ಮೇಘಾಲಯದ ರಬ್ಬರ್ ಕೃಷಿ ಪರಿಶೀಲಿಸಲು 13 ದೇಶಗಳಿಂದ ಆಗಮಿಸಿದ ಪ್ರತಿನಿಧಿಗಳು |

October 19, 2023
10:00 AM
ಅಸ್ಸಾಂ ಸೇರಿದಂತೆ ಈಶಾನ್ಯ ರಾಜ್ಯಗಳಲ್ಲಿ ರಬ್ಬರ್ ಉತ್ಪಾದಿಸಲು ರೈತರನ್ನು ಉತ್ತೇಜಿಸಲು ಕೇಂದ್ರ ಸರ್ಕಾರವು ಸಬ್ಸಿಡಿ ಸೇರಿದಂತೆ ವಿವಿಧ ಆಕರ್ಷಕ ಯೋಜನೆಗಳನ್ನು ಪ್ರಾರಂಭಿಸಿದೆ.ಈ ನಡುವೆ ವಿದೇಶದ ಪ್ರತಿನಿಧಿಗಳೂ ರಬ್ಬರ್‌ ಬೆಳೆಯ ವೀಕ್ಷಣೆಗೆ ಆಗಮಿಸಿದ್ದಾರೆ.

ಮೇಘಾಲಯ  ಪೂರ್ವ ಪಶ್ಚಿಮ ಖಾಸಿ ಜಿಲ್ಲೆಯಲ್ಲಿ 40 ಎಕರೆ ಭೂಮಿಯಲ್ಲಿ ಬೆಳೆದ ರಬ್ಬರ್ ಸಸಿಗಳನ್ನು ಪರಿಶೀಲಿಸಲು 13 ದೇಶಗಳ ಒಟ್ಟು 22 ಪ್ರತಿನಿಧಿಗಳು ಮೇಘಾಲಯಕ್ಕೆ ಆಗಮಿಸಿದ್ದಾರೆ. ಕಾಂಬೋಡಿಯಾ, ಮಲೇಷ್ಯಾ, ಇಂಡೋನೇಷ್ಯಾ , ಥೈಲ್ಯಾಂಡ್ ಸೇರಿದಂತೆ 13 ದೇಶಗಳ ಪ್ರತಿನಿಧಿಗಳುಇದ್ದರು.  

Advertisement

ರಬ್ಬರ್ ಸಸಿ ಉತ್ಪಾದನಾ ಸ್ಥಳದ ಬಳಿಯ ತಾತ್ಕಾಲಿಕ ಸಭಾಂಗಣದಲ್ಲಿ ತಂಡವು ಸಭೆಯನ್ನೂ ನಡೆಸಿತು. ಒಮೆಗಾ ಗ್ರೀನ್ ಸೊಲ್ಯೂಷನ್ಸ್‌ನ ಸಹಾಯಕ ನಿರ್ದೇಶಕ ಎಂ.ವಸಂತಗೇಸನ್ ಸಭೆಯನ್ನು ನಡೆಸಿದರು. ಅಸ್ಸಾಂ ಸೇರಿದಂತೆ ಈಶಾನ್ಯ ರಾಜ್ಯಗಳಲ್ಲಿ ರಬ್ಬರ್ ಉತ್ಪಾದಿಸಲು ರೈತರನ್ನು ಉತ್ತೇಜಿಸಲು ಕೇಂದ್ರ ಸರ್ಕಾರವು ಸಬ್ಸಿಡಿ ಸೇರಿದಂತೆ ವಿವಿಧ ಆಕರ್ಷಕ ಯೋಜನೆಗಳನ್ನು ಪ್ರಾರಂಭಿಸಿದೆ.

