ಮಿಜೋರಾಂನ ಕೊಲಾಸಿಬ್ ಜಿಲ್ಲೆಯಲ್ಲಿ ಸುಮಾರು 130 ಹೆಕ್ಟೇರ್‌ಗಳಷ್ಟು ಅರಣ್ಯ ಪ್ರದೇಶ ಸುಟ್ಟುಹೋಗಿರುವ ಬಗ್ಗೆ ವರದಿಯಾಗಿದೆ. ಕೊಲಾಸಿಬ್ ಅರಣ್ಯ ವಿಭಾಗದಲ್ಲಿ ಈ ವರ್ಷದಲ್ಲಿ 223 ಕಾಡ್ಗಿಚ್ಚು ಘಟನೆಗಳು ವರದಿಯಾಗಿದೆ. ಈ ಘಟನೆಗಳಿಂದ ಸುಮಾರು 130 ಹೆಕ್ಟೇರ್ ಅರಣ್ಯ ನಾಶವಾಗಿದೆ. ಜನವರಿ 23 ಮತ್ತು ಮಾರ್ಚ್ 13, 2025 ರ ನಡುವೆ ಸಂಗ್ರಹಿಸಲಾದ ಮಾಹಿತಿ ಇದಾಗಿದೆ. ಒಟ್ಟು ಪ್ರದೇಶದಲ್ಲಿ, 115.4 ಹೆಕ್ಟೇರ್‌ಗಳು ಖಾಸಗಿ ಒಡೆತನದ ಭೂಮಿಯಾಗಿದ್ದರೆ, 14.4 ಹೆಕ್ಟೇರ್‌ಗಳು ಅರಣ್ಯ ಮೀಸಲು ಪ್ರದೇಶವಾಗಿದೆ. ಕೃಷಿ ಬಳಿಕ ಸುಡುವ ಅಭ್ಯಾಸವು ಈ ಬೆಂಕಿಗೆ ಕಾರಣವೆಂದು ಗುರುತಿಸಲಾಗಿದೆ.
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel