಒಂದು ಚುನಾವಣೆ ನಮ್ಮ ಬದ್ಧತೆ. ದೇಶದಲ್ಲಿ ಇದರ ಪರವಾಗಿ ಅನೇಕ ಜನರು ಮುಂದೆ ಬಂದಿದ್ದಾರೆ. ಅನೇಕ ಜನರು ತಮ್ಮ ಸಲಹೆಗಳನ್ನು ಸಮಿತಿಗೆ ನೀಡಿದ್ದಾರೆ. ಈ ವರದಿಯನ್ನು ಕಾರ್ಯಗತಗೊಳಿಸಲು ಸಮರ್ಥರಾದರೆ ದೇಶಕ್ಕೆ ಸಾಕಷ್ಟು ಪ್ರಯೋಜನವಾಗಲಿದೆ ಎಂದರು.
- ಅಂತರ್ಜಾಲ ಮಾಹಿತಿ