ರಬ್ಬರ್ ಉತ್ಪಾದನೆಗೆ ವಿದೇಶಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಭಾರತ ಸರ್ಕಾರವು ದೇಶದಲ್ಲಿ ರಬ್ಬರ್ ಉತ್ಪಾದನೆಯನ್ನು ಹೆಚ್ಚಿಸಲು ಹೊಸ ಯೋಜನೆಗಳನ್ನು ಜಾರಿಗೆ ತಂದಿದೆ. ಒಮೆಗಾ ಗ್ರೀನ್ ಸೊಲ್ಯೂಷನ್ಸ್ ಮೇಘಾಲಯದ ಪೂರ್ವ-ಪಶ್ಚಿಮ ಖಾಸಿ ಹಿಲ್ಸ್ ಜಿಲ್ಲೆಯಲ್ಲಿ ಕಾಮ್ರೂಪ್ ಜಿಲ್ಲೆಯ ಮೇಘಾಲಯ ಗಡಿಯಲ್ಲಿ ನೆಲೆಗೊಂಡಿರುವ ಜಿರಾಂಗ್ ಪ್ರದೇಶದಲ್ಲಿ ದೊಡ್ಡ ರಬ್ಬರ್ ನರ್ಸರಿಯನ್ನು ಸ್ಥಾಪಿಸಿದೆ.

ಇಂತಹ ನರ್ಸರಿಗಳನ್ನು ಸ್ಥಾಪಿಸುವ ಮೂಲಕ ಸಂಸ್ಥೆಯು ಅಸ್ಸಾಂ ಮತ್ತು ಈಶಾನ್ಯದ ಯುವಕರಿಗೆ ಉದ್ಯೋಗಾವಕಾಶಗಳನ್ನು ಒದಗಿಸಿದೆ. ಮುಂದೆ ರಬ್ಬರ್‌ ಬೆಳೆಯ ಮೂಲಕ ರಬ್ಬರ್‌ ಉತ್ಪಾದನೆ ಹೆಚ್ಚಳದ ಕಡೆಗೂ ಗಮನಹರಿಸಿದೆ. ಇದೀಗ ವಿದೇಶದ ಪ್ರತಿನಿಧಿಗಳಿಗೂ ಇಲ್ಲಿನ ರಬ್ಬರ್‌ ಬಗ್ಗೆ ಮಾಹಿತಿ ನೀಡಿದೆ.

22 delegates from 13 countries arrrived in Meghalaya, to inspect rubber seedling grown on 40 acres of land at Umtru in Eastern West Khasi district. Representatives from 13 countries, including Cambodia, Malaysia, Indonesia.

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಮುಂಗಾರು ಮೇ 27 ರಂದು ಆರಂಭ | ನಿಗದಿತ ಸಮಯಕ್ಕಿಂತ ಮೊದಲೇ ಮಳೆಗಾಲ ಆರಂಭ | ಕೇರಳದಲ್ಲಿ ಇಂದು ಮಳೆ ಸಾಧ್ಯತೆ |
May 13, 2025
7:20 AM
by: ದ ರೂರಲ್ ಮಿರರ್.ಕಾಂ
ಈ ರಾಶಿಯವರಿಗೆ, ಮುಟ್ಟಿದ್ದೆಲ್ಲ ಚಿನ್ನ ಆ ರಾಶಿಗಳು ಯಾವುದು ತಿಳಿಯೋಣ
May 13, 2025
6:53 AM
by: ದ ರೂರಲ್ ಮಿರರ್.ಕಾಂ
ಆಪರೇಷನ್ ಸಿಂದೂರ್ ಕೇವಲ ಹೆಸರಲ್ಲ, ಅದು ದೇಶದ ಜನರ ಸಾಮೂಹಿಕ ಭಾವನೆ – ಪ್ರಧಾನಿ ನರೇಂದ್ರ ಮೋದಿ
May 12, 2025
10:14 PM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 12-05-2025 | ಇಂದು ರಾಜ್ಯದಾದ್ಯಂತ ಅಲ್ಲಲ್ಲಿ ಮಳೆಯ ಮುನ್ಸೂಚನೆ
May 12, 2025
2:17 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror

Join Our Group