ಸುಳ್ಯ: ಕರ್ನಾಟಕ, ತಮಿಳುನಾಡು, ಕೇರಳ ಸೇರಿದಂತೆ ಪಶ್ಚಿಮ ಘಟ್ಟ ತಪ್ಪಲಿನ ದಕ್ಷಿಣ ಭಾರತದ ರಾಜ್ಯಗಳಲ್ಲಿ ಕಳೆದ ಒಂದು ವಾರದಲ್ಲಿ ದಾಖಲೆಯ ಮಳೆ ಸುರಿದಿದೆ. ಆದರೆ ತಮಿಳುನಾಡಿನ ಊಟಿ ಯಲ್ಲಿ ಮಹಾಮಳೆಯೇ ಸುರಿದಿದೆ. ಇಲ್ಲಿ ಕೇವಲ 24 ಗಂಟೆಯಲ್ಲಿ 91 ಸೆ.ಮಿ. (910 ಮಿ.ಮಿ.)ಮಳೆ ಬಂದಿದೆ.
ಆ.8ರ ಬೆಳಿಗ್ಗೆ ಏಳಕ್ಕೆ ಕೊನೆಗೊಂಡ 24 ಗಂಟೆಯಲ್ಲಿ ಇಲ್ಲಿ 91.1 ಸೆ.ಮೀ ಮಳೆ ಸುರಿದಿದೆ ಎಂದು ಮಾಧ್ಯಮಗಳು ವರದಿ ಮಾಡಿದೆ. ಇದು ದಕ್ಷಿಣ ಭಾರತದಲ್ಲಿ ಸುರಿದ ದಾಖಲೆಯ ಮಳೆ ಎಂದು ಅಂದಾಜಿಸಲಾಗಿದೆ. ಕಳೆದ ಒಂದು ವಾರದಲ್ಲಿ ದಕ್ಷಿಣ ಭಾರತದಲ್ಲಿ ಹಲವೆಡೆ ಮೇಘ ಸ್ಪೋಟವೇ ಸಂಭವಿಸಿದೆ. ಒಂದು ಗಂಟೆಯಲ್ಲಿ 10 ಸೆ.ಮಿ.(100 ಮಿ.ಮಿ) ಮಳೆ ಸುರಿದರೆ ಅದನ್ನು ಮೇಘ ಸ್ಪೋಟ ಎಂದು ಕರೆಯಲಾಗುತ್ತದೆ.
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement