ಮ್ಯಾನ್ಮಾರ್‌ನಿಂದ ಮಣಿಪುರದ ಗಡಿಗೆ ಅಕ್ರಮವಾಗಿ ಸಾಗಿಸುತ್ತಿದ್ದ ಅಡಿಕೆ(Arecanut) ಸಹಿತ ಒಟ್ಟು 23 ಕಳ್ಳಸಾಗಣೆದಾರರನ್ನು ಅಸ್ಸಾಂ ರೈಫಲ್ಸ್ ವಶಕ್ಕೆ ತೆಗೆದುಕೊಂಡಿದೆ.
ಮ್ಯಾನ್ಮಾರ್‌ನಿಂದ ಅಕ್ರಮವಾಗಿ ಅಡಿಕೆಯನ್ನು ಆಮದು ಮಾಡುವ ದೊಡ್ಡ ಜಾಲವನ್ನು ಅಸ್ಸಾಂ ರೈಫಲ್ಸ್ ಪಡೆ ಬೇಧಿಸಿದೆ. ಮಣಿಪುರದ ಕಾಮ್‌ಜಾಂಗ್ ಜಿಲ್ಲೆಯ ಫೈಕೋಹ್ ಪ್ರದೇಶ ಸೇರಿದಂತೆ ಇತರೆಡೆಯಿಂದ ಒಟ್ಟು 13 ಲಾರಿಗಳನ್ನು ಅದರ ಚಾಲಕರ ಸಹಿತ 23 ಜನ ಕಳ್ಳಸಾಗಣೆದಾರರನ್ನು ವಶಕ್ಕೆ ತೆಗೆದುಕೊಂಡಿದೆ. ಇದೀಗ ಅಸ್ಸಾಂ ರೈಫಲ್ಸ್ ಎಚ್ಚರಿಕೆ ನೀಡಿದ್ದುಅಕ್ರಮ ಸಾಗಾಟದ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಹೇಳಿದೆ.
ಕಳೆದ ಹಲವು ವರ್ಷಗಳಿಂದ ಅಸ್ಸಾಂ ರೈಫಲ್ಸ್ ಮುಖ್ಯವಾಗಿ ಮಣಿಪುರ-ಮ್ಯಾನ್ಮಾರ್ ಗಡಿಯಲ್ಲಿ ನಿಯೋಜಿಸಲಾಗಿದೆ. ಮಣಿಪುರ ಮತ್ತು ಮ್ಯಾನ್ಮಾರ್ 398 ಕಿ.ಮೀ ಹಂಚಿಕೊಂಡಿವೆ.ಈ ಗಡಿಯ ಹಲವು ಕಡೆ ಅಕ್ರಮವಾಗಿ ಅಡಿಕೆ ಹಾಗೂ ಮಾದಕ ವಸ್ತುಗಳ ಅಕ್ರಮ ಸಾಗಾಟ ನಡೆಯುತ್ತಿದೆ. ಇದಕ್ಕಾಗಿ ಈಗ ಗಡಿಯಲ್ಲಿ ಬಿಗಿಭದ್ರತೆ ಮಾಡಲಾಗಿದೆ.
Indian security forces on Wednesday apprehended a total of 23 alleged smugglers along with 601 bags of arecanut smuggling into the border of Manipur from Myanmar